Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ FIR
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru Rural | ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ FIR

Bengaluru Rural

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ FIR

Public TV
Last updated: January 11, 2026 11:32 pm
Public TV
Share
2 Min Read
Anekal Dental Student Suicide
SHARE

ಆನೇಕಲ್: ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೃತಳನ್ನು ಪರಿಮಳ-ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ(23) ಎಂದು ಗುರುತಿಸಲಾಗಿದ್ದು, ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೆಡಿಯಾಲಜಿ ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಡೆತ್‌ನೋಟ್ ಪತ್ತೆ, ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿಟ್ಟಿದ್ದ ಯಶಸ್ವಿನಿ

ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಮೃತಳ ತಾಯಿ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಯಶಸ್ವಿನಿ ಸಾವಿಗೆ ಕಾಲೇಜು ಉಪನ್ಯಾಸಕರ ನೀಡುತ್ತಿದ್ದ ಕಾರಣ, ಅಲ್ಲದೇ ಕ್ಲಾಸಿನಲ್ಲಿ ಯಶಸ್ವಿನಿ ಬಣ್ಣದ ಬಗ್ಗೆ ಮಾತನಾಡಿ ಟೀಕಿಸಿದ್ದಾರೆ. ಸೆಮಿನಾರ್ ಅಟೆಂಡ್ ಮಾಡಲು ಸಹ ಅವಕಾಶ ನೀಡಿಲ್ಲ, ಕಣ್ಣು ನೋವು ಎಂದಾಗ ಅವಮಾನಿಸಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಉಪನ್ಯಾಸಕರ ವಿರುದ್ಧ ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.

ಏನಿದು ಪ್ರಕರಣ?
ಮೃತ ವಿದ್ಯಾರ್ಥಿನಿ ಬುಧವಾರ (ಜ.7) ಕಣ್ಣು ನೋವಿನಿಂದಾಗಿ ಕಾಲೇಜಿಗೆ ರಜೆ ಹಾಕಿದ್ದರು. ಮಾರನೇ ದಿನ ಕಾಲೇಜಿಗೆ ಹೋದಾಗ ಕಣ್ಣಿಗೆ ಯಾವ ಕಣ್ಣಿನ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡ್ಯಾ ಎಂದು ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕರು ಅವಮಾನಿಸಿದ್ದರು. ಅದಾದ ಬಳಿಕ ಸೆಮಿನಾರ್‌ಗೆ ಅವಕಾಶ ನೀಡಿರಲಿಲ್ಲ. ಜೊತೆಗೆ ರೆಡಿಯಾಲಜಿ ಕೇಸ್ ಕೂಡ ನೀಡದೇ ಕಿರುಕುಳ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ.

ಈ ಕುರಿತು ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಾಲೇಜಿಗೆ ರಜೆ ಹಾಕಿದ್ದಕ್ಕೆ ನನ್ನ ಮಗಳಿಗೆ ಅವಮಾನಿಸಿದ್ದಾರೆ. ಅವಳ ಕಣ್ಣಿಗೆ ಗಾಯ ಆಗಿತ್ತು. ಹೀಗಾಗಿ ನನಗೆ ಹೇಳಿಯೇ ರಜೆ ತೆಗೆದುಕೊಂಡಿದ್ದಾಳೆ. ಯಾವ ಡ್ರಾಪ್ಸ್ ಹಾಕಿದೆ ಅಂತೆಲ್ಲ ವಿದ್ಯಾರ್ಥಿಗಳ ಮುಂದೆ ಕೇಳಿ, ಅವಮಾನಿಸಿದ್ದಾರೆ. ಯಾಕೆ ಅವರಿಗೆ ಮಕ್ಕಳು ಇಲ್ವಾ? ಅವಳು ಇದನ್ನೆಲ್ಲ ನನಗೆ ಹೇಳಿದ್ದಾಳೆ. ಉಪನ್ಯಾಸಕರು ಮಾತ್ರವಲ್ಲದೇ ಕಾಲೇಜು ಆಡಳಿತ ಮಂಡಳಿ ಕೂಡ ಕಿರುಕುಳ ನೀಡಿದ್ದಾರೆ. ಹೀಗಾಗಿ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಅದಾದ ಬಳಿಕ ಸಿಕ್ಕಿದ್ದ ಡೆತ್‌ನೋಟ್‌ನಲ್ಲಿ, ಮೃತ ಯಶಸ್ವಿನಿ ನಾನು ಬದುಕಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ ಥ್ಯಾಂಕ್ಯೂ ಸೋ ಮಚ್ ಎಂದು ಬರೆದುಕೊಂಡಿದ್ದರು.

ಇನ್ನೂ ಕಾಲೇಜಿನಲ್ಲಿ ಮೃತ ಯಶಸ್ವಿನಿ ಅಳುತ್ತಾ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ಸೀನಿಯರ್ ಯಶಸ್ವಿನಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಬರೋದು ಸ್ಲಂನಿಂದ ಕೋತಿಯ ಹಾಗೆ ಇದ್ದೀಯಾ ಎಂದು ಅವಮಾನಿಸಿದ್ದರು. ಈ ಬಗ್ಗೆ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ರಜೆ ಹಾಕಿದ್ದಕ್ಕೆ ಕಾಲೇಜಿನಲ್ಲಿ ಅವಮಾನ – ಕಿರುಕುಳ ತಾಳಲಾರದೇ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

TAGGED:anekalcrimeDental studentಆನೇಕಲ್ಖಾಸಗಿ ಕಾಲೇಜುಚಂದಾಪುರಡೆಂಟಲ್ ವಿದ್ಯಾರ್ಥಿನಿಸೂಸೈಡ್
Share This Article
Facebook Whatsapp Whatsapp Telegram

Cinema news

Mahesh Babus AMB Cinemas
ಯುಗಾದಿಗೆ ಬಂಪರ್ ಆಫರ್ ಕೊಟ್ಟ ಮಹೇಶ್ ಬಾಬು ‘ಎಎಂಬಿ ಸಿನಿಮಾಸ್’
Cinema Latest South cinema Top Stories
Ranveer Singh in Dhurandhar 2
ಜಾಗಿಂಗ್‌ ಮಾಡುತ್ತಾ ‘ಧುರಂಧರ್’‌ ಸಿನಿಮಾ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ, ಫಿನ್‌ಲ್ಯಾಂಡ್‌ ಅಧ್ಯಕ್ಷ
Bollywood Cinema Latest Main Post World
I Want Nayanthara AIADMK MPs Dig At MK Stalins Initiative Sparks Row
ನನಗೆ ನಯನತಾರ ಬೇಕು, ಕನಸು ಈಡೇರಿಸುವಿರಾ – ಎಐಎಡಿಎಂಕೆ ಸಂಸದನ ಪ್ರಶ್ನೆ
Cinema Latest National South cinema Top Stories
darshan 1
ದರ್ಶನ್ ಒಳಸಂದರ್ಶನಕ್ಕೆ ಕೋರ್ಟ್ ಅಸ್ತು – ಅಂತಿಮ ನಿರ್ಧಾರ ಜೈಲು ಅಧೀಕ್ಷಕರಿಗೆ ಬಿಟ್ಟದ್ದು ಎಂದ ನ್ಯಾಯಾಲಯ
Bengaluru City Cinema Court Districts Karnataka Latest Top Stories

You Might Also Like

LPG Commercial Cylinder
Bengaluru City

ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಕೇವಲ 10%

Public TV
By Public TV
28 minutes ago
Haveri Tractor Driver Death
Crime

ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ -‌ ಟ್ರೇಲರ್ ಮಧ್ಯೆ ಸಿಲುಕಿ ಚಾಲಕ ದುರ್ಮರಣ

Public TV
By Public TV
2 hours ago
Kolar Head Constable Heart Arttack
Districts

ಹೃದಯಾಘಾತದಿಂದ ಹೆಡ್‌ ಕಾನ್ಸ್‌ಟೇಬಲ್ ಸಾವು

Public TV
By Public TV
2 hours ago
PRAJWAL REVANNA 1
Bengaluru City

ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Public TV
By Public TV
3 hours ago
Delhi Palam Residential Building Fire
Latest

Delhi | ಪಾಲಂನ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ – 8 ಮಂದಿ ಸಾವು

Public TV
By Public TV
3 hours ago
KIM JONG UN
Latest

ಉ.ಕೊರಿಯಾ ಚುನಾವಣೆ: 99.93% ಮತ ಪಡೆದು ಮತ್ತೆ ಭರ್ಜರಿ ಗೆಲುವು ಸಾಧಿಸಿದ ಕಿಮ್‌ ಜಾಂಗ್‌ ಉನ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?