ಮನೆಯವರನ್ನು ಒಲಿಸುವ ಮೂಲಕ ಧನುಷ್ (Dhanush) ಎರಡನೇ ಬಾರಿ ಬಿಗ್‌ಬಾಸ್ (Bigg Boss) ಮನೆಯ ನಾಯಕನಾಗಿ ಫಿನಾಲೆ ತಲುಪಿದ್ದಾರೆ.
ಗಿಲ್ಲಿ ಮತ್ತು ರಾಶಿಕಾ ಅವರನ್ನು ಸೋಲಿಸಿ ಅಂತಿಮ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಶ್ವಿನಿ (Ashwini) ಮತ್ತು ಧನುಷ್ ಆಯ್ಕೆಯಾಗಿದ್ದರು. ಕೊನೆಯ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದ ಅಶ್ವಿನಿ ಗೌಡ ಮತ್ತು ಧನುಷ್‌ಗೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದರು.
ಮೇಜಿನಲ್ಲಿ ಪಜಲ್ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಮೇಜಿನ ಮೇಲ್ಭಾಗದಲ್ಲಿ ಚಾಕು ಇರುವ ಪಜಲ್ ತುಂಡಿರುತ್ತದೆ. ಅದನ್ನು ಮೇಜಿನ ಕೆಳಭಾಗಕ್ಕೆ ತಂದು ಹೊರತೆಗೆಯಬೇಕು. ಇದರ ಮಧ್ಯೆ ಸಿಗುವ ಪಜಲ್ ತುಂಡುಗಳನ್ನು ಪಕ್ಕಕ್ಕೆ ಸರಿಸುತ್ತಾ, ಚಾಕು ಇರುವ ತುಂಡನ್ನು ಕೆಳಭಾಗಕ್ಕೆ ತರಬೇಕು. ಈ ವೇಳೆ ಪಜಲ್ ತುಂಡುಗಳನ್ನು ತಿರುಗಿಸುವಂತಿಲ್ಲ ಮತ್ತು ಸ್ಥಳಾಂತರಿಸುವಂತಿಲ್ಲ. ಟಾಸ್ಕ್ ಪೂರ್ಣಗೊಳಿಸಿ ಹಗ್ಗವನ್ನು ಮೊದಲು ಕತ್ತರಿಸುವ ಸ್ಪರ್ಧಿ ವಿನ್ನರ್ ಆಗುವಂತೆ ಟಾಸ್ಕ್ ಅನ್ನು ರೂಪಿಸಲಾಗಿತ್ತು. ಇದನ್ನೂ ಓದಿ: ಉಣ್ಕೊಂಡ್ ತಿನ್ಕೊಂಡ್ ಇರೋಕೆ ಬಿಗ್‌ಬಾಸ್ ಮನೆಗೆ ಬಂದಿದ್ಯಾ? – ಗಿಲ್ಲಿ ವಿರುದ್ಧ ಅಶ್ವಿನಿ ಕೆಂಡಾಮಂಡಲ

ಬಿಗ್‌ಬಾಸ್ ಸೂಚನೆಯ ಅನ್ವಯ ಇಬ್ಬರೂ ಮನೆಯ ಉಳಿದ ಸದಸ್ಯರ ಬಳಿ ಹೋಗಿ ತನಗೆ ವೋಟ್ ಹಾಕುವಂತೆ ಮನವಿ ಮಾಡಿದರು. ಕೊನೆಗೆ ಸದಸ್ಯರು ಮುಂದೆ ಬಂದು ಕಾರಣ ನೀಡಿ ಯಾಕೆ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ವಾದಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಅಶ್ವಿನಿಗೆ ರಕ್ಷಿತಾ, ರಘು, ಧ್ರುವಂತ್ ಮತ ಹಾಕಿದರೆ ಧನುಷ್‌ಗೆ ಕಾವ್ಯ, ಸ್ಪಂದನಾ, ರಾಶಿಕಾ, ಗಿಲ್ಲಿ ಒಪ್ಪಿಗೆ ಸೂಚಿಸಿದರು. 4 ಮತಗಳು ಧನುಷ್‌ಗೆ ಬಿದ್ದ ಕಾರಣ ಧನುಷ್ ಎರಡನೇ ಬಾರಿ ಮನೆಯ ನಾಯಕನಾಗಿ ಆಯ್ಕೆಯಾದರು.

