ಉಡುಪಿ: ಇಂದು (ಡಿ.7) ಉಡುಪಿಯ ಶ್ರೀಕೃಷ್ಣ ಮಠಕ್ಕೆ (Krishna Mutt) ನಟ, ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಭೇಟಿ ನೀಡಲಿದ್ದಾರೆ.
ಭೇಟಿ ವೇಳೆ ಲಕ್ಷಕಂಠ ಗೀತಾ ಪಾರಾಯಣ ಸಮರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಮಧ್ಯಾಹ್ನ 2:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿರುವ ಪವನ್ ಕಲ್ಯಾಣ್ ಅವರು 3:45ಕ್ಕೆ ಉಡುಪಿ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಬಳಿಕ 4 ಗಂಟೆಗೆ ಕೃಷ್ಣ ಮಠಕ್ಕೆ ತೆರಳಿ ಶ್ರೀ ಕೃಷ್ಣನ ದರ್ಶನ ಪಡೆಯಲಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಕೇಸ್ – ಐವರು ಅರೆಸ್ಟ್, ಮೂವರಿಗಾಗಿ ಶೋಧ
ರಾಜಾಂಗಣದಲ್ಲಿ ನಡೆಯಲಿರುವ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಯೋಜನೆಯ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 7:55ಕ್ಕೆ ಮಂಗಳೂರು ವಿಮಾನ ನಿಲ್ದಾಣ ಮೂಲಕ ವಾಪಸ್ಸಾಗಲಿದ್ದಾರೆ.
ನ.8ರಂದು ಪೇಜಾವರ ಶ್ರೀಗಳಿಂದ ಗೀತೋತ್ಸವ ಉದ್ಘಾಟನೆಗೊಂಡಿತ್ತು. ಲಕ್ಷ ಕಂಠ ಗೀತಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.ಇದನ್ನೂ ಓದಿ: ಫೈನಾನ್ಸ್‌ನ 3 ಲಕ್ಷಕ್ಕೂ ಅಧಿಕ ಹಣ ಆನ್‌ಲೈನ್ ಗೇಮ್‌ಗೆ ಬಳಕೆ – ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ

