ಮುಂಬೈ: ಮದುವೆ ಮಂಟಪದಲ್ಲಿ ವರನಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗುತ್ತಿದ್ದ ವ್ಯಕ್ತಿಯನ್ನು ವೆಡ್ಡಿಂಗ್ ಡ್ರೋನ್ 2 ಕಿ.ಮೀ ವರೆಗೆ ಬೆನ್ನಟ್ಟಿದ ಪ್ರಸಂಗ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಘೋ ಜಿತೇಂದ್ರ ಬಕ್ಷಿ ಎಂಬಾತ ವೇದಿಕೆಯ ಮೇಲೆ ವರನಿಗೆ ಮೂರು ಬಾರಿ ಇರಿದು ನಂತರ ಪರಾರಿಯಾಗಿದ್ದಾನೆ. ಇದನ್ನೂ ಓದಿ: 500 ಕೆಜಿ ಲಡ್ಡು, 5 ಲಕ್ಷ ರಸಗುಲ್ಲಾ; ಬಿಹಾರದಲ್ಲಿ ವಿಜಯೋತ್ಸವಕ್ಕೆ ಎನ್‌ಡಿಎ ಸಿದ್ಧತೆ
ವೆಡ್ಡಿಂಗ್ ಚಿತ್ರೀಕರಿಸುತ್ತಿದ್ದ ವಿಡಿಯೋಗ್ರಾಫರ್ ತಕ್ಷಣವೇ ಕಾರ್ಯಪ್ರವೃತ್ತನಾಗಿ ತನ್ನ ಡ್ರೋನ್ ಮೂಲಕ ದಾಳಿಕೋರನನ್ನು ಬೆನ್ನಟ್ಟಿದ. ದಾಳಿಕೋರ ಮತ್ತು ಇನ್ನೊಬ್ಬ ವ್ಯಕ್ತಿ ಬೈಕ್‌ನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸುಮಾರು 2 ಕಿಮೀ ವರೆಗೆ ಡ್ರೋನ್ ಮೂಲಕ ಬೆನ್ನಟ್ಟಲಾಯಿತು.
ಪೊಲೀಸರು ಡ್ರೋನ್ ದೃಶ್ಯಾವಳಿಗಳನ್ನು ಪಡೆದು ಆರೋಪಿಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ. ಡಿಜೆ ನೃತ್ಯದ ಸಮಯದಲ್ಲಿ ನಡೆದ ಸಣ್ಣ ಜಗಳದಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಗಾಯಗೊಂಡಿರುವ ವರ ಸಜಲ್ ರಾಮ್ ಸಮುದ್ರ (22) ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: Delhi Explosion | ಕೆಂಪು ಕೋಟೆ ಅಲ್ಲ, ಅಯೋಧ್ಯೆ, ವಾರಣಾಸಿ ಉಗ್ರರ ಟಾರ್ಗೆಟ್ ಆಗಿತ್ತು – ರಹಸ್ಯ ಸ್ಫೋಟ

