– ಬ್ಲಾಸ್ಟ್‌ಗಾಗಿಯೇ ರೆಡಿಯಾಗಿತ್ತು ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳ ಹಿಟ್‌ಲಿಸ್ಟ್
ನವದೆಹಲಿ: ಉಗ್ರರ ಹಿಟ್‌ಲಿಸ್ಟ್ ದೆಹಲಿ (Delhi) ಆಗಿರಲಿಲ್ಲ ಬದಲಾಗಿ ಉಗ್ರರ ಟಾರ್ಗೆಟ್ ಬೇರೆಯೇ ಆಗಿತ್ತು ಅನ್ನೋದು ಸ್ಫೋಟಕ ಸಂಗತಿ ತನಿಖೆ ವೇಳೆ ಬಯಲಾಗಿದೆ.
ಹೌದು. ಕೆಂಪು ಕೋಟೆ ಬಳಿ ಕಾರು ಸ್ಫೋಟ (Delhi car Explosion) ಪ್ರಕರಣದ ಕುರಿತ ತನಿಖೆ ವೇಳೆ ಈ ಆಘಾತಕಾರಿ ಅಂಶ ರಿವೀಲ್ ಆಗಿದೆ. ಉಗ್ರರ ಗುರಿ ಅಸಲಿಗೆ ಕೆಂಪು ಕೋಟೆ ಆಗಿರಲಿಲ್ಲ. ಅವರ ಟಾರ್ಗೆಟ್ ಇದ್ದಿದ್ದು, ಉತ್ತರ ಪ್ರದೇಶದ (Uttar Pradesh) ಧಾರ್ಮಿಕ ಸ್ಥಳಗಳು ಅನ್ನೋದು ಬಹಿರಂಗಗೊಂಡಿದೆ. ಇದನ್ನೂ ಓದಿ: ನಿಧಾನವಾಗಿ ಚಲಿಸಿದ್ದ ಐ20 ಕಾರು – ದೆಹಲಿ ಸ್ಫೋಟದ ದೃಶ್ಯ ಲಭ್ಯ
ಶ್ರೀರಾಮನಗರಿ ಅಯೋಧ್ಯೆ, ವಿಶ್ವನಾಥನ ವಾರಣಾಸಿ (Varanasi, Ayodhya) ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಇತ್ತಯ. ಅಯೋಧ್ಯೆ, ವಾರಾಣಸಿ ಗುರಿಯಾಗಿಸಿ ಉಗ್ರರು ಸಂಚು ರೂಪಿಸಿದ್ದು, ದೊಡ್ಡಮಟ್ಟದಲ್ಲಿ ಸ್ಫೋಟ ನಡೆಸಲು ಉದ್ದೇಶಿಸಲಾಗಿತ್ತು.
ಅಂದ್ಹಾಗೆ ಅಯೋಧ್ಯೆ ದೇವಸ್ಥಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್ 25ಕ್ಕೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣಕ್ಕೆ ಮುಂದಾಗಿದ್ದ ಬೆನ್ನಲ್ಲೇ ಸಂಚು ಬಯಲಾಗಿದೆ. ಟೆರರ್ ಡಾಕ್ಟರ್ ಶಾಹೀನ್ ಶಾಹಿದ್, ಸ್ಲೀಪರ್ ಸೆಲ್‌ಗಳನ್ನ ಇದಕ್ಕಾಗಿಯೇ ಸಕ್ರಿಯಗೊಳಿಸಿದ್ದಳು. ಎಟಿಎಸ್, ಪೊಲೀಸ್ ವಿಚಾರಣೆ ವೇಳೆ ಆಸ್ಪತ್ರೆ, ಜನಸಂದಣಿ ಏರಿಯಾಗಳಲ್ಲಿ ಸ್ಪೋಟಿಸೋದು ಇವರ ಸಂಚು ಆಗಿತ್ತು ಅನ್ನೋದು ತಿಳಿದು ಬಂದಿದೆ. ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳನ್ನ ಲಿಸ್ಟ್ ರೆಡಿ ಮಾಡಲಾಗ್ತಿತ್ತು ಅಂತ ಡಾ. ಶಾಹೀನ್ ಸತ್ಯ ಕಕ್ಕಿದ್ದಾಳೆ. ಇದನ್ನೂ ಓದಿ: Delhi Blast | 8 ಮೃತದೇಹಗಳ ಗುರುತು ಪತ್ತೆ – 2 ಶವಗಳು ಉಗ್ರರದ್ದು ಅನ್ನೋ ಶಂಕೆ; ಒಂದು ಶವದ ತಲೆ ಮಿಸ್ಸಿಂಗ್!
ಎನ್‌ಐಎ ತನಿಖೆ ಹಾದಿ ಹೇಗಿದೆ?
* ಕಾರಿನೊಂದಿಗೆ ಆರೋಪಿ ಕೆಂಪುಕೋಟೆ ಹೇಗೆ ತಲುಪಿದ?
* ತಪಾಸಣೆಯ ಸಮಯದಲ್ಲಿ ಕಾರನ್ನು ಏಕೆ ನಿಲ್ಲಿಸಲಿಲ್ಲ?
* ಕಾರು ಮೂರು ಗಂಟೆ ಪಾರ್ಕಿಂಗ್ ಸ್ಥಳದಲ್ಲಿಯೇ ಇತ್ತು?
* ಪಾರ್ಕಿಂಗ್ ಏರಿಯಾದ ಅಟೆಂಡರ್ ಏನು ಮಾಡುತ್ತಿದ್ದ?
* ಮೊದಲು ಸ್ಫೋಟಕಗಳನ್ನು ಹೇಗೆ ಮತ್ತು ಎಲ್ಲಿಗೆ ತರಲಾಯ್ತು?
* ಜನದಟ್ಟಣೆ ಸ್ಥಳದಲ್ಲಿ ಸ್ಫೋಟಕ ಮರೆಮಾಚಿ ಹೇಗೆ ಸಾಗಿಸಲಾಯ್ತು?
* ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಪೂರೈಕೆಯ ಮೂಲ ಯಾವುದು?
* ಟೆರರ್ ಮಾಡ್ಯೂಲ್‌ಗೆ ಹಣ ಎಲ್ಲಿಂದ ಬರುತ್ತಿತ್ತು?
* ಘಟನೆಯ ನಿಜವಾದ ಮಾಸ್ಟರ್‌ಮೈಂಡ್ ಯಾರು?
* ಸ್ಫೋಟದ ಹಿಂದೆ ದೊಡ್ಡ ಪಿತೂರಿ ಇದೆಯಾ..?
* ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಇದ್ಯಾ?
* ಗುರಿಯಾಗಿದ್ದು ಜನಸಮೂಹವೇ ಅಥವಾ ನಿರ್ದಿಷ್ಟ ಸ್ಥಳವೇ?
* ಉಮರ್ ಒಬ್ಬನೇ ಸ್ಫೋಟ ಮಾಡಿದ್ದಾನಾ? ಬೇರೆ ಯಾರಾದ್ರೂ ಇದ್ದಾರಾ?
* ಅಲ್ ಫಲಾಹ್ ವಿವಿಯ ಇತರರು ಉಗ್ರ ಗುಂಪಿನ ಭಾಗವಾಗಿರಬಹುದೇ? ಅನ್ನೋ ಆಯಾಮಗಳಲ್ಲಿ ಎನ್‌ಐಎ ತನಿಖೆ ನಡೆಸುತ್ತಿದೆ.


