Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಲ್ಲವನ್ನೂ ಕಳ್ಕೊಂಡೆ, ಪತ್ನಿ, ಮಗನೊಂದಿಗೆ ಮಾತಾಡೋಕು ಕಷ್ಟವಾಗುತ್ತೆ – ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತ್ಯಂಜಯನಾದ ರಮೇಶ್ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಎಲ್ಲವನ್ನೂ ಕಳ್ಕೊಂಡೆ, ಪತ್ನಿ, ಮಗನೊಂದಿಗೆ ಮಾತಾಡೋಕು ಕಷ್ಟವಾಗುತ್ತೆ – ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತ್ಯಂಜಯನಾದ ರಮೇಶ್ ಮಾತು

Latest

ಎಲ್ಲವನ್ನೂ ಕಳ್ಕೊಂಡೆ, ಪತ್ನಿ, ಮಗನೊಂದಿಗೆ ಮಾತಾಡೋಕು ಕಷ್ಟವಾಗುತ್ತೆ – ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತ್ಯಂಜಯನಾದ ರಮೇಶ್ ಮಾತು

Public TV
Last updated: November 4, 2025 4:11 pm
Public TV
Share
2 Min Read
Air India Plane Crash Survivor vishwas kumar ramesh
SHARE

– ಅಪಘಾತದ ಬಳಿಕ ಪಿಟಿಎಸ್‌ಡಿ ಎಂಬ ಕಾಯಿಲೆಯಿಂದ ಬಳಲುತ್ತಿರುವ ವಿಶ್ವಾಸ್ ಕುಮಾರ್ ರಮೇಶ್

ನವದೆಹಲಿ: ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಪತ್ನಿ, ಮಗನೊಂದಿಗೆ ಮಾತಾಡೋಕೆ ಕಷ್ಟವಾಗುತ್ತದೆ ಎಂದು ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad Air India Clash) ಬದುಕಿದ್ದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಂದರ್ಶನವೊಂದಲ್ಲಿ ಮಾತನಾಡಿದ ಅವರು, ಈ ದುರಂತದಲ್ಲಿ ನಾನು ನನ್ನ ಸಹೋದರ ಅಜಯ್‌ನನ್ನು ಕಳೆದುಕೊಂಡೆ. ನಾನೊಬ್ಬ ಅದೃಷ್ಟಶಾಲಿ ಪವಾಡ ಸದೃಶವಾಗಿ ಪಾರಾಗಿದ್ದೇನೆ. ಆದರೆ ಇಂದಿಗೂ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇನೆ. ಎಲ್ಲವನ್ನೂ ಕಳೆದುಕೊಂಡೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

ದುರಂತದ ಬಳಿಕ ನಾನು ಇಂಗ್ಲೆಂಡ್‌ನಲ್ಲಿರುವ ಲೀಸೆಸ್ಟರ್‌ಗೆ ನಮ್ಮ ಮನೆಗೆ ಮರಳಿದೆ. ಇಂದಿಗೂ ದುರಂತದಲ್ಲಿ ನಡೆದಿದ್ದ ಎಲ್ಲವೂ ನನ್ನನ್ನು ಕಾಡುತ್ತಿವೆ. ಒಬ್ಬಂಟಿಯಾಗಿದ್ದೇನೆ, ಕೋಣೆಯಲ್ಲಿ ಯಾವಾಗಲೂ ಒಬ್ಬನೇ ಇರಬೇಕು ಎಂದು ಅನಿಸುತ್ತೆ. ಹೆಂಡತಿ, ಮಗನೊಂದಿಗೆ ಮಾತಾಡಲು ಕಷ್ಟವಾಗುತ್ತದೆ. ಕಳೆದ ನಾಲ್ಕು ತಿಂಗಳಿನಿಂದ ನನ್ನ ತಾಯಿ ಪ್ರತಿದಿನ ಮನೆ ಹೊರಗೆ ಕುಳಿತು ನನ್ನ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ನಾನು ಬೇರೆಯವರೊಂದಿಗೆ ಮಾತಾಡುವುದಿಲ್ಲ, ಹೆಚ್ಚು ಮಾತಾಡೋಕೆ ಆಗಲ್ಲ, ನಾನು, ನನ್ನ ಕುಟುಂಬದ ಎಲ್ಲರೂ ಮಾನಸಿಕವಾಗಿ ಬಳಲುತ್ತಿದ್ದೇವೆ. ನಿತ್ಯವು ನೋವನ್ನು ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Vishwas Kumar Ramesh the sole survivor of the Air India plane crash

ಇನ್ನೂ ದುರಂತದ ಬಳಿಕ ನನಗೆ ಆಘಾತಕಾರಿ ಒತ್ತಡದ ಅಸ್ವಸ್ಥತೆಯ ಸಮಸ್ಯೆ (ಪಿಟಿಎಸ್‌ಡಿ) (ದುರಂತ ನಡೆದ ಬಳಿಕ ಉಂಟಾಗುವ ಮಾನಸಿಕ ಆರೋಗ್ಯದ ಸಮಸ್ಯೆ) ಇರುವುದು ಗೊತ್ತಾಗಿದೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ನೋವು ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅದಲ್ಲದೇ ನನಗೆ ಸರಿಯಾಗಿ ನಡೆಯಲು ಬರುವುದಿಲ್ಲ, ಹೆಂಡತಿಯ ಸಹಾಯ ಬೇಕು. ಕಾಲು, ಭುಜ, ಮೊಣಕಾಲು ಮತ್ತು ಬೆನ್ನಿನಲ್ಲಿ ನಿರಂತರವಾಗಿ ನೋವು ಅನುಭವಿಸುತ್ತಿದ್ದೇನೆ ಎಂದಿದ್ದಾರೆ.

ಇದೇ ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 242 ಜನರ ಪೈಕಿ 241 ಜನ ಸಾವನ್ನಪ್ಪಿದ್ದು, ವಿಶ್ವಾಸ್ ಕುಮಾರ್ ರಮೇಶ್ ಪವಾಡ ಸದೃಶ್ಯ ಪಾರಾಗಿದ್ದರು. ಗಾಯಗೊಂಡಿದ್ದ ಅವರು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಜೂನ್ 17ರಂದು ಡಿಸ್ಚಾರ್ಜ್ ಆಗಿದ್ದರು. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ರಮೇಶ್ ಅವರಿಗೆ 22 ಲಕ್ಷ ರೂ. ಪರಿಹಾರ ಧನ ನೀಡಿದೆ.ಇದನ್ನೂ ಓದಿ:ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ

TAGGED:AhmedabadAir India Plane Carshplane crashVishwas Kumar Rameshಅಹಮದಾಬಾದ್ಏರ್ ಇಂಡಿಯಾವಿಮಾನ ದುರಂತವಿಶ್ವಾಸ್‌ ಕುಮಾರ್‌ ರಮೇಶ್
Share This Article
Facebook Whatsapp Whatsapp Telegram

Cinema news

Zee Short Film Contest
ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಜೀ ಕಿರುಚಿತ್ರ ಸ್ಪರ್ಧೆ
Cinema Latest Top Stories
Krishna Vamshi serial
ಕೃಷ್ಣವಂಶಿ: ನಾಚಿಕೆ ಕೃಷ್ಣನ ಜೊತೆ ವಂಶಿ ಡೇಟ್ ಫಿಕ್ಸ್
Cinema Latest Sandalwood Top Stories
Whispers of the River
ವಿಸ್ಪರ್ಸ್ ಆಫ್ ದಿ ರಿವರ್: ಸ್ಯಾಂಡಲ್‌ವುಡ್‌ನಲ್ಲೊಂದು ವಿಭಿನ್ನ ಪ್ರಯತ್ನ
Cinema Latest Sandalwood Top Stories
Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post

You Might Also Like

Ashok Pattan
Bengaluru City

ಮೊದಲ ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ: ಅಶೋಕ್ ಪಟ್ಟಣ್

Public TV
By Public TV
16 minutes ago
Vijayapura Kidney Donate
Districts

9 ತಿಂಗಳಿನಿಂದ ಬಳಲುತ್ತಿದ್ದ ಸೊಸೆಗೆ ಕಿಡ್ನಿ ದಾನ ಮಾಡಿದ ಅತ್ತೆ

Public TV
By Public TV
40 minutes ago
Murugesh Nirani
Kalaburagi

ಕಾಂಗ್ರೆಸ್ ಸರ್ಕಾರ ಗೊಂದಲ ಬಿಟ್ಟು ಸೂಕ್ತ ಆಡಳಿತ ನಡೆಸಲಿ: ಮುರುಗೇಶ್ ನಿರಾಣಿ

Public TV
By Public TV
43 minutes ago
shivamogga murder
Crime

ಶಿವಮೊಗ್ಗದಲ್ಲಿ ಅನ್ಯಕೋಮಿನ ಅಪ್ರಾಪ್ತರಿಂದ SSLC ವಿದ್ಯಾರ್ಥಿ ಹತ್ಯೆ – ಇಬ್ಬರು ಅಪ್ರಾಪ್ತರ ಬಂಧನ

Public TV
By Public TV
1 hour ago
MP RENUKACHARYA
Bengaluru City

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಪತ್ರ ಬರೆದಿರೋದು ಬಂಡಾಯದ ಸೂಚನೆ – ರೇಣುಕಾಚಾರ್ಯ

Public TV
By Public TV
2 hours ago
shepherds bengaluru
Bengaluru City

ಕುರಿ ಕಾಯುವವರನ್ನ ಕುರಿಗಾಹಿಗಳ ನಿಗಮಕ್ಕೆ ಅಧ್ಯಕ್ಷನಾಗಿ ಮಾಡಬೇಕು – ಸಿಎಂಗೆ ಕುರಿಗಾಹಿಗಳ ಮನವಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?