– ತೇಜಸ್ವಿಯಾದವ್‌ರನ್ನ ಸಿಎಂ ಅಭ್ಯರ್ಥಿ ಮಾಡಲು ಕಾಂಗ್ರೆಸ್ ಬಯಸಿರಲಿಲ್ಲ
ಪಾಟ್ನಾ: ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ ಮತ್ತು ಕಾಂಗ್ರೆಸ್ (Pakistan And Congress) ಎರಡೂ ಚೇತರಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಬಿಹಾರ ವಿಧಾನಸಭಾ ಚುನಾವಣಾ (Bihar Election 2025) ಪ್ರಚಾರದ ಭಾಗವಾಗಿ ಅರಾಹ್‌ನಲ್ಲಿಂದು ನಡೆದ ರ‍್ಯಾಲಿಯಲ್ಲಿ ಮಾತನಾಡಿ, ಗಾಂಧಿ ಕುಟುಂಬವನ್ನು ʻರಾಜಪರಿವಾರʼ ಎಂದು ಕರೆದರು. ಅತ್ತ ಪಾಕಿಸ್ತಾನದಲ್ಲಿ ಸ್ಫೋಟಗಳು ಸಂಭವಿಸುತ್ತಿದ್ರೆ ಕಾಂಗ್ರೆಸ್‌ನ ʻರಾಜಪರಿವಾರʼ ಇಲ್ಲಿ ನಿದ್ರೆ ಕಳೆದುಕೊಂಡಿತ್ತು. ಇಲ್ಲಿಯವರೆಗೆ ಪಾಕಿಸ್ತಾನ-ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ ಎಂದು ಹೇಳಿದರು.

ಮುಂದುವರಿದು.. ಸಂವಿಧಾನದ 370ನೇ ವಿಧಿ ರದ್ದು ಮಾಡ್ತೀವಿ ಅನ್ನೋದು ಮೋದಿಯ ಗ್ಯಾರಂಟಿ. ಅದು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಷ್ಠಾನಗೊಂಡಿದ್ದು, ಭಾರತದ ಸಂವಿಧಾನದೊಂದಿಗೆ ನಡೆಯುತ್ತಿದೆ. ಅಲ್ಲದೇ ಉಗ್ರರನ್ನ ತಮ್ಮ ನೆಲದಲ್ಲೇ ಬಗ್ಗು ಬಡಿಯುವುದಾಗಿಯೂ ಪ್ರತಿಜ್ಞೆ ಮಾಡಿದ್ವಿ. ಆಪರೇಷನ್ ಸಿಂಧೂರ (Operation Sindoor) ಮೂಲಕ ಆ ಗ್ಯಾರಂಟಿಯನ್ನೂ ಪೂರೈಸಿದೆವು. ಇದು ಇಡೀ ರಾಷ್ಟ್ರವೇ ಹೆಮ್ಮೆಪಡುವಂತೆ ಮಾಡಿತು.
ಸಿಎಂ ಅಭ್ಯರ್ಥಿ ಮಾಡಲು ಕಾಂಗ್ರೆಸ್ ಬಯಸಿರಲಿಲ್ಲ
ಇನ್ನೂ ಆರ್‌ಜೆಡಿ ಜೊತೆಗಿನ ಮೈತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ತೇಜಸ್ವಿ ಯಾದವ್ ಅವರನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ಯಾವತ್ತಿಗೂ ಬಯಸಿರಲಿಲ್ಲ. ಸಿಎಂ ಅಭ್ಯರ್ಥಿಯನ್ನ ಹೆಸರಿಸುವಂತೆ ತೇಜಸ್ವಿ ಯಾದವ್ ಅವರಿಗೆ ಒತ್ತಾಯಿಸಿದ್ದರು. ಆದ್ರೆ ತೇಜಸ್ವಿಯಾದವ್ ಈ ಅವಕಾಶವನ್ನ ಕಳೆದುಕೊಳ್ಳಲಿಲ್ಲ. ಕಾಂಗ್ರೆಸ್ ತಲೆಗೆ ಬಂದೂಕು ಇಟ್ಟು ಮುಖ್ಯಮಂತ್ರಿ ಹುದ್ದೆಯನ್ನ ಕದ್ದಿದೆ ಎಂದು ತಿವಿದರು.
पूरे बिहार में एनडीए के पक्ष में जबरदस्त लहर है। यहां नवादा में अपने परिवारजनों का जोश और उत्साह देखकर मन भावविभोर है।
https://t.co/th5PAKpRuz
— Narendra Modi (@narendramodi) November 2, 2025
ಎರಡು ಮಿತ್ರಪಕ್ಷಗಳ ನಡುವೆ ದೊಡ್ಡ ಸಂಘರ್ಷವಿದೆ. ಏಕೆಂದ್ರೆ ಕಾಂಗ್ರೆಸ್‌ನ ಬೇಡಿಕೆಗಳನ್ನೂ ಆರ್‌ಜೆಡಿ ಚುನಾವಣಾ ಪ್ರಣಾಳಿಕೆಯಲ್ಲಿ ಪರಿಗಣಿಸಿಲ್ಲ. ಹೀಗಾಗಿ ಚುನಾವಣೆ ಬಳಿಕ ಅವರು ಸರ್ಕಾರ ರಚನೆ ಮಾಡ್ತಾರೆ ಅನ್ನೋ ನಂಬಿಕೆ ನನಗಿಲ್ಲ ಅಂತ ಹೇಳಿದರು.

