ಶೀತ, ಕೆಮ್ಮಿಗೆ ರಾಮಬಾಣ ಶುಂಠಿ ಕಷಾಯ

Public TV
1 Min Read
Ginger Kashaya

ಳೆಗಾಲದಲ್ಲಿ (Rainy Season) ಕಾಡುವ ಸಮಸ್ಯೆ ಎಂದರೆ ಅದು ಶೀತ, ಕೆಮ್ಮು, ನೆಗಡಿ. ಇದು ಮಕ್ಕಳು, ದೊಡ್ಡವರೆನ್ನದೇ ಎಲ್ಲರನ್ನು ಕಾಡಿಸುತ್ತದೆ. ಈ ಶೀತ (Cold), ಕೆಮ್ಮು (Cough) ಕೆಲವೊಮ್ಮೆ ಬೀಡದೇ ಕಾಡಿ, ಯಾವ ಕೆಲಸವನ್ನು ಮಾಡಲು ಸಾಧ್ಯವಾಗದಂತೆ ಮಾಡುತ್ತದೆ. ಇಂತಹ ಸಮಸ್ಯೆಗಳನ್ನು ವೈದ್ಯರ ಔಷಧಿಯಿಲ್ಲದೇ ಮನೆಯಲ್ಲೇ ನೈಸರ್ಗಿಕವಾಗಿ ಥಟ್‌ ಅಂತಾ ಶಮನ ಮಾಡುವ ಅತಿ ಸುಲಭದ ಶುಂಠಿ ಕಷಾಯ (Ginger Kashaya) ಮಾಡುವ ವಿಧಾನವನ್ನು ನಾವು ತಿಳಿಸಿಕೊಡುತ್ತೇವೆ.

Ginger Kashaya 2

ಹೌದು, ಈ ಕಷಾಯವನ್ನು ಮಕ್ಕಳು, ವಯಸ್ಸಾದವರು ಎಲ್ಲರೂ ಮಾಡಿ ಕುಡಿಯಬಹುದು. ಇದು ಶೀತ, ಕೆಮ್ಮು, ನೆಗಡಿ, ಗಂಟಲು ಕೆರೆತಕ್ಕೆ ಹೇಳಿ ಮಾಡಿಸಿದ ಮನೆಮದ್ದಾಗಿದೆ. ಈ ಕಷಾಯವನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತಿಳಿಯೋಣ..

ಬೇಕಾಗಿರುವ ಸಾಮಾಗ್ರಿಗಳು:
ಅರಶಿಣ ಪುಡಿ -1/2 ಟೀಸ್ಲೂನ್‌
ಶುಂಠಿ ಪುಡಿ – 1/2 ಟೀಸ್ಲೂನ್‌
ಹಸಿ ಶುಂಠಿ – 1/2 ಇಂಚು
ನಿಂಬೆ ರಸ – 1 ಚಮಚ
ಲವಂಗ – 2
ದಾಲ್ಚಿನ್ನಿ ಪುಡಿ – 1/2 ಟೀಸ್ಲೂನ್‌
ಜೇನು ತುಪ್ಪ – 1 ಚಮಚ

Ginger Kashaya 1

ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ 2 ಗ್ಲಾಸ್‌ ತೆಗೆದುಕೊಳ್ಳಬೇಕು. ಅದಕ್ಕೆ ಅರಶಿಣ ಪುಡಿ, ಶುಂಠಿ ಪುಡಿ, ಹಸಿ ಶುಂಠಿ, ಲವಂಗ ಹಾಗೂ ದಾಲ್ಚಿನ್ನಿ ಪುಡಿ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿಕೊಳ್ಳಬೇಕು. ಈ ಕಷಾಯವನ್ನು ಬಿಸಿ ಬಿಸಿಯಾಗಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಹೀಗೆ ಮಾಡುವುದರಿಂದ ಕೆಮ್ಮು, ಶೀತ, ನೆಗಡಿ ಹಾಗೂ ಗಂಟಲು ಕೆರೆತ ಸಂಪೂರ್ಣ ನಿವಾರಣೆಯಾಗುತ್ತದೆ.

Share This Article