ಮೇ 26ರಿಂದ 2 ದಿನ ಮೋದಿ ಗುಜರಾತ್ ಪ್ರವಾಸ – 53,414 ಕೋಟಿ ರೂ. ವೆಚ್ಚದ ಯೋಜನೆಗಳ ಉದ್ಘಾಟನೆ

Public TV
1 Min Read
PM Modi Poland Visit

ಗಾಂಧೀನಗರ: ಮೇ 26 ರಿಂದ 2 ದಿನಗಳ ಕಾಲ ಪ್ರಧಾನಿ ಮೋದಿ (PM Modi) ಗುಜರಾತ್ (Gujarat) ಪ್ರವಾಸ ಕೈಗೊಂಡಿದ್ದು, 53,414 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಆಪರೇಷನ್ ಸಿಂಧೂರ ಬಳಿಕ ಪ್ರಧಾನಿ ಮೋದಿ (PM Modi) ಮೊದಲ ಬಾರಿಗೆ ಗುಜರಾತ್‌ಗೆ ಭೇಟಿ ನೀಡಲಿದ್ದು, ದಾಹೋದ್, ಭುಜ್ ಮತ್ತು ಗಾಂಧೀನಗರದಲ್ಲಿ ಇಂಧನ, ಪೆಟ್ರೋಕೆಮಿಕಲ್ಸ್ ಇಲಾಖೆ, ರಸ್ತೆ, ವಿವಿಧ ಇಲಾಖೆಗಳ ಕಟ್ಟಡ, ನೀರು ಸರಬರಾಜು ಇಲಾಖೆ ಸೇರಿದಂತೆ ಒಟ್ಟು 53,414 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಇದನ್ನೂ ಓದಿ:ಬೆಂಗಳೂರಿನಲ್ಲಿ ಕೊರೋನಾಗೆ ಮೊದಲ ಬಲಿ

ದಾಹೋದ್‌ನಲ್ಲಿರುವ ರೋಲಿಂಗ್ ಸ್ಟಾಕ್ ಕಾರ್ಯಾಗಾರದಲ್ಲಿ ರೈಲ್ವೆ ಸಚಿವಾಲಯವು 21,405 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಲೋಕೋಮೋಟಿವ್ ಉತ್ಪಾದನಾ ಘಟಕ, ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಮೊದಲ 9000 ಹೆಚ್‌ಪಿ ಲೋಕೋಮೋಟಿವ್ ಎಂಜಿನ್ ಲೋರ್ಕಾಪಣೆ ಮಾಡಲಿದ್ದಾರೆ.

ಜೊತೆಗೆ, ಆನಂದ್ ಗೋದ್ರಾ ಮಹಾನಾ-ಪಾಲನ್‌ಪುರ ಮತ್ತು ರಾಚಕೋಟ್ ಪದ್ಮತಿಯಾ ರೈಲು ಮಾರ್ಗ, ಸಬರಮತಿ-ದೋಟಾರ್ ರೈಲು ಮಾರ್ಗದ 107 ಕಿ.ಮೀ. ವಿದ್ಯುದ್ದೀಕರಣ ಮತ್ತು ಕಲೋಲ್-ಕಾಡಿ-ಕಟೋಸನ್ ರೈಲು ಮಾರ್ಗದ ಗೇಜ್ ಪರಿವರ್ತನೆ ಸೇರಿದಂತೆ 2,287 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳು ಸೇರಿ ಒಟ್ಟು 23,692 ಕೋಟಿ ರೂ.ಗಳ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

ದಾಹೋದ್‌ನಲ್ಲಿರುವ ರೈಲ್ವೆ ಉತ್ಪಾದನಾ ಘಟಕವು 10,000 ಜನರಿಗೆ ಉದ್ಯೋಗವನ್ನು ಒದಗಿಸಲಿದ್ದು, ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲಿದೆ. ಇಲ್ಲಿ ತಯಾರಾಗುವ ಲೋಕೋಮೋಟಿವ್ ಎಂಜಿನ್ 4,600 ಟನ್ ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮುಂದಿನ 10 ವರ್ಷಗಳಲ್ಲಿ ಸರಿಸುಮಾರು 1,200 ಎಂಜಿನ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: 25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

Share This Article