ಚಂಡೀಗಢ: ಪಾಕಿಸ್ತಾನದಿಂದ ಬರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಲು ಅಮೃತಸರದ(Amritsar) ಸ್ವರ್ಣ ದೇವಾಲಯದ(Golden Temple) ಆವರಣದೊಳಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಅಪರೂಪದ ಅನುಮತಿಯನ್ನು ಪಡೆಯಲಾಗಿದೆ ಎಂದು ಭಾರತೀಯ ಸೇನೆಯ ವಾಯು ರಕ್ಷಣಾ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ’ಕುನ್ಹಾ(Sumer Ivan D’Cunha) ತಿಳಿಸಿದ್ದಾರೆ.
ಏ. 22ರಂದು ಪಹಲ್ಗಾಮ್‌ನಲ್ಲಿ(Pahalgam) ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆರಂಭಿಸಿದ ಆಪರೇಷನ್ ಸಿಂಧೂರಕ್ಕೆ(Operation Sindoor) ಪ್ರತಿಯಾಗಿ ಅಮೃತಸರವನ್ನು ಗುರಿಯಾಗಿಸಿ ಪಾಕ್ ಸೇನೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಈ ದಾಳಿಯನ್ನು ಸೇನೆ ವಿಫಲಗೊಳಿಸಿತ್ತು. ಮುಂಬರುವ ಅಪಾಯಗಳನ್ನು ಅರಿತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಅನುಮತಿ ಪಡೆದಿದೆ. ಇದನ್ನೂ ಓದಿ: 7 ತಿಂಗಳಲ್ಲಿ 25 ಮದುವೆ; ಅಮಾಯಕರಿಗೆ ಲಕ್ಷಾಂತರ ಹಣ ವಂಚಿಸಿದ್ದ ಖತರ್ನಾಕ್ ಲೇಡಿ ಅರೆಸ್ಟ್
ಸೇನಾ ವಾಯು ರಕ್ಷಣಾ ಅಧಿಕಾರಿಗಳು ಗೋಲ್ಡನ್ ಟೆಂಪಲ್ ನಾಯಕರ ಜೊತೆಗೆ ಮಾತುಕತೆ ನಡೆಸಿ ಸಂಭಾವ್ಯ ಬೆದರಿಕೆ ಬಗ್ಗೆ ಮಾಹಿತಿ ನೀಡಿದರು. ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುವ ಗೋಲ್ಡನ್ ಟೆಂಪಲ್ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಿಸಲು ನಮಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಅನುಮತಿ ಅವಕಾಶ ಮಾಡಿಕೊಟ್ಟರು ಎಂದು ವಿವರಿಸಿದರು. ಇದನ್ನೂ ಓದಿ: War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್
ಪಾಕಿಸ್ತಾನವು ಗಡಿಯ ಸಮೀಪವಿರುವ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಬಹುದು ದಾಳಿ ನಡೆಸುವ ಸಾಧ್ಯತೆ ಇರುವ ಕಾರಣ ಈಗ ಸೇನೆ ಪೂರ್ವ ತಯಾರಿ ಮಾಡಿಕೊಂಡಿದೆ ಎಂದು ಹೇಳಿದರು.