ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ಒಬ್ಬರಾಗಿರುವ ದಿಶಾ ಪಟಾನಿ (Disha Patani) ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್. ಜೊತೆಗೆ ಯಾವಾಗಲೂ ಕ್ರೇಜ್ ಕ್ರಿಯೇಟ್ ಮಾಡೋದ್ರಲ್ಲಿ, ಮಾದಕ ನೋಟದ ಫೋಟೋ ಹಂಚಿಕೊಂಡು ಹಲ್‌ಚಲ್ ಎಬ್ಬಿಸೋದ್ರಲ್ಲಿ ಮುಂಚೂಣಿಯಲ್ಲಿರುವ ನಟಿ. ಈಗ ಹೊಸ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
32 ವರ್ಷದ ದಿಶಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬೆಡ್‌ರೂಮಿನಲ್ಲಿ ಬಿಕಿನಿ (Bikini) ಧರಿಸಿರೋ ಸೆಲ್ಫಿ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಇದರೊಂದಿಗೆ ಆನೆ ಮುಂದೆ ಕುಳಿತು ಫೋಟೋ ತೆಗೆಯುತ್ತಿರುವ, ತಮ್ಮ ಮುದ್ದಿನ ಬೆಕ್ಕು, ನಾಯಿಗಳ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಆದ್ರೆ ಕೊನೆಯಲ್ಲಿ ಕನ್ನಡದ ʻಸಪ್ತ ಸಾಗರದಾಚೆಯೆಲ್ಲೋʼ ಸಿನಿಮಾ ನೆನಪಿಸುವಂತೆ `ಹಾಗೇ ಸುಮ್ಮನೆ ಸಾಗರದ ಮುಂದೆ ಕೂತು, ಆ ಅಲೆಗಳ ಸದ್ದು ಕೇಳಬೇಕು’ ಎಂದು ಕೈಬರಹದ ಚೀಟಿಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ನಟಿ ದಿಶಾ ಪಟಾಣಿ ಮೈಮಾಟ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಪಡ್ಡೆ ಹುಡುಗರ ನಿದ್ದೆಯಂತೂ ಹಾಳಾಗಿದೆ.
ಸಿನಿಮಾಗಳಲ್ಲಿ ಅಲ್ಲದೇ ತನ್ನ ಹಾಟ್ ಬ್ಯೂಟಿ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಬೆಳೆಸಿಕೊಳ್ಳುವಲ್ಲಿ ದಿಶಾ ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ಆಗಾಗ್ಗೆ ಸೋಶಿಯಲ್ ಮೀಡಿಯಾಗೆ ಬೆಂಕಿ ಹೆಚ್ಚುವಂತಹ ಫೋಟೊಗಳನ್ನ ಹಂಚಿಕೊಳ್ತಾರೆ. ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾದಲ್ಲಿ ದಿಶಾ ಪಟಾನಿ ಕಾಣಿಸಿಕೊಂಡಿದ್ದು, ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಸ್ಕ್ರೀನ್ ಟೈಮ್ ಸ್ವಲ್ಪ ಕಡಿಮೆಯಾದರೂ ಉತ್ತಮವಾಗಿ ಅಭಿನಯಿಸಿದ್ದಾರೆ.