ಮಹಾಕುಂಭಮೇಳದ (Kumbh Mela 2025) ನೀಲಿ ಕಂಗಳ ಚೆಲುವೆ ಮೊನಲಿಸಾ (Monalisa Bhosle) ನಟಿಯಾಗಿ ಕ್ಯಾಮೆರಾ ಮುಂದೆ ಬರಲಿ ಎಂದು ಕಾಯುತ್ತಿದ್ದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಬಾಲಿವುಡ್‌ನಲ್ಲಿ ಮತ್ತೊಂದು ಬಿಗ್ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ


ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾವೊಂದರಲ್ಲಿ ನಾಯಕಿ ಪಾತ್ರಕ್ಕೆ ಮೊನಲಿಸಾಗೆ ಆಫರ್ ನೀಡಿದ್ದರು. ಆ ನಂತರ ಓರ್ವ ಯುವತಿ ಮೇಲಿನ ಅತ್ಯಾಚಾರ ಆರೋಪದ ಕೇಸ್‌ನಲ್ಲಿ ನಿರ್ದೇಶಕನನ್ನು ಬಂಧಿಸಲಾಗಿತ್ತು. ಮೊನಲಿಸಾ ನಟಿಯಾಗುವ ಅವಕಾಶಕ್ಕೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಒಂದೊಳ್ಳೆಯ ಅವಕಾಶ ಅವರನ್ನು ಅರಸಿ ಬಂದಿದೆ.
View this post on Instagram
ಮಹಾಕುಂಭಮೇಳದಲ್ಲಿ ಮೊನಲಿಸಾ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾತ್ರೋ ರಾತ್ರಿ ಈ ನೀಲಿ ಕಂಗಳ ಚೆಲುವೆ ಆನ್‌ಲೈನ್‌ನಲ್ಲಿ ಸ್ಟಾರ್ ಆದರು. ಹಾಗಾಗಿ ಮೊನಲಿಸಾ ಮೇಲೆ ಪಡ್ಡೆಹುಡುಗರಿಗೆ ಸಖತ್ ಕ್ರೇಜ್ ಇದೆ.

