ಬೆಂಗಳೂರು | ʻಆಪರೇಷನ್‌ ಸಿಂಧೂರʼ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ – ಟೆಕ್ಕಿ ಅರೆಸ್ಟ್‌

Public TV
1 Min Read
Whitefield Police

ಬೆಂಗಳೂರು: ʻಆಪರೇಷನ್‌ ಸಿಂಧೂರʼ (Operation Sindoor) ವಿಜಯೋತ್ಸವ ಆಚರಣೆ ವೇಳೆ ಪಾಕ್‌ ಪರ ಘೋಷಣೆ ಕೂಗಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನ ಬಂಧಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‌ನ (Bengaluru Whitefield) ಪ್ರಶಾಂತ್ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Operation Sindoor

ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ. ಛತ್ತಿಸ್‌ಗಢ (Chhattisgarh) ಮೂಲದ ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿ ಕೆಲಸ ಮಾಡಿಕೊಂಡಿದ್ದ, ವೈಟ್‌ಫೀಲ್ಡ್‌ನ ಪ್ರಶಾಂತ್‌ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಶುಭಾಂಶು ಶುಕ್ಲಾ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಈ ವೇಳೆ ಆತಂಕಗೊಂಡ ಕೆಲ ಪಿಜಿ ಯುವಕರು ಹೊರಬಂದು ನೋಡಿದಾಗ ಶುಭಾಂಶು ಬಾಲ್ಕನಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ವೈಟ್‌ಫೀಲ್ಡ್‌ ಪೊಲೀಸರು (Whitefield Police) ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

ವಿಚಾರಣೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರೋದು ದೃಢಪಟ್ಟಿದೆ, ನಂತರ ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: Tumakuru | ಗಣಿ ಬಾಧಿತ ಪ್ರದೇಶಕ್ಕೆ 1,200 ಕೋಟಿ ರೂ. ಹಂಚಿಕೆ: ಪರಮೇಶ್ವರ್

Share This Article