ಫ್ಯಾನ್ಸ್‌ಗೆ ಗುಡ್ ನ್ಯೂಸ್- ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಚಿತ್ರದ ಬಗ್ಗೆ ಸಿಕ್ತು ಅಪ್‌ಡೇಟ್

Public TV
1 Min Read
prashanth neel

‘ದೇವರ’ (Devara) ಸಿನಿಮಾ ಬಳಿಕ ಜ್ಯೂ.ಎನ್‌ಟಿಆರ್ (Jr. NTR) ಅವರು ‘ಕೆಜಿಎಫ್’ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel)  ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಅನಾವರಣ ಮಾಡಲು ದಿನಾಂಕ ನಿಗದಿ ಆಗಿದೆ. ಇದನ್ನೂ ಓದಿ:ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

SALAAR Prashanth Neel 2

ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಎಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ತಾರಕ್‌ ಕಾಣಿಸಿಕೊಳ್ತಿದ್ದಾರೆ. ಹೀಗಿರುವಾಗ ಈ ಚಿತ್ರದ ಕಥೆಗೆ ತಕ್ಕಂತೆ ಕ್ಯಾಚಿ ಟೈಟಲ್ ಅನ್ನೇ ಇಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಮೂಲಗಳ ಪ್ರಕಾರ, ಇದೇ ಮೇ 20ರಂದು ಚಿತ್ರದ ಟೈಟಲ್ ಮತ್ತು ಜ್ಯೂ.ಎನ್‌ಟಿಆರ್ ಪಾತ್ರದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ತಂಡದ ಕಡೆಯಿಂದ ಅಫಿಷಿಯಲ್‌ ಅಪ್‌ಡೇಟ್‌ ಸಿಗುವವರೆಗೂ ಕಾಯಬೇಕಿದೆ.ಇದನ್ನೂ ಓದಿ:ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

jr ntr

ಮುಂದಿನ ವರ್ಷ ಜನವರಿ 9ರಂದು ಜ್ಯೂ.ಎನ್‌ಟಿಆರ್ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಅದೇ ದಿನ ವಿಜಯ್ ದಳಪತಿ ನಟನೆಯ ‘ಜನ ನಾಯಗನ್’ ಸಿನಿಮಾ ಕೂಡ ರಿಲೀಸ್ ಆಗಲಿದೆ. ಸ್ಟಾರ್ ನಟರ ಈ ಎರಡು ಚಿತ್ರಗಳ ನಡುವೆ ಕ್ಲ್ಯಾಶ್ ನಡೆಯಲಿದೆಯಾ ಎಂದು ಫ್ಯಾನ್ಸ್ ಚರ್ಚಿಸುತ್ತಿದ್ದಾರೆ.

Share This Article