Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುದುಕಾಗುತ್ತಿರುವ ಚೀನಾ – ಮದುವೆಯಿಂದ ದೂರ ಉಳಿಯುತ್ತಿರುವ ಯುವಜನತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮುದುಕಾಗುತ್ತಿರುವ ಚೀನಾ – ಮದುವೆಯಿಂದ ದೂರ ಉಳಿಯುತ್ತಿರುವ ಯುವಜನತೆ!

Latest

ಮುದುಕಾಗುತ್ತಿರುವ ಚೀನಾ – ಮದುವೆಯಿಂದ ದೂರ ಉಳಿಯುತ್ತಿರುವ ಯುವಜನತೆ!

Public TV
Last updated: February 18, 2025 4:13 pm
Public TV
Share
3 Min Read
CHINA MARRIAGE
SHARE

– ಮದುವೆ ಪ್ರೋತ್ಸಾಹಕ್ಕೆ ಚೀನಾ ಸರ್ಕಾರದ ಸರ್ಕಸ್!

ಭಾರತದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾದಲ್ಲಿ ಮದುವೆಯ ಸಂಖ್ಯೆಯಲ್ಲಿ (China’s Marriage Rate) ತೀವ್ರ ಕುಸಿತ ಕಂಡುಬರುತ್ತಿದೆ. ಇದು ಜನನ ದರ ಕುಸಿತಕ್ಕೆ ಕಾರಣವಾಗುತ್ತಿದೆ.

2024 ರಲ್ಲಿ ಚೀನೀ ಸಂಸ್ಕೃತಿಯಲ್ಲಿ ಹೆರಿಗೆಗೆ ಶುಭ ವರ್ಷ ಎಂದು 2023ರಲ್ಲಿ ಅನೇಕ ಮದುವೆಗಳು ನಡೆದಿದ್ದವು. ಇದು 2024ರಲ್ಲಿ ಜನನಗಳ ಹೆಚ್ಚಳಕ್ಕೆ ಕಾರಣವಾಗಿತ್ತು. ಇನ್ನೂ 2024 ರಲ್ಲಿ ಚೀನೀ ಕ್ಯಾಲೆಂಡರ್‌ನಲ್ಲಿ ಮದುವೆಗೆ (Marriage) ಅಶುಭ ವರ್ಷ ʻವಿಧವೆ ವರ್ಷʼ ಎಂಬ ಪ್ರತೀತಿಯಿಂದ ಜನರು ಮದುವೆಯಾಗುವುದನ್ನು ಕೈಬಿಟ್ಟಿದ್ದರು ಎಂಬ ವದಂತಿ ಇದೆ. 2024 ರಲ್ಲಿ ಚೀನಾದಲ್ಲಿ ವಿವಾಹಗಳ ಸಂಖ್ಯೆ 60.1 ಲಕ್ಷಕ್ಕೆ ಇಳಿಕೆಯಾಗಿದೆ. ಇದು 2023ಕ್ಕೆ ಹೋಲಿಸಿದರೆ 20.5% ರಷ್ಟು ಕುಸಿತವಾಗಿದೆ ಎಂದು ವರದಿಯಾಗಿದೆ.

ಚೀನಾದಲ್ಲಿ ಮದುವೆಯ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವೇನು?
ಚೀನಾದಲ್ಲಿ ವಿವಾಹ ದರಗಳ ಕುಸಿತದ ಹಿಂದೆ ಬಹುತೇಕ ಸಾಮಾಜಿಕ ಕಾರಣಗಳಿವೆ. ಯುವ ವಯಸ್ಕರ ಸಂಖ್ಯೆಯಲ್ಲಿ ಇಳಿಕೆ, ಇತ್ತೀಚಿನ ಪದವೀಧರರ ಆರ್ಥಿಕ ದೃಷ್ಟಿಕೋನ, ವಿವಾಹದ ಬಗ್ಗೆ ಗಂಡು ಹೆಣ್ಣುಗಳಲ್ಲಿ ಇರುವ ವಿವಿಧ ಕಲ್ಪನೆಗಳು ಮದುವೆಯ ಕುಸಿತಕ್ಕೆ ಕಾರಣವಾಗಿವೆ.

CHINA MARRIAGE 1

ಚೀನಾದ 2010ರ ಜನಗಣತಿಯ ಪ್ರಕಾರ, ಮಹಿಳೆಯೊಬ್ಬರ ಸರಾಸರಿ ಮದುವೆಯ ವಯಸ್ಸು 24 ವರ್ಷ, 2000ದಲ್ಲಿ 23, 2022ರಲ್ಲಿ 27 ಆಗಿದೆ. ಗಣತಿಯ ಪ್ರಕಾರ 2022 ರಲ್ಲಿ ಚೀನಾದ ಯುವತಿಯರು ಸಾಂಪ್ರದಾಯಿಕ ವಿವಾಹದಿಂದ ದೂರ ಸರಿಯುತ್ತಿರುವ ಪ್ರವೃತ್ತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಮೂಲಕ ಚೀನಾದಲ್ಲಿ ಮದುವೆಯಾಗುವವರ ಸಂಖ್ಯೆ ಸತತ 9 ವರ್ಷಗಳಿಂದ ಕುಸಿದಿದೆ ಎಂಬುದು ಅಂಕಿ ಅಂಶಗಳಲ್ಲಿ ಬಯಲಾಗಿದೆ.

ವಿವಾಹಗಳ ಕುಸಿತದಿಂದ ಜನನ ದರಗಳ ಮೇಲೆ ಪರಿಣಾಮ
ವಿವಾಹಗಳ ಸಂಖ್ಯೆಯಲ್ಲಿನ ತೀವ್ರ ಕುಸಿತವು ಚೀನಾದ ಜನನ ಪ್ರಮಾಣದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಪೂರ್ವ ಏಷ್ಯಾದ ಉಳಿದ ಭಾಗಗಳಂತೆ ಚೀನಾದಲ್ಲಿ ವಿವಾಹೇತರ ಜನನಗಳ ವಿರುದ್ಧ ಸಾಮಾಜಿಕ ನಿಷೇಧದಂತ ಆಚರಣೆಗಳು ಜಾರಿಯಲ್ಲಿವೆ. ಇದರಿಂದ ವಿವಾಹ ಪೂರ್ವ ಜನನಗಳಿಗೆ ಅವಕಾಶ ಇಲ್ಲದಿರುವುದು ಜನನ ದರಗಳ ಕುಸಿತಕ್ಕೆ ಕಾರಣವಾಗಿವೆ.

ಸರ್ಕಾರದಿಂದ ಮದುವೆಗೆ ಪ್ರೋತ್ಸಾಹ!
ಮದುವೆ, ಪ್ರೀತಿ, ಫಲವತ್ತತೆ ಮತ್ತು ಕುಟುಂಬದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನಗಳನ್ನು ಹೊಂದುವಂತೆ ʻಪ್ರೀತಿಯ ಶಿಕ್ಷಣʼಒದಗಿಸುವಂತೆ ಅಧಿಕಾರಿಗಳು ಕಳೆದ ವರ್ಷ ಚೀನಾದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದರು.

CHINA MARRIAGE 2

ವಿಚ್ಛೇದನಗಳನ್ನು ತಡೆಗಟ್ಟಲು ನಾಗರಿಕ ವ್ಯವಹಾರಗಳ ಸಚಿವಾಲಯವು ವಿವಾಹ ನೋಂದಣಿ ಕರಡು ತಿದ್ದುಪಡಿಯನ್ನು ಮಾಡಿತ್ತು. ಇದು ʻಸಂತೋಷ ಮತ್ತು ಸಾಮರಸ್ಯದ ಕುಟುಂಬಗಳನ್ನು ನಿರ್ಮಿಸಲುʼ ಒಂದು ಪ್ರಮುಖ ನಿರ್ಧಾರ ಎಂದು ಸಚಿವಾಲಯ ಹೇಳಿತ್ತು.

ಈ ಪರಿಷ್ಕರಣೆಯು ವಿಚ್ಛೇದನಕ್ಕೆ 30 ದಿನಗಳ ಕೂಲಿಂಗ್-ಆಫ್ ಅವಧಿಯನ್ನು ಸಹ ಒಳಗೊಂಡಿದೆ. ಆ ಸಮಯದಲ್ಲಿ ತಮ್ಮ ಅರ್ಜಿಯನ್ನು ದಂಪತಿ ಹಿಂಪಡೆಯಬಹುದು. ಇದು ನೋಂದಾವಣೆ ಕಚೇರಿಗಳಲ್ಲಿ ಮಾಡಿದ ವಿಚ್ಛೇದನ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ. ಹಠಾತ್ ವಿಚ್ಛೇದನಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಪರಿಷ್ಕರಣೆ ಹೊಂದಿತ್ತು.

2016 ರಲ್ಲಿ ಚೀನಾ ಒಂದು ಮಗು ನೀತಿಯನ್ನು ರದ್ದುಗೊಳಿಸಿತ್ತು. ಈಗ, ಸರ್ಕಾರವು ಮಹಿಳೆಯರು ಮೂರು ಮಕ್ಕಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಿದೆ. ಸ್ಥಳೀಯ ಸರ್ಕಾರಗಳು ಸಹ ಜನಸಂಖ್ಯೆಯ ವಿಸ್ತರಣೆಯನ್ನು ಸುಗಮಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಮತ್ತು ನೀತಿಗಳನ್ನು ರೂಪಿಸುತ್ತಿವೆ. ಎರಡನೇ ಮತ್ತು ಮೂರನೇ ಮಕ್ಕಳಿಗೆ ಉಚಿತ ಐವಿಎಫ್ ಸೌಲಭ್ಯಗಳು ಮತ್ತು ಸಬ್ಸಿಡಿಗಳನ್ನು ಒದಗಿಸಲಾಗುತ್ತಿದೆ.
‌
ಇತ್ತೀಚಿಗೆ ಮದುವೆಯನ್ನು ಪ್ರೋತ್ಸಾಹಿಸಲು ದಂಪತಿಗೆ ಪ್ರೋತ್ಸಾಹಧನವನ್ನು ಸಹ ಚೀನಾ ಸರ್ಕಾರ (China Government) ನೀಡುತ್ತಿದೆ ಎಂದು ವರದಿಯಾಗಿದೆ.

ಮುದುಕಾಗುತ್ತಿರುವ ಚೀನಾ!
ಚೀನಾವು 1.4 ಶತಕೋಟಿ ಜನಸಂಖ್ಯೆಯೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಗೆ ವೇಗವಾಗಿ ವಯಸ್ಸಾಗುತ್ತಿದೆ. ಚೀನಾದ 1980-2015ರ ಒಂದು ಮಗು ನೀತಿ ಮತ್ತು ತ್ವರಿತ ನಗರೀಕರಣದಿಂದಾಗಿ ಜನನ ಪ್ರಮಾಣ ದಶಕಗಳಿಂದ ಕುಸಿತ ಕಂಡಿತ್ತು. ಮುಂಬರುವ ದಶಕದಲ್ಲಿ ಸುಮಾರು 300 ಮಿಲಿಯನ್ ಚೀನಿಯರು ಅಂದರೆ ಬಹುತೇಕ ಇಡೀ ಯುಎಸ್ ಜನಸಂಖ್ಯೆಗೆ ಸಮಾನಾದ ಜನಸಂಖ್ಯೆಯ ಜನರು ನಿವೃತ್ತಿ ಹೊಂದುವ ನಿರೀಕ್ಷೆಯಿದೆ!

ದೀರ್ಘಾವಧಿಯ ಜೀವಿತಾವಧಿ ಮತ್ತು ಕ್ಷೀಣಿಸುತ್ತಿರುವ ಫಲವತ್ತತೆ ದರಗಳಿಂದಾಗಿ ಚೀನಾದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಜನಸಂಖ್ಯೆಯು 2040 ರ ವೇಳೆಗೆ 28% ತಲುಪುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

TAGGED:chinaChina GovernmentChina's Marriage Ratemarriage
Share This Article
Facebook Whatsapp Whatsapp Telegram

Cinema news

Bharti Singh Haarsh Limbachiyaa
ಹಾಸ್ಯನಟಿ ಭಾರ್ತಿ ಸಿಂಗ್‌, ಹರ್ಷ್‌ ಲಿಂಬಾಚಿಯಾ ದಂಪತಿಗೆ 2ನೇ ಮಗು ಜನನ
Bollywood Cinema Latest Top Stories
Koragajja Kannada Film 1
ಕೊರಗಜ್ಜ ಚಿತ್ರಕ್ಕಿದೆ ಮೆಸ್ಸಿ ಹಾಡು ಕ್ರಿಯೇಟ್ ಮಾಡಿದ ತಂಡದ ಲಿಂಕ್
Cinema Latest TV Shows
Ranya Rao 1
ಕಾಫಿಪೋಸಾ ಆದೇಶ ಪ್ರಶ್ನಿಸಿದ್ದ ರನ್ಯಾಗೆ ಮತ್ತೆ ಶಾಕ್ – ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru City Cinema Court Districts Karnataka Latest Top Stories
Vijay Deverakonda
ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಅಪ್‌ಡೇಟ್‌
Cinema Latest South cinema

You Might Also Like

Yellow Line Metro
Bengaluru City

ಇದೇ ಭಾನುವಾರ ಹಳದಿ ಮಾರ್ಗದ ಮೆಟ್ರೋ ಸೇವೆ ಒಂದು ಗಂಟೆ ಲೇಟ್‌

Public TV
By Public TV
5 hours ago
Tilak Varma Hardik Pandya
Cricket

ಪಾಂಡ್ಯ ಸ್ಫೋಟಕ ಫಿಫ್ಟಿ – ಭಾರತಕ್ಕೆ 30 ರನ್‌ಗಳ ಜಯ

Public TV
By Public TV
5 hours ago
Anegondi Bridge collapse
Court

ಆನೆಗೊಂದಿ ಸೇತುವೆ ಕುಸಿತ ಕೇಸ್ – ರಾಜ್ಯ ಸರ್ಕಾರ ಬಡ್ಡಿ ಸಹಿತ 5.63 ಕೋಟಿ ಪರಿಹಾರ ನೀಡಬೇಕಿದ್ದ ಆದೇಶ ರದ್ದು: ಹೈಕೋರ್ಟ್‌

Public TV
By Public TV
5 hours ago
CET Exam
Bengaluru City

ಸಿಸಿಟಿವಿ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ: ಕೆಇಎ

Public TV
By Public TV
6 hours ago
SUPREME COURT
Court

ಕೇಂದ್ರದ ಪೂರ್ವಾನುಮತಿ ಇಲ್ಲದೆ ಅರಣ್ಯಭೂಮಿ ಗುತ್ತಿಗೆ ನೀಡಲು ಸಾಧ್ಯವಿಲ್ಲ: ಸುಪ್ರೀಂ

Public TV
By Public TV
6 hours ago
GBA
Bengaluru City

ಜಿಬಿಎ 5 ಪಾಲಿಕೆ ಚುನಾವಣೆ – ಸರ್ಕಾರದಿಂದ ಮೀಸಲಾತಿ ಮಾರ್ಗಸೂಚಿ ಪ್ರಕಟ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?