ಅನಂತ್ ಸರ್‌ಗೆ ಪದ್ಮಭೂಷಣ ಸಿಕ್ಕಿರೋದು ವೈಯಕ್ತಿಕವಾಗಿ ನನಗೆ ಸಿಕ್ಕಷ್ಟು ಖುಷಿಯಿದೆ: ಕಿಚ್ಚ

Public TV
1 Min Read
sudeep 1 3

ನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬೆನ್ನಲ್ಲೇ ಚಿತ್ರರಂಗದ ಅನೇಕರು ನಟನಿಗೆ ಶುಭಹಾರೈಸಿದ್ದಾರೆ. ಈಗ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಫಿನಾಲೆ ವೇದಿಕೆಯಲ್ಲಿ ಸುದೀಪ್ ಅವರು ಅನಂತ್ ನಾಗ್‌ಗೆ ಶುಭಹಾರೈಸಿದ್ದಾರೆ. ನಮ್ಮ ಪ್ರೀತಿಯ ಅನಂತ್ ನಾಗ್ ಸರ್ (Anant Nag) ಅವರಿಗೆ ಈ ಪ್ರಶಸ್ತಿ ಸಿಕ್ಕಿರೋದು ವೈಯಕ್ತಿಕವಾಗಿ ನನಗೆ ಸಿಕ್ಕಷ್ಟು ಖುಷಿ ಆಗಿದೆ ಎಂದು ಸುದೀಪ್‌ (Sudeep) ಮಾತನಾಡಿದ್ದಾರೆ. ಇದನ್ನೂ ಓದಿ:BBK 11: ಅಂತೂ ಇಂತೂ ಹನುಮಂತನ ಮದುವೆಗೆ ಸಿಕ್ತು ಗ್ರೀನ್‌ ಸಿಗ್ನಲ್‌- ಹುಡುಗಿ ಯಾರು?

ANANTH NAG

‘ಬಿಗ್‌ ಬಾಸ್‌’ ವೇದಿಕೆಯಲ್ಲಿ ಮಾತನಾಡಿದ ಸುದೀಪ್‌, ನನಗೆ ಖುಷಿಯಾದ ವಿಚಾರ ಏನೆಂದರೆ ನನ್ನ ಪ್ರೀತಿ ಆದಂತಹ ಅನಂತ್ ನಾಗ್ ಸರ್ ಅವರಿಗೆ ಪದ್ಮಭೂಷಣ ಬಂದಿರೋದು. ಇದು ಅವರಿಗೆ ಸಿಕ್ಕಿರುವ ಈ ಪ್ರಶಸ್ತಿ ಬಹಳ ತಡವಗಿ ಬಂದಿರಬಹುದು. ಆದರೆ ನನ್ನ ನಂಬಿಕೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರಬೇಕು ಅನ್ನೋದು. ನಮ್ಮ ಪ್ರೀತಿಯ ಅನಂತ್ ನಾಗ್ ಸರ್ ಅವರಿಗೆ ಈ ಪ್ರಶಸ್ತಿ ಸಿಕ್ಕಿರೋದು ವೈಯಕ್ತಿಕವಾಗಿ ನನಗೆ ಸಿಕ್ಕಷ್ಟು ಖುಷಿ ಆಗಿದೆ. ಅನಂತ್ ಸರ್ ನಮ್ಮ ಎಲ್ಲಾ ಸ್ಪರ್ಧಿಗಳಿಂದ ಹಾಗೂ ಬಿಗ್ ಬಾಸ್ ತಂಡದಿಂದ ಜೊತೆಗೆ ವೀಕ್ಷಕರ ಕಡೆಯಿಂದ ಅಭಿನಂದನೆಗಳು. ಸರ್ ಕನ್ನಡ ಚಿತ್ರರಂಗಕ್ಕೆ ನೀವು ಕೊಟ್ಟಿರುವ ಕೊಡುಗೆಗೆ ಥ್ಯಾಂಕ್ಯೂ. ವಿ ಆಲ್ ಲವ್ ಯೂ ಸರ್ ಎಂದಿದ್ದಾರೆ ಸುದೀಪ್.

SUDEEP

ಆಲ್ ದಿ ಬೆಸ್ಟ್ ಸರ್, ಇನ್ನಷ್ಟು ವರ್ಷಗಳ ಕಾಲ ಇದೇ ರೀತಿ ನಮ್ಮನ್ನು ಮನರಂಜಿಸಿ ಒಳ್ಳೆಯ ಆರೋಗ್ಯದೊಂದಿಗೆ ಇರಿ ಎಂದು ಸುದೀಪ್ ‘ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ’ ವೇದಿಕೆಯಲ್ಲಿ ವಿಶ್ ಮಾಡಿದ್ದಾರೆ.

Share This Article