‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಶೋಭಾ ಮತ್ತು ರಜತ್ ಹಾವಳಿ ಜೋರಾಗಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಜತ್ ಕಿಶನ್‌ಗೆ (Rajath Kishen) ಕಳಪೆ ಪಟ್ಟ ಸಿಕ್ಕಿದೆ. ಅದಕ್ಕೆ ಗರಂ ಆಗಿರುವ ರಜತ್, ಇನ್ಮುಂದೆ ಅಸಲಿ ಶುರು ಅಂತ ಸವಾಲೆಸೆದಿದ್ದಾರೆ. ಇದನ್ನೂ ಓದಿ:ಸರಳವಾಗಿ ನಡೆಯಿತು ರಕ್ಷಿತಾ ಪ್ರೇಮ್ ಸಹೋದರನ ನಿಶ್ಚಿತಾರ್ಥ
ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ. ರಜತ್ ಆಟಕ್ಕೆ ಆಡುವ ಮಾತಿಗೆ ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿದೆ. ಈ ವಾರದ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನ ಆಡಿದವರಿಗೆ ಹೆಸರನ್ನು ಸೂಚಿಸಲು ಎಂದಿನಂತೆ ಬಿಗ್ ಬಾಸ್ ಸೂಚಿಸಿದರು. ಅದರಂತೆ ಇಡೀ ಮನೆ ಮಂದಿ ರಜತ್ ಹೆಸರನ್ನು ಹೇಳಿದ್ದಾರೆ.
ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಕೊಟ್ಟು ರಜತ್‌ಗೆ ಕಳಪೆ ಪಟ್ಟ ನೀಡಿದ್ದಾರೆ. ಇದು ರಜತ್‌ಗೆ ಕೋಪಕ್ಕೆ ಕಾರಣವಾಗಿದೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ. ಬಿಗ್ ಬಾಸ್ ಆಟ ಗೆಲ್ಲೋದು. ಹುಟ್ಟಿದಾಗನಿಂದಲೂ ಹೀಗೆ ಇದ್ದೀನಿ. ಇನ್ಮುಂದೆ ಕೂಡ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಇನ್ಮುಂದೆ ನಿಜವಾದ ಆಟ ಶುರು ಎಂದು ರಜತ್ ಮನೆ ಮಂದಿಗೆ ಸವಾಲೆಸೆದಿದ್ದಾರೆ.
View this post on Instagram
ಇನ್ನೂ ನ.20ರ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಕಿರಿಕ್ ಆಗಿದೆ. ಈ ವೇಳೆ, ಅವಾಚ್ಯ ಶಬ್ಧಗಳಿಂದ ಸುರೇಶ್‌ಗೆ ರಜತ್ ನಿಂದಿಸಿದ್ದಾರೆ. ಇದರಿಂದ ಸುರೇಶ್‌ಗೆ ಬೇಸರವಾಗಿತ್ತು. ಬಿಗ್ ಬಾಸ್‌ನಿಂದ ಹೊರ ಹೋಗಲು ಅವರು ಬಿಗ್ ಬಾಸ್‌ಗೆ ಮನವಿ ಮಾಡಿದರು.