ಮಂಡ್ಯ: ಚನ್ನಪಟ್ಟಣ ಉಪಚುನಾವಣೆಯಲ್ಲಿ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (CP Yogeshwar) ಗೆಲವು ಸಾಧಿಸಬೇಕೆಂದು ಯೋಗೇಶ್ವರ್ ಪತ್ನಿ ಶೀಲಾ ಮಂಡ್ಯ (Mandya) ಜಿಲ್ಲೆಯ ಮದ್ದೂರಿನ (Maddur) ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ.
ಶ್ರೀಪಾದ್ ಆಚಾರ್ಯ ಎಂಬವರ ನೇತೃತ್ವದಲ್ಲಿ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Hole Anjaneya Swamy Temple) ವಾಯುಸ್ಥಿತಿ ಪುನಃ ಚರಣ ವಿಶೇಷ ಹೋಮವನ್ನು ಶೀಲಾ ಯೋಗೇಶ್ವರ್ ನಡೆಸಿದ್ದಾರೆ. ಇತ್ತಿಚಿಗಷ್ಟೇ ಯೋಗೇಶ್ವರ್ ಸಹ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹೊಳೆ ಆಂಜನೇಯಸ್ವಾಮಿಗೆ ಒಂದುಕಾಲು ರೂ. ಹರಕೆ ಕಟ್ಟಿದ್ದರು. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ
ಇದೀಗ ಯೋಗೇಶ್ವರ್ ಪತ್ನಿ ಶೀಲಾ ಸಹ ಬೆಳಗ್ಗೆಯೇ ದೇವಸ್ಥಾನಕ್ಕೆ ಬಂದು ಆರಂಭದಲ್ಲಿ ಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಹೋಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲಿ ಪತಿ ಯೋಗೇಶ್ವರ್ ಗೆಲವು ಸಾಧಿಸಲಿ ಎಂದು ಎಂದು ಶೀಲಾ ಯೋಗೇಶ್ವರ್ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಎನ್‌ಕೌಂಟರ್: ಇಬ್ಬರು ಯೋಧರಿಗೆ ಗಾಯ