ನಾನು ಛಲವಾದಿ, ನನ್ನ ವಿರುದ್ಧ ದೂರು ಕೊಟ್ಟರೂ ನಾನು ಹೆದರಲ್ಲ: ನಾರಾಯಣಸ್ವಾಮಿ

Public TV
3 Min Read
Chalavadi Narayanaswamy

ಬೆಂಗಳೂರು: ಕಾಂಗ್ರೆಸ್ (Congress) ಅವರು ರಾಜ್ಯಪಾಲರಿಗೆ ಕೊಟ್ಟಿರುವ ದೂರನ್ನು ನಾನು ಸ್ವಾಗತ ಮಾಡುತ್ತೇನೆ. ನಾನು ಛಲವಾದಿ. ಯಾವುದಕ್ಕೂ ಹೆದರಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸವಾಲ್ ಹಾಕಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಸಿಎ ಸೈಟ್ ಅಕ್ರಮವಾಗಿ ಖರೀದಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ನನ್ನ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ಅವರು ದೂರು ಕೊಟ್ಟಿರೋದನ್ನು ನಾನು ಸ್ವಾಗತ ಮಾಡುತ್ತೇನೆ. 20 ವರ್ಷಗಳ ಹಿಂದಿನ ಪ್ರಕರಣ ಇದು. ಇದು ಪೊಲಿಟಿಕಲ್ ಗೇಮ್. ಇದಕ್ಕೆ ನಾನು ಹೆದರಲ್ಲ. ಕಾಂಗ್ರೆಸ್ ಅವರು ಬಹಳ ಕಷ್ಟ ಪಟ್ಟಿದ್ದಾರೆ. ನಾನು ಕೆಲಸ ಕೊಟ್ಟ ಮೇಲೆ ಅವರು ನನ್ನ ವಿರುದ್ಧ ಕೆಲಸ ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಕೋರ್ಟ್‌ನಲ್ಲಿ ಹೋರಾಟ: ಜಿ.ಪರಮೇಶ್ವರ್

ಯಾರೋ ಒಬ್ಬರು ಟ್ರಸ್ಟ್ ಮಾಡಿ ನನ್ನನ್ನು ಟ್ರಸ್ಟ್ ಮೆಂಬರ್ ಮಾಡಿದ್ದರು. ನಾನು ಟ್ರಸ್ಟ್ ಬಿಟ್ಟು 10 ವರ್ಷ ಆಗಿತ್ತು. ಅದಕ್ಕೂ ನನಗೂ ಸಂಬಂಧವಿಲ್ಲ. ಯಾಕೆ ದೂರು ಕೊಟ್ಟರು ಅಂತ ನಾನು ಪ್ರಶ್ನೆ ಕೇಳಲ್ಲ. ಆದರೆ ನಮ್ಮ ಆರೋಪಕ್ಕೆ ಇದೇ ಕಾಂಗ್ರೆಸ್ ಉತ್ತರನಾ? ಮೊದಲು ನನ್ನ ಆರೋಪಕ್ಕೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಾವೇರಿ ವಿವಿಯ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ನೇಮಕಾತಿ ರದ್ದು

ದೂರು ಕೊಟ್ಟ ಯಾರೂ ನನ್ನನ್ನು ಎಂಎಲ್‌ಸಿ ಮಾಡಿಲ್ಲ. ಬಿಜೆಪಿ (BJP) ನನ್ನನ್ನು ವಿಪಕ್ಷ ನಾಯಕ ಮಾಡಿದ್ದು. ನಾನು ತಪ್ಪು ಮಾಡಿದರೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ. ನಾನು ಛಲವಾದಿ. ನಾನು ಇರೋದು ಹೀಗೆ. ನಾನು ಯಾರನ್ನೂ ಸುಮ್ಮನೆ ಬಿಡಲ್ಲ. KIADB ಅವರು ಜಮೀನು ನೀಡಿದ್ದಾರೆ. ನಿಯಮದ ಪ್ರಕಾರವೇ ಎಲ್ಲವೂ ಆಗಿದೆ. ಕಾಂಗ್ರೆಸ್‌ನಲ್ಲಿ ಇದ್ದಾಗ ಆ ಸೈಟ್ ವಾಪಸ್ ಪಡೆದರು. ಕೋರ್ಟ್‌ಗೆ ಹೋಗಿ ನಾನು ಆ ಸೈಟ್ ಪಡೆದಿದ್ದೇನೆ ಎಂದು ವಿವರಣೆ ನೀಡಿದರು. ಇದನ್ನೂ ಓದಿ: ಬಂಗಾಳ ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆ ಮಂಡನೆ

ಆದರ್ಶ ಸ್ಕೂಲ್ ಜಾಗಕ್ಕೆ ನಾನು ಮಾಲೀಕ ಅಲ್ಲ. ಅದೊಂದು ಟ್ರಸ್ಟ್. ಕಾಂಗ್ರೆಸ್ ಅವರು ಧಂ ಬಿರಿಯಾನಿ ಮಾಡಿಕೊಳ್ಳಲಿ ಏನಾದ್ರು ಮಾಡಿಕೊಳ್ಳಲಿ. ನಾನು ಆ ಟ್ರಸ್ಟ್ ಮೆಂಬರ್ ಆಗಿದ್ದೆ ಅಷ್ಟೆ. ಟ್ರಸ್ಟ್ ಜಾಗ ನನ್ನ ಹೆಸರಿಗೆ ಮಾಡಿಕೊಳ್ಳಲು ಆಗಲ್ಲ. 10 ವರ್ಷಗಳ ಹಿಂದೆಯೇ ನಾನು ಮೆಂಬರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆ ಟ್ರಸ್ಟ್ ಜಾಗ ನಾನು ಖರೀದಿ ಮಾಡಿಲ್ಲ. ಅದು ಟ್ರಸ್ಟ್ ಜಾಗ. ಅದನ್ನು ಖರೀದಿ ಮಾಡಲು ಆಗಲ್ಲ. ಪಾಪ ಕಾಂಗ್ರೆಸ್ ಅವರಿಗೆ ಇದೆಲ್ಲ ಏನು ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ ಪ್ರವಾಹ; 35 ಮಂದಿ ಸಾವು

ನಾನು ಎಲ್ಲೂ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳೇ ಇಲ್ಲ. ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಅದಕ್ಕೆ ನಾವು ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದೆವು. ಖರ್ಗೆ ಮೇಲೆ ಸಂಪೂರ್ಣ ಗೌರವ ಇದೆ. ನಮ್ಮ ಸಮುದಾಯದ ದೊಡ್ಡ ನಾಯಕರು ಅವರು. ಸಮುದಾಯದ ವಿಷಯ ಬೇರೆ. ಪಕ್ಷದ ವಿಷಯ ಬೇರೆ. ಸರ್ಕಾರ ಮಾಡುವ ತಪ್ಪು ನಾನು ಹೇಳಬೇಕು. ದಾಖಲಾತಿ ಬಿಡುಗಡೆ ಮಾಡಿದ್ದೇನೆ. ನಾನು ಎರಡು ಕೇಸ್ ಹೇಳಿದ ಕೂಡಲೇ KIADB ಕಚೇರಿ ಬಾಗಿಲು ಹಾಕಿದ್ದಾರೆ. ಯಾವುದೇ ಡಾಕ್ಯುಮೆಂಟ್ ಪಡೆಯಲು ಬಿಡುತ್ತಿಲ್ಲ. ಅನುಮತಿ ಪಡೆದು ಒಳಗೆ ಹೋಗಬೇಕು ಎಂದು ಮಾಡಿದ್ದಾರೆ. ನಿಮ್ಮ ತಪ್ಪು ಇಲ್ಲ ಅಂದರೆ ಯಾಕೆ KIADB ಕ್ಲೋಸ್ ಮಾಡಿ ಕೆಲಸ ಮಾಡಿಸುತ್ತಿದ್ದೀರಾ. ನೀವು ಬಾಗಿಲು ಹಾಕಿದರೆ ನಮಗೆ ಡಾಕ್ಯುಮೆಂಟ್ ಸಿಗೋದಿಲ್ಲ. ನಿಯಮದ ಪ್ರಕಾರ 100 ಸೈಟ್ ಬೇಕಾದರೂ ಪಡೆಯಲಿ. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆಗಿದೆ ಅಂತ ದೂರು ಕೊಟ್ಟಿದ್ದಾರೆ. ಅದನ್ನು ತನಿಖೆ ಮಾಡಿ ಅಂತ ನಾನು ಕೇಳಿದ್ದೇನೆ ಅಷ್ಟೆ. ಇದರಲ್ಲಿ ತಪ್ಪೇನಿದೆ. ಇದಕ್ಕೆ ನನ್ನ ಮೇಲೆ ದೂರು ಕೊಟ್ಟರೆ ಅದನ್ನು ನಾನು ಎದುರಿಸುತ್ತೇನೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಫಿಲಿಪೈನ್ಸ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ – 14 ಮಂದಿ ದುರ್ಮರಣ

Share This Article