– ತುಂಗಭದ್ರಾ ಡ್ಯಾಂ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಅಲ್ಲ ಎಂದ ಕೇಂದ್ರ ಸಚಿವ
ಮಂಡ್ಯ: ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಸ್ಟಾಫ್ ಲಾಕ್ ಗೇಟ್ ಇಲ್ಲ. ಕೆಆರ್‌ಎಸ್ ಡ್ಯಾಂ ಕಟ್ಟುವಾಗ ಸ್ಟಾಪ್ ಇಲ್ಲದ ಕಾರಣ ಹಾಕಿಲ್ಲ. ಈಗ ತುಂಗಭದ್ರಾ ಡ್ಯಾಂ ಪರಿಸ್ಥಿತಿ ಗಮನಿಸಿದ್ರೆ, ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ದೂರ ದೃಷ್ಟಿಯಿಂದ ಕೆಆರ್‌ಎಸ್‌ಗೆ ಸ್ಟಾಪ್ ಲಾಕ್ ಹಾಕಬೇಕು ಎಂದು ಕೇಂದ್ರ ಸಚಿವ ಹಾಗೂ ಮಂಡ್ಯದ ಸಂಸದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಎಚ್ಚರಿಸಿದ್ದಾರೆ.
ತುಂಗಭದ್ರಾ ಡ್ಯಾಂ (Tungabhadra Dam) ಕ್ರಸ್ಟ್ ಗೇಟ್ 19ರ ಚೈನ್‌ಲಿಂಕ್ ತುಂಡಾದ ವಿಚಾರ ಕುರಿತು ಮಂಡ್ಯದ ಪಾಂಡವಪುರದ ಸೀತಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!
ದೊಡ್ಡ ಅನಾಹುತ:
ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ. 19 ಕ್ರಸ್ಟ್ ಗೇಟ್ ಓಪನ್ ಆಗಿದೆ. ಇದೊಂದೇ 30 ಸಾವಿರ ಕ್ಯೂಸೆಕ್ ನೀರು ಹೋಗ್ತಾ ಇದೆ. ಈ ಅನಾಹುತದಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ. 70 ವರ್ಷಗಳ ಹಿಂದೆ ಈ ಜಲಾಶಯ ಕಟ್ಟಿದ್ದಾರೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ನಾರಾಯಣಪುರ, ಆಲಮಟ್ಟಿ ಡ್ಯಾಂನಲ್ಲಿ ಸ್ಟಾಫ್ ಲಾಕ್ ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಡ್ಯಾಂನಲ್ಲಿ ಸ್ಟಾಫ್ ಗೇಟ್ ಅಳವಡಿಕೆ ಮಾಡಿಲ್ಲದ ಕಾರಣ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಇದರಿಂದ ರೈತರ ವಿಚಾರದಲ್ಲಿ ಚೆಲ್ಲಾಟವಾಡಿದಂತೆ ಆಗಿದೆ. ಟಿಬಿ ಡ್ಯಾಂ ಬೋರ್ಡ್ ತಾಂತ್ರಿಕ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿದೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಸರಿ ಪಡಿಸಿಕೊಳ್ಳಬೇಕಾಗಿದೆ. ಅಲ್ಲದೇ ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ಈಗಲೇ ಎಚ್ಚೇತ್ತುಕೊಳ್ಳೋದು ಒಳ್ಳೆಯದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್ ವೀಡಿಯೋಗಳು ಪತ್ತೆ!
ತುಂಗಭದ್ರಾ ಜಲಾಶಯದ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಎನ್ನಲು ಆಗಲ್ಲ. ಡ್ಯಾಂಗೆ ಟೆಕ್ನಿಕಲ್ ಕಮಿಟಿ ಇರುತ್ತೆ. ಆ ಕಮಿಟಿ ಪ್ರತಿವರ್ಷ ಸಮಸ್ಯೆಗೆಳನ್ನ ಪರಿಶೀಲನೆ ಮಾಡುತ್ತೆ. ಆಗ ಕಾಟಚಾರಕ್ಕೆ ಪರಿಶೀಲನೆ ಮಾಡಿದ್ದರೇ ಈ ರೀತಿಯ ಅನಾಹುತಗಳು ಆಗುತ್ತವೆ. ಇದನ್ನು ದುರಸ್ಥಿತಿ ಮಾಡೋದು ಸರ್ಕಾರಕ್ಕೆ ಇದು ಕ್ಲಿಷ್ಟಕರ ಪರಿಸ್ಥಿತಿ. ಟೆಕ್ನಿಕಲ್‌ನಲ್ಲಿ ಪರಿಣತಿ ಇರುವವರ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.