ಹೈದರಾಬಾದ್: ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ ಅಬ್ಬರದಿಂದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) 4 ವಿಕೆಟ್‌ಗಳ ಜಯ ಸಾಧಿಸಿತು. ಆ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 214 ಬೃಹತ್ ಮೊತ್ತ ಪೇರಿಸಿತು. 215 ರನ್ ಗುರಿ ಬೆನ್ನತ್ತಿದ ಹೈದರಾಬಾದ್ 19.1 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: ಖಾಸಗಿ ಸಂಭಾಷಣೆ ಪ್ರಸಾರ ಮಾಡಿದ್ದಕ್ಕೆ ಐಪಿಎಲ್ ಪ್ರಸಾರಕರಿಗೆ ರೋಹಿತ್ ಶರ್ಮಾ ತರಾಟೆ
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಉತ್ತಮ ಶುಭಾರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಅಥರ್ವ ತೈಡೆ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 97 ರನ್ ಪೇರಿಸಿದ್ದರು. ಅಥರ್ವ 46 ರನ್ (27 ಬಾಲ್, 5 ಫೋರ್, 2 ಸಿಕ್ಸರ್) ಗಳಿಸಿದರು. ಪ್ರಭ್‌ಸಿಮ್ರನ್ 71 (45 ಬಾಲ್, 7 ಫೋರ್, 4 ಸಿಕ್ಸರ್) ರನ್‌ಗಳ ಅಮೋಘ ಆಟವಾಡಿದರು.
ಮೂರನೇ ಕ್ರಮಾಂಕದಲ್ಲಿ ರಿಲಿ ರಾಸ್ಸೋ 49 ರನ್ ಗಳಿಸಿ (24 ಬಾಲ್, 3 ಫೋರ್, 4 ಸಿಕ್ಸರ್) ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿ ಅರ್ಧಶತಕ ವಂಚಿತರಾಗಿ ಹೊರನಡೆದರು. ಇದನ್ನೂ ಓದಿ: ಗ್ರೌಂಡ್ ಹೊರಗೂ ದಾಖಲೆ ಬರೆದ ನಾಕೌಟ್ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?
ನಾಯಕ ಜಿತೇಶ್ ಶರ್ಮಾ 32 ರನ್ (15 ಬಾಲ್, 2 ಫೋರ್, 2 ಸಿಕ್ಸರ್) ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಹೈದರಾಬಾದ್ ಪರ ಟಿ ನಟರಾಜನ್ 2 ಹಾಗೂ ಪ್ಯಾಟ್ ಕಮಿನ್ಸ್, ವಿಜಯಕಾಂತ್ ವ್ಯಾಸಕಾಂತ್ ತಲಾ 1 ವಿಕೆಟ್ ಗಳಿಸಿದರು.
ಪಂಜಾಬ್ ನೀಡಿದ 215 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್ ಹೆಡ್ ಒಂದೇ ಬಾಲ್‌ಗೆ ವಿಕೆಟ್ ಕೈಚೆಲ್ಲಿ ಹೊರನಡೆದರು. ಈ ವೇಳೆ ಅಭಿಷೇಕ್ ಶರ್ಮಾ (66 ರನ್, 28 ಬಾಲ್, 5 ಫೋರ್, 6 ಸಿಕ್ಸರ್) ಹಾಗೂ ರಾಹುಲ್ ತ್ರಿಪಾಠಿ (33 ರನ್, 18 ಬಾಲ್, 4 ಫೋರ್, 2 ಸಿಕ್ಸರ್) ಜವಾಬ್ದಾರಿಯುತ ಆಟವಾಡಿದರು. ಈ ಜೋಡಿ 30 ಬಾಲ್‌ಗಳಿಗೆ 72 ರನ್‌ಗಳ ಜೊತೆಯಾಟವಾಡಿತು. ಇದನ್ನೂ ಓದಿ: ಆರ್‌ಸಿಬಿ ಪ್ಲೇ-ಆಫ್ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್, ಅನುಷ್ಕಾ
ಪಂಜಾಬ್ ಬೌಲರ್‌ಗಳನ್ನು ಹೈದರಾಬಾದ್ ಬ್ಯಾಟರ್‌ಗಳು ಮನಬಂದಂತೆ ದಂಡಿಸಿದರು. ನಿತೀಶ್ ಕುಮಾರ್ ರೆಡ್ಡಿ (37), ಹೆನ್ರಿಕ್ ಕ್ಲಾಸೆನ್ 42, ಅಬ್ದುಲ್ ಸಮದ್ 11 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್ ಪರ ಅರ್ಷದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತರು. ಹರ್ಪ್ರೀತ್ ಬ್ರಾರ್ ಮತ್ತು ಶಶಾಂಕ್ ಸಿಂಗ್ ತಲಾ 1 ವಿಕೆಟ್ ಗಳಿಸಿದರು.