ಮದುವೆ ಬಗ್ಗೆ ಸುಳಿವು ಕೊಟ್ಟ ನಟ- ಪ್ರಭಾಸ್ ಕೈ ಹಿಡಿಯುವ ಆ ಹುಡುಗಿ ಯಾರು?

Public TV
1 Min Read
prabhas 1 1

ಬಾಹುಬಲಿ, ಸಲಾರ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಸದ್ಯ ‘ಸಲಾರ್’ ಪಾಟ್ 2, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್‌ನಿಂದ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ದಿಲ್ಲದೇ ಮದುವೆಗೆ (Wedding) ಸಜ್ಜಾದ್ರಾ ಪ್ರಭಾಸ್ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

prabhas 3

ಅಷ್ಟಕ್ಕೂ ಪ್ರಭಾಸ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ‘ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ. ಕಾಯ್ತಾ ಇರಿ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕೆಲವರು ಪ್ರಭಾಸ್ ಆದಷ್ಟು ಬೇಗ ಮದುವೆ ಸುದ್ದಿ ನೀಡುತ್ತಿದ್ದಾರೆ. ಭಾವಿ ಪತ್ನಿಯನ್ನು ಪರಿಚಯಿಸುತ್ತಾರೆ ಎಂದೆಲ್ಲಾ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್

prabhas

ಇತ್ತೀಚೆಗೆ ಅವರ ದೊಡ್ಡಮ್ಮ ಶ್ಯಾಮಲಾ ದೇವಿ ಕಾರ್ಯಕ್ರಮವೊಂದರಲ್ಲಿ ಈ ವರ್ಷವೇ ಪ್ರಭಾಸ್ ಮದುವೆ ನಡೆಯುತ್ತದೆ ಎಂದಿದ್ದರು. ಈಗ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್ ನೋಡಿ, ಮದುವೆ ಬಗ್ಗೆನೇ ನಟ ಶುಭಸುದ್ದಿ ಕೊಡಬಹುದು. ಹಾಗಾದ್ರೆ ಹುಡುಗಿ ಯಾರಿರಬಹುದು ಎಂದೆಲ್ಲಾ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಅಂದಹಾಗೆ ‘ಆದಿಪುರುಷ್’ ಸಿನಿಮಾ ರಿಲೀಸ್ ವೇಳೆ ಕೃತಿ ಸನೋನ್ ಜೊತೆ ಪ್ರಭಾಸ್ ಡೇಟಿಂಗ್ ಸುದ್ದಿ ಕೇಳಿ ಬಂದಿತ್ತು. ಹಾಗಾಗಿ ಮದುವೆ ಬಗ್ಗೆ ಅಧಿಕೃತ ಘೋಷಣೆ ಆಗಲಿದ್ಯಾ? ಎಂಬುದನ್ನು ಕಾದುನೋಡಬೇಕಿದೆ.

Share This Article