ಸೀತಾರಾಮಂ (Seetharamam), ಫ್ಯಾಮಿಲಿ ಸ್ಟಾರ್ ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದ ನಟಿ ಮೃಣಾಲ್ ಠಾಕೂರ್ (Mrunal Thakur) ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಹೀರೋ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಮೃಣಾಲ್ ಲವ್ವಿ ಡವ್ವಿ ಶುರುವಾಗಿದೆ ಎಂದು ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ
Advertisement
ಬಿಟೌನ್ ಅಂಗಳದ ನಯಾ ಜೋಡಿ ಅಂದರೆ ಸಿದ್ಧಾಂತ್ ಮತ್ತು ಮೃಣಾಲ್. ಇತ್ತೀಚೆಗೆ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್ ಡೇಟ್ ಮುಗಿಸಿ ಜೊತೆಯಾಗಿ ಕೈ ಕೈ ಹಿಡಿದು ಇಬ್ಬರೂ ಕಾಣಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಈ ಸುದ್ದಿ ನಿಜನಾ? ಎಂಬುದನ್ನು ಈ ಜೋಡಿ ಖಚಿತಪಡಿಸಬೇಕಿದೆ.
Advertisement
Advertisement
ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಮೃಣಾಲ್‌ಗೆ ಭಾರೀ ಬೇಡಿಕೆ ಇದೆ. ಹಿಂದಿ ಸಿನಿಮಾಗಳಿಗಿಂತ ತೆಲುಗಿನಲ್ಲಿ ನಟಿ ಸಕ್ಸಸ್ ಕಂಡಿದ್ದಾರೆ. ಅದರಲ್ಲೂ ‘ಸೀತಾರಾಮಂ’ ಸಿನಿಮಾದಲ್ಲಿ ಸೀತಾ ಆಗಿ ಎಲ್ಲರ ಗಮನ ಸೆಳೆದಿದ್ದರು.
Advertisement
ಸದ್ಯ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಹೊಸ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ಕೆಲವು ಸಿನಿಮಾಗಳ ಮಾತುಕತೆ ನಡೆಯುತ್ತಿವೆ.