– 1962 ರ ವರೆಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಯೇ ನಡೆದಿರಲಿಲ್ಲ
– ಕರ್ನಾಟಕದ ಏಕೈಕ ಮಹಿಳಾ ಅಭ್ಯರ್ಥಿಗೆ ಗೆಲುವು
ಪಬ್ಲಿಕ್ ಟಿವಿ ವಿಶೇಷ
ಸ್ವಾತಂತ್ರ್ಯ ಬಂದು ಎರಡು ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದರೂ ಭಾರತ ಹಲವಾರು ಸಮಸ್ಯೆಗಳನ್ನು ಹೊದ್ದುಕೊಂಡಿತ್ತು. ಬಳಿಕ ಬರುಬರುತ್ತಾ ಸಮಸ್ಯೆಗಳಿಗೆ ಒಂದೊಂದೇ ಪರಿಹಾರ ಕಂಡುಕೊಳ್ಳಲು ಶುರು ಮಾಡಿತು. ಎರಡು ಮತ್ತು ಮೂರನೇ ಸಾರ್ವತ್ರಿಕ ಚುನಾವಣೆ ಹೊತ್ತಿಗೆ (1957-1962) ‘ಗೋವಾ ವಿಮೋಚನೆ’ಯಾಯಿತು (ಅಲ್ಲಿಯವರೆಗೂ ಗೋವಾ ಪೋರ್ಚುಗೀಸರ ಆಡಳಿತದಲ್ಲಿತ್ತು). ನಾಗಾಲ್ಯಾಂಡ್ ರಾಜ್ಯ ರಚನೆಗೆ ಆಗಿನ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತು. ಅಲ್ಲಿವರೆಗೂ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಮಾದರಿಯಂತೆಯೇ ನಾಗಲ್ಯಾಂಡ್ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲಾಗುತ್ತಿತ್ತು.
- Advertisement -
3ನೇ ಸಾರ್ವತ್ರಿಕ ಚುನಾವಣೆ
1962 ರ ಫೆಬ್ರುವರಿ 19 ರಿಂದ 25 ರವರೆಗೆ ಏಳು ದಿನಗಳ ಕಾಲ ಮೂರನೇ ಲೋಕಸಭಾ ಚುನಾವಣೆ (Lok Sabha Election 2024) ನಡೆಯಿತು. 494 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 18 ರಾಜ್ಯಗಳಿಂದ 1985 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 12,77,19,470 ಮತದಾರರು ಮತ ಚಲಾಯಿಸಿದರು. ಅವರಲ್ಲಿ ಪುರುಷರು 6,73,88,166 ಹಾಗೂ ಮಹಿಳಾ ಮತದಾರರು 6,03,31,304 ವೋಟ್ ಮಾಡಿದರು. 55.42% ಮತದಾನವಾಗಿತ್ತು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?
- Advertisement -
- Advertisement -
ಚುನಾವಣಾಧಿಕಾರಿ ಯಾರು?
ಸ್ವತಂತ್ರ ಭಾರತದ ಎರಡನೇ ಮತ್ತು ದೀರ್ಘಾವಧಿಯ ಮುಖ್ಯ ಚುನಾವಣಾ ಆಯುಕ್ತರಾಗಿ ಕೆವಿಕೆ ಸುಂದರಂ ಅವರು ಗುರುತಿಸಿಕೊಂಡರು. ಡಿಸೆಂಬರ್ 1958 ರಲ್ಲಿ ಸುಕುಮಾರ್ ಸೇನ್ ಅವರಿಂದ ಸುಂದರಂ ಅಧಿಕಾರ ವಹಿಸಿಕೊಂಡರು. ಇವರು ಮೂರು ಮತ್ತು ನಾಲ್ಕನೇ ಲೋಕಸಭೆ ಚುನಾವಣೆಗಳಲ್ಲಿ ಈ ಹುದ್ದೆಯನ್ನು ಅಲಂಕರಿಸಿದರು.
- Advertisement -
27 ಪಕ್ಷಗಳು
ಚುನಾವಣೆಯಲ್ಲಿ 27 ಪಕ್ಷಗಳು ಕಣದಲ್ಲಿದ್ದವು. ಅವುಗಳಲ್ಲಿ 6 ರಾಷ್ಟ್ರೀಯ ಪಕ್ಷಗಳಿದ್ದವು. ಮಾನ್ಯತೆ ಪಡೆದಿದ್ದ 11 ಹಾಗೂ ನೋಂದಾಯಿಸಿಕೊಂಡಿದ್ದ 10 ಪಕ್ಷಗಳು ಸ್ಪರ್ಧಿಸಿದ್ದವು. ಇದನ್ನೂ ಓದಿ: ಚಿಲ್ಲರೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ: ಹೆಚ್‌ಡಿಡಿ ವಿರುದ್ಧ ಡಿಕೆಶಿ ಕಿಡಿ
ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ
ರಾಜಕೀಯವಾಗಿ ಪ್ರಬಲವಾಗಿದ್ದ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಗೆಲುವು ದಾಖಲಿಸಿತು. ಜವಾಹರಲಾಲ್ ನೆಹರೂ ಅವರು ಮತ್ತೆ ಪ್ರಧಾನಿಯಾಗಿ ಹುದ್ದೆ ಅಲಂಕರಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ 361 ಸ್ಥಾನಗಳನ್ನು ಗೆದ್ದು ಪೈಪೋಟಿಯಿಲ್ಲದೇ ಅಧಿಕಾರ ಉಳಿಸಿಕೊಂಡಿತು. ಆದರೆ ಕಳೆದ ಎರಡು ಚುನಾವಣೆಗಳಿಗಿಂತ ಗೆಲುವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟದಲ್ಲಿ ಕುಸಿತ ಕಂಡಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 29 ಸ್ಥಾನಗಳನ್ನು ಗೆದ್ದಿತು. ಭಾರತೀಯ ಜನಸಂಘ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡಂಕಿ ಮುಟ್ಟಿತು. ಸಮಾಜವಾದಿ ಪಕ್ಷ 18, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 12 ಸ್ಥಾನಗಳನ್ನು ಗೆದ್ದುಕೊಂಡವು. ತಮಿಳುನಾಡಿನ ಡಿಎಂಕೆ ಪಕ್ಷ 7 ಸ್ಥಾನಗಳನ್ನು ಗೆದ್ದು ಗಮನ ಸೆಳೆಯಿತು. 20 ಪಕ್ಷೇತರ ಅಭ್ಯರ್ಥಿಗಳು ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು.
‘ಲೋಕ’ಸಮರದಲ್ಲಿ ಮಹಿಳಾಮಣಿಗಳು
1985 ಒಟ್ಟು ಅಭ್ಯರ್ಥಿಗಳ ಪೈಕಿ 66 ಮಹಿಳೆಯರು ಕಣಕ್ಕಿಳಿದಿದ್ದರು. 31 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು. ಆಗಿನ ಮೈಸೂರು ರಾಜ್ಯದಿಂದ ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಇದನ್ನೂ ಓದಿ: ರಾಯಚೂರು ʻಕೈʼ ಅಭ್ಯರ್ಥಿ 4.12 ಕೋಟಿ ಆಸ್ತಿ ಒಡೆಯ, ಪತ್ನಿ 29 ಕೋಟಿ ಆಸ್ತಿಯ ಒಡತಿ!
1967 ರ ವರೆಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆಯೇ ನಡೆದಿರಲಿಲ್ಲ!
1952-62 ರವರೆಗೆ ಜಮ್ಮು-ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಯೇ ನಡೆದಿರಲಿಲ್ಲ. 1952 ರ ಸಂದರ್ಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಶೇಖ್ ಅಬ್ದುಲ್ಲಾ ಅವರು 10 ಮಂದಿಯನ್ನು ಆಯ್ಕೆ ಮಾಡಿ, ಅವರನ್ನು ಜಮ್ಮು-ಕಾಶ್ಮೀರದಿಂದ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರನ್ನಾಗಿ ಮಾಡಿದ್ದರು.
ಕರ್ನಾಟಕದ ಏಕೈಕ ಮಹಿಳಾ ಅಭ್ಯರ್ಥಿಗೆ ಗೆಲುವು
1962 ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಏಕೈಕ ಮಹಿಳಾ ಅಭ್ಯರ್ಥಿ ಸರೋಜಿನಿ ಮಹಿಷಿ ಗೆದ್ದು ಬೀಗಿದ್ದರು. ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಂದು ಕೇವಲ 10 ಸಾವಿರ ಖರ್ಚು ಮಾಡಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು.