ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda), ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಡಿಕೆ ಶಿವಕುಮಾರ್ (DK Shivakumar) ಕೆಂಡಾಮಂಡಲ ಆಗದ್ದು ಚಿಲ್ಲರೆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
9 ವರ್ಷದ ಹೆಣ್ಣು ಮಗಳನ್ನು ತೆಗೆದುಕೊಂಡು ಹೋಗಿ ಜಮೀನನ್ನು ಬರೆಸಿಕೊಂಡರು ಎಂಬ ಆರೋಪವನ್ನು ಚಿಲ್ಲರೆ ಎಂದ ಡಿಕೆಶಿ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ತಪ್ಪು ಮಾಡಿದರೆ ನಾನು ಯಾವುದೇ ಶಿಕ್ಷೆಗೂ ರೆಡಿ ಇದ್ದೇನೆ ಎಂದು ದೇವೇಗೌಡರಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಸಿಎಎ ರದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನ, 10 ಉಚಿತ ಎಲ್‌ಪಿಜಿ ಸಿಲಿಂಡರ್ – ಟಿಎಂಸಿ ಪ್ರಣಾಳಿಕೆಯಲ್ಲಿ ಘೋಷಣೆ
Advertisement
Advertisement
ನಾನು ಏನು ಮೂರ್ಖನಲ್ಲ, ಚಿಲ್ಲರೆ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ಇನ್ನೊಂದು ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಡಿಕೆಶಿ ಟಾಂಗ್ ಕೊಟ್ಟರು.
Advertisement
ನನ್ನ ಬಗ್ಗೆ ಅವರು ನೆನಪು ಮಾಡಿಕೊಂಡಿದ್ದಕ್ಕೆ ಬಹಳ ಸಂತೋಷ. ಅಂತಹ ದೊಡ್ಡ ವೇದಿಕೆಯಲ್ಲಿ ನನ್ನ ಹೆಸರು ಪಠಣ ಮಾಡಿದ್ದಕ್ಕೆ ಧನ್ಯವಾದ ಎಂದು ಹೇಳಿದರು. ಇದನ್ನೂ ಓದಿ: 9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಕ್ಕೆ ಡಿಕೆಶಿ ಕೈ ಬಲಪಡಿಸಬೇಕಾ?: ಹೆಚ್‍ಡಿಡಿ ವಾಗ್ದಾಳಿ
Advertisement
ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆಶಿ ಬ್ರದರ್ಸ್ ಟಾರ್ಗೆಟ್ ಎಂಬ ವಿಚಾರವಾಗಿ ಮಾತನಾಡಿದ ಅವರು, ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಮಾಡಲಿ ಬಿಡಲಿ ಎಂದು ಉತ್ತರಿಸಿದರು.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಈ ಎರಡು ಕ್ಷೇತ್ರಗಳಲ್ಲಿ ಯಾವುದು ಬಹಳ ಮುಖ್ಯ ಎಂಬ ಪ್ರಶ್ನೆಗೆ, ಕರ್ನಾಟಕ 28 ಕ್ಷೇತ್ರಗಳು ಬಹಳ ಮುಖ್ಯ ಎಂದು ಹೇಳಿದರು.