– ಅಭ್ಯರ್ಥಿ ಕುಮಾರ್ ನಾಯಕ್‌ಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ!
ರಾಯಚೂರು: ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ್ (G Kumar Naik) ಅವರಿಂದು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಗುರುವಾರ ಬೃಹತ್ ರ‍್ಯಾಲಿಯೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
Advertisement
ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆಸ್ತಿವಿವರ (Candidates Assets) ಘೋಷಿಸಿದ್ದು ಅಭ್ಯರ್ಥಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಿದ್ದಾರೆ. ಅಭ್ಯರ್ಥಿ ಜಿ.ಕುಮಾರ ನಾಯಕ್ ಒಟ್ಟು ಆಸ್ತಿ ಮೌಲ್ಯ 4,12,85,429 ರೂ. (4.12 ಕೋಟಿ ರೂ.) ಇದ್ದರೆ ಅವರ ಪತ್ನಿಯ ಹೆಸರಲ್ಲಿ ಒಟ್ಟು 29,28,43,075 ರೂ. (29. ಕೋಟಿ ರೂ.) ಮೌಲ್ಯದ ಆಸ್ತಿಯಿದೆ. ಇದನ್ನೂ ಓದಿ: ಪಾಕ್‌ನಲ್ಲಿ ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ.. ಅವರನ್ನು ಬಿಟ್ಟು ತವರಿಗೆ ಹೋಗಲ್ಲ: ಭಾರತದ ಮಹಿಳೆ ಅಳಲು
Advertisement
Advertisement
ಅಭ್ಯರ್ಥಿಯ (Congress Candidate) ಒಟ್ಟು ಚರಾಸ್ತಿ ಮೌಲ್ಯ 1,72,22,929 ರೂ. ಇದ್ದರೆ, ಪತ್ನಿಯ ಒಟ್ಟು ಚರಾಸ್ತಿ ಮೌಲ್ಯ 2,57,80,575 ರೂ. ಇದೆ. 2,58,533 ರೂ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬೈಕ್ಸ್ ಹೊಂದಿರುವ ಅಭ್ಯರ್ಥಿ ಸ್ವಂತ ಕಾರು ಹೊಂದಿಲ್ಲ. ಇದನ್ನೂ ಓದಿ: ಸಿಎಎ ರದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನ, 10 ಉಚಿತ ಎಲ್‌ಪಿಜಿ ಸಿಲಿಂಡರ್ – ಟಿಎಂಸಿ ಪ್ರಣಾಳಿಕೆಯಲ್ಲಿ ಘೋಷಣೆ
Advertisement
ಅಭ್ಯರ್ಥಿಯ ಬಳಿ 14,07,400 ರೂ. ಮೌಲ್ಯದ 207 ಗ್ರಾಂ ಚಿನ್ನ ಇದೆ. ಅವರ ಪತ್ನಿ ಬಳಿ 49,30,000 ರೂ. ಮೌಲ್ಯದ 725 ಗ್ರಾಂ ಚಿನ್ನ ಇದೆ. ಇನ್ನೂ ಅಭ್ಯರ್ಥಿಯ ಒಟ್ಟು ಸ್ಥಿರಾಸ್ಥಿ ಮೌಲ್ಯ 2,40,62,500 ರೂ. ಇದ್ರೆ ಅವರ ಪತ್ನಿಯ ಒಟ್ಟು ಸ್ಥಿರಾಸ್ತಿ ಮೌಲ್ಯ 26,70,62,500 ರೂ.ಇದೆ. ಅಭ್ಯರ್ಥಿ ಹೆಸರಲ್ಲಿ ಯಾವುದೇ ಸಾಲ ಇಲ್ಲಾ. ಪತ್ನಿ ಹೆಸರಲ್ಲಿ 5,04,02,455 ರೂ. ಸಾಲವಿದೆ ಎಂದು ಘೋಷಿಸಿಕೊಂಡಿದ್ದಾರೆ.