Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?

Cricket

ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?

Public TV
Last updated: April 7, 2024 1:18 pm
Public TV
Share
2 Min Read
Virat Kohli 3
SHARE

ಜೈಪುರ: 2024ರ ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಜೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಅವರು ದಾಖಲೆಯ 8ನೇ ಶತಕ ಸಿಡಿಸಿದರು. ಅಲ್ಲದೇ ಐಪಿಎಲ್‌ನಲ್ಲಿ 7,500 ರನ್‌ ಪೂರೈಸಿದ ಮೊದಲ ಆಟಗಾರ ಮೈಲುಗಲ್ಲನ್ನೂ ಸ್ಥಾಪಿಸಿದರು. ಆದ್ರೆ ಈಗ ಆರ್‌ಸಿಬಿ ತಂಡದ ಸೋಲಿಗೆ ಕೊಹ್ಲಿ ಅವರನ್ನು ಹೊಣೆ ಮಾಡಲಾಗಿದೆ.

ಶನಿವಾರ ಸವಾಯ್‌ ಮಾನ್ಸಿಂಗ್‌ ಕ್ರೀಂಡಾಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಗಳಿಸಿದ ನಿಧಾನಗತಿಯ ಶತಕವೇ ಆರ್‌ಸಿಬಿ (RCB) ತಂಡದ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ.

Virat Kohli 2

ಹೌದು. ಆರ್‌ಸಿಬಿ ಪರ ಅಂತಿಮ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು. ಆದ್ರೆ ಕೊಹ್ಲಿ ಅವರ ಈ ಶತಕವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಅಲ್ಲದೇ 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಓವರ್‌ಗಳನ್ನು ಒಬ್ಬರೇ ಎದುರಿಸಿದರು. ಹಿಂದಿನ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲೂ ಕೊಹ್ಲಿ 59 ಎಸೆತಗಳನ್ನ ಎದುರಿಸಿ ಕೇವಲ 83 ರನ್‌ (4 ಬೌಂಡರಿ, 4 ಸಿಕ್ಸರ್‌) ಕಲೆಹಾಕಿದ್ದರು. ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದಲೇ ತಂಡ ಸೋಲಿಗೆ ತುತ್ತಾಯಿತು ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

Virat Kohli 4

ಆರ್‌ಸಿಬಿ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 125 ರನ್‌ ಗಳಿಸಿತ್ತು. ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊಮ್ರೋರ್‌, ಅನೂಜ್‌ ರಾವತ್‌ ನಂತಹ ಸ್ಪೋಟಕ ಆಟಗಾರರ ವಿಕೆಟ್‌ಗಳಿದ್ದವು. ಆದ್ರೆ ಕ್ರೀಸ್‌ ಬಿಟ್ಟುಕೊಡದ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ ಅನ್ನೇ ಮುಂದುವರಿಸಿದರು. ಇದು ತಂಡದ ಬೃಹತ್‌ ಮೊತ್ತದ ಮೇಲೆ ಭಾರೀ ಪರಿಣಾಮ ಬೀರಿತು. ಇದರಿಂದಾಗಿ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ. ಆದ್ರೆ ನಾಯಕ ಡುಪ್ಲೆಸಿಸ್‌ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಅವರೇ ಏಕಾಂಗಿ ಹೋರಾಟ ನಡೆಸಿದ್ದಾರೆ ಎಂದು ಕೊಹ್ಲಿಯನ್ನ ಕೆಲವರು ಬೆಂಬಲಿಸಿದ್ದಾರೆ.

Virat Kohli

ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್‌:
* ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
* ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
* ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
* ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್‌, 2010
* ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್‌, 2022
* ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012

Jos Buttler Sanju Samson

ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಟಾಪ್‌-5 ಪ್ಲೇಯರ್ಸ್‌
* ವಿರಾಟ್‌ ಕೊಹ್ಲಿ – 8
* ಕ್ರಿಸ್‌ ಗೇಲ್‌ – 6
* ಜೋಸ್‌ ಬಟ್ಲರ್‌ – 6
* ಕೆ.ಎಲ್‌ ರಾಹುಲ್‌ – 4
* ಶೇನ್‌ ವಾಟ್ಸನ್‌ – 4

TAGGED:IPL 2024Most CenturiesRajasthan RoyalsrcbRCB vs RRV Kohliಆರ್‍ಸಿಬಿಐಪಿಎಲ್ಕೊಹ್ಲಿ ಶತಕವಿರಾಟ್ ಕೊಹ್ಲಿ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Rajanna Hotel 2
Bengaluru City

ತಗ್ಗದ ವಾಣಿಜ್ಯ ಸಿಲಿಂಡರ್ ಅಭಾವ – ಭಾನುವಾರದ ಬಾಡೂಟಕ್ಕೂ ʻಗ್ಯಾಸ್‌ ಟ್ರಬಲ್‌ʼ

Public TV
By Public TV
25 minutes ago
KH Muniyappa
Bagalkot

ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ 1 ಸಿಲಿಂಡರ್‌: ಸಚಿವ ಕೆ.ಹೆಚ್‌ ಮುನಿಯಪ್ಪ

Public TV
By Public TV
35 minutes ago
Narendra Modi
Latest

ರಾಜ್ಯ ಸರ್ಕಾರಗಳು ವಿಶ್ವಾಸದಿಂದ ಹೆಜ್ಜೆ ಇಡಬೇಕು – ತೈಲ ಅಭಾವ ವದಂತಿಗೆ ಜನ ಕಿವಿಗೊಡಂತೆ ಮೋದಿ ಕರೆ

Public TV
By Public TV
49 minutes ago
USS Tripoli 2
Latest

ಇರಾನ್‌ ಮೇಲೆ ರಣಭೀಕರ ದಾಳಿಗೆ ಪ್ಲ್ಯಾನ್‌ – ಮಧ್ಯಪ್ರಾಚ್ಯಕ್ಕೆ 3,500 ನೌಕಾಪಡೆ, ಟ್ರಿಪೋಲಿ ನಿಯೋಜಿಸಿದ ಅಮೆರಿಕ

Public TV
By Public TV
2 hours ago
Yadgiri 4 Children Death In Agricultural Pit
Crime

ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾವು

Public TV
By Public TV
2 hours ago
Siddaramaiah 4
Districts

ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿದ್ದರಾಮಯ್ಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?