‘ಪುಷ್ಪ’ ಸಿನಿಮಾದ ಸಕ್ಸಸ್ ನಂತರ ‘ಪುಷ್ಪ 2’ (Pushpa 2) ಚಿತ್ರೀಕರಣದಲ್ಲಿ ನಿರ್ದೇಶಕ ಸುಕುಮಾರ್ (Sukumar) ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಶಾಕಿಂಗ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ. ಅವರ ಸಂದರ್ಶನದ ಮಾತುಗಳು ಇದೀಗ ವೈರಲ್ ಆಗುತ್ತಿವೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅಹಂ ಪ್ರೇಮಾಸ್ಮಿ, ಸಂತ ಚಿತ್ರದ ನಟಿ
ರಂಗಸ್ಥಳಂ, ಪುಷ್ಪ 2 ಸಿನಿಮಾಗಳಲ್ಲಿ ನಟಿಸುವ ಮೂಲಕ ಸುಕುಮಾರ್ ನಿರ್ದೇಶನದ ಗರಡಿಯಲ್ಲಿ ಈಗಾಗಲೇ ಸಮಂತಾ ಪಳಗಿದ್ದಾರೆ. ಸಮಂತಾ ನಟಿಸಿದ ಈ 2 ಚಿತ್ರದ ಸೂಪರ್ ಡೂಪರ್ ಹಿಟ್ ಆಗಿದೆ. ಹೀಗಿರುವಾಗ ಸ್ಯಾಮ್ ನಟನೆ ಬಗ್ಗೆ ಸುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ಸೆಟ್ ನಿರ್ಮಾಣಕ್ಕೆ 11 ಕೋಟಿ ರೂ. ಮೀಸಲಿಟ್ಟ ಡೈರೆಕ್ಟರ್
ಈ ಹಿಂದೆ ಸುಕುಮಾರ್ ನಿರ್ದೇಶಿಸಿದ ‘ರಂಗಸ್ಥಳಂ’ ಸಿನಿಮಾದಲ್ಲಿ ರಾಮಲಕ್ಷ್ಮಿ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಆದರೆ, ಸುಕುಮಾರ್‌ಗೆ ಸಮಂತಾ ಈ ಸಿನಿಮಾಗೆ ಬೇಡ ಅಂತ ಅನಿಸಿತ್ತಂತೆ. ರಾಮ್ ಚರಣ್ ಪಾತ್ರದಲ್ಲಿ ಬೇರೆಯವರನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ಹಳ್ಳಿ ಹುಡುಗಿ ಪಾತ್ರದಲ್ಲಿ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಬಗ್ಗೆ ಯೋಚನೆ ಮಾಡಿದ್ದರಂತೆ.
ರಾಮ್ ಚರಣ್- ಸಮಂತಾ ಇಬ್ಬರೂ ಸ್ಟಾರ್ಸ್. ಇಬ್ಬರನ್ನು ಒಂದೇ ಸಿನಿಮಾದಲ್ಲಿ ಹಾಕಿಕೊಂಡರೆ ಅವರನ್ನು ಹ್ಯಾಂಡಲ್ ಮಾಡುವುದು ತುಂಬಾನೇ ಕಷ್ಟ. ಅದಕ್ಕಾಗಿ ಸಮಂತಾ ಬದಲು ಬೇರೆಯವರನ್ನು ಆಯ್ಕೆ ಮಾಡಿ ಸಿನಿಮಾ ಮುಗಿಸುವ ಪ್ಲ್ಯಾನ್ ಮಾಡಿದ್ದಂತೆ. ತಂಡದ ಜೊತೆಗಿನ ಚರ್ಚೆ ಬಳಿಕ ಮತ್ತೆ ಸಮಂತಾರನ್ನೇ ಆಯ್ಕೆ ಮಾಡಿದ್ದರು. ‘ರಂಗಸ್ಥಳಂ’ನಲ್ಲಿ ಅವರ ಅಭಿನಯ ನೋಡಿ ಸುಕುಮಾರ್ ಫಿದಾ ಆಗಿದ್ದಾಗಿ ಹೇಳಿದ್ದಾರೆ. ಸರಿಯಾದ ನಟಿಯನ್ನೇ ನಾವು ಆಯ್ಕೆ ಮಾಡಿದ್ವಿ ಎಂದು ಸಮಂತಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ನನ್ನ ಸಿನಿಮಾ ಕೆರಿಯರ್‌ನಲ್ಲಿ ತಾನು ನಿರ್ದೇಶನ ಮಾಡುವವರೆಗೂ ಸಮಂತಾರನ್ನು ಆಯ್ಕೆ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಸಮಂತಾಗೆ 30, 40 ಅದೆಷ್ಟೇ ವಯಸ್ಸಾದರೂ, ಅವರ ವಯಸ್ಸಿಗೆ ಸರಿ ಹೊಂದುವಂತಹ ಪಾತ್ರವನ್ನೇ ನೀಡುತ್ತೇನೆ ಎಂದಿದ್ದಾರೆ.