‘ಬಿಗ್ ಬಾಸ್’ (Bigg Boss) ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಬಣ್ಣದ ಲೋಕದಲ್ಲಿ ಅಷ್ಟೇ ಗುರುತಿಸಿಕೊಂಡಿಲ್ಲ. ಉದ್ಯಮಿಯಾಗಿಯೂ ನಟಿ ಗುರುತಿಸಿಕೊಂಡಿದ್ದಾರೆ. ಹೋಟೆಲ್ ಉದ್ಯಮದ ನಂತರ ಇದೀಗ ಆಭರಣ ಮಳಿಗೆಗೆ ತನಿಷಾ ಚಾಲನೆ ನೀಡಿದ್ದಾರೆ. ನಟಿಯ ಹೊಸ ಹೆಜ್ಜೆಗೆ ‘ಬಿಗ್ ಬಾಸ್’ ಸ್ಪರ್ಧಿಗಳು ಕೂಡ ಸಾಥ್ ನೀಡಿದ್ದಾರೆ.
View this post on Instagram
ದೊಡ್ಮನೆ ಆಟ ಮುಗಿಯುತ್ತಿದ್ದಂತೆ ತಮಗೆ ಸಿಕ್ಕಿರುವ ಜನಪ್ರಿಯತೆಯನ್ನು ಸದುಪಯೋಗಪಡಿಸಿಕೊಳ್ತಿದ್ದಾರೆ. ನಟನೆಗೆ ಮಾತ್ರ ಸೀಮಿತವಾಗದೇ ಹೊಸ ಉದ್ಯಮಕ್ಕೂ ನಟಿ ಕೈ ಹಾಕಿದ್ದಾರೆ. ಈಗೀನ ಕಾಲಕ್ಕೆ ತಕ್ಕಂತೆ ಮಹಿಳಾ ಮಣಿಗಳಿಗೆ ಇಷ್ಟವಾಗುವ ಹಾಗೇ ಸ್ಟೈಲೀಶ್ ಆಭರಣಗಳು ತನಿಷಾ ಜ್ಯುವೆಲ್ಲರಿಯಲ್ಲಿ ಸಿಗಲಿದೆ. ಇದನ್ನೂ ಓದಿ: ಸಹೋದರಿ ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ
View this post on Instagram
ತನಿಷಾ ಹೊಸ ಹೆಜ್ಜೆಗೆ ಸಾಥ್ ನೀಡಲು ಲೂಸ್ ಮಾದ ಯೋಗಿ ದಂಪತಿ, ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh), ಸಿರಿ, ಪವಿ ಪೂವಪ್ಪ, ರಕ್ಷಕ್, ನಮ್ರತಾ ಗೌಡ, ವರ್ತೂರು ಸಂತೋಷ್ (Varthur Santhosh), ವಿನಯ್ ಗೌಡ, ನೀತು ವನಜಾಕ್ಷಿ, ಸ್ನೇಹಿತ್ ಗೌಡ, ಕಿರುತೆರೆ ನಟಿ ಭವ್ಯಾ ಗೌಡ, ಕಾರುಣ್ಯ ರಾಮ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ನಟಿ ಸಂಗೀತಾ ಶೃಂಗೇರಿ (Sangeetha Sringeri) ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಬೇರೇ ಕಾರ್ಯಕ್ರಮದಲ್ಲಿ ಬ್ಯುಸಿಯಿರುವ ಕಾರಣ ಮುಂದಿನ ಬಾರಿ ಬರೋದಾಗಿ ಸಂಗೀತಾ ತಿಳಿಸಿದ್ದಾರೆ ಎಂದು ತನಿಷಾ ಮಾಹಿತಿ ನೀಡಿದ್ದರು.