ಬಿಗ್ ಬಾಸ್ ಹಿಂದಿ ಸೀಸನ್ 17 (Bigg Boss Hindi 17) ಫೈನಲಿಸ್ಟ್ ಮನ್ನಾರಾ ಚೋಪ್ರಾ (Mannara Chopra) ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸಹೋದರಿ ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಸ್ ದಂಪತಿ ಹಾಜರಿ ಹಾಕಿದ್ದಾರೆ. ಇದನ್ನೂ ಓದಿ:ಗುಟ್ಟಾಗಿ ಮದುವೆಯಾದ್ರಾ ತಮಿಳಿನ ’96’ ಚಿತ್ರದ ಗೌರಿ, ಆದಿತ್ಯ?
View this post on Instagram
Advertisement
ಮಗಳು ಮತ್ತು ಪತಿ ಜೊತೆ ಪ್ರಿಯಾಂಕಾ ಇಂಡಿಯಾದಲ್ಲಿ ಟೂರ್ ಮಾಡುತ್ತಿದ್ದಾರೆ. ಮತ್ತೆ ಭಾರತಕ್ಕೆ ಮರಳಿರುವ ಪ್ರಿಯಾಂಕಾ, ತವರು ಊರಿನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಮನ್ನಾರಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮನ್ನಾರಾ ಬರ್ತ್‌ಡೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Advertisement
View this post on Instagram
Advertisement
ಮನ್ನಾರಾ ಬರ್ತ್‌ಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಸಹಸ್ಪರ್ಧಿಗಳು ಮತ್ತು ಕೆಲ ನಟ-ನಟಿಯರು ಭಾಗಿಯಾಗಿದ್ದು, ಅದರಲ್ಲಿ ಹೈಲೆಟ್ ಆಗಿದ್ದು ಪ್ರಿಯಾಂಕಾ ಆಗಮನ. ಬಿಳಿ ಬಣ್ಣದ ಶೋಲ್ಡರ್ ಲೆಸ್ ಡ್ರೆಸ್‌ನಲ್ಲಿ ಸಖತ್ ಹಾಟ್ & ಬ್ಯೂಟಿಫುಲ್ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಬರ್ತ್‌ಡೇ ಗರ್ಲ್ ಮನ್ನಾರಾ ರೆಡ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು
Advertisement
ಅಂದಹಾಗೆ, ಇತ್ತೀಚೆಗೆ ಪ್ರಿಯಾಂಕಾ ಕುಟುಂಬ ಅಯೋಧ್ಯೆಗೆ ಭೇಟಿ ನೀಡಿದ್ದರು. ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿತ್ತು. ವಿದೇಶದಲ್ಲಿ ಸೆಟಲ್ ಆಗಿದ್ರು ಕೂಡ ನಮ್ಮ ಸಂಸ್ಕೃತಿಯನ್ನು ನಟಿ ಮರೆತಿಲ್ಲ ಎಂದು ಫ್ಯಾನ್ಸ್ ಬೆನ್ನು ತಟ್ಟಿದ್ದರು.