ಅಲ್ಲು ಅರ್ಜುನ್, ಫಹಾದ್ ಕಾಂಬಿನೇಷನ್ ಹೇಗಿರಲಿದೆ? ಸುಳಿವು ಬಿಟ್ಟು ಕೊಟ್ಟ ಸುಕುಮಾರ್

Public TV
2 Min Read
allu arjun

ಲ್ಲು ಅರ್ಜುನ್ (Allu Arjun) ಮತ್ತು ಸುಕುಮಾರ್ (Sukumar) ಮತ್ತೊಂದು ಇತಿಹಾಸ ಸೃಷ್ಟಿ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಇವರಿಬ್ಬರ ಕಾಂಬಿನೇಶನ್ ಸಿನಿಮಾದ ಮೊದಲ ಭಾಗ ಬಂದಿದೆ. ಪಾರ್ಟ್‌ 2 ಶೂಟಿಂಗ್‌ ಭರದಿಂದ ಸಾಗುತ್ತಿದೆ. ಹೀಗಿರುವಾಗ ಇನ್ಯಾವ ರೀತಿ ಕಥೆ ಹೆಣೆದಿದ್ದಾರೆ ಡೈರೆಕ್ಟರ್‌ ಸುಕುಮಾರ್? ಈ ಬಾರಿ ಪುಷ್ಪ ಸರಣಿನಲ್ಲಿ ಇನ್ನೇನು ಹೊಸದನ್ನು ತೋರಿಸಲಿದ್ದಾರೆ ಎಂದು ಫ್ಯಾನ್ಸ್‌ ಯೋಚನೆ ಮಾಡುತ್ತಿರುವಾಗಲೇ ಪುಷ್ಪ 2 ಬಗ್ಗೆ ಸುಕುಮಾರ್‌ ಸುಳಿವೊಂದನ್ನು ನೀಡಿದ್ದಾರೆ.

pushpa 2 2

ಅಲ್ಲು ಅರ್ಜುನ್ ಈಗ ಬರೀ ಟಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಅವರನ್ನು ಜನರು ಎಲ್ಲಿಗೋ ಹೋಗಿ ಮುಟ್ಟಿಸಿದ್ದಾರೆ. ಅದಕ್ಕೆಲ್ಲ ಕಾರಣ ‘ಪುಷ್ಪ’ ಸಿನಿಮಾ. ಮೊದಲ ಭಾಗ ಬಂದಿದ್ದು, ಅದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿ ಸೌಂಡ್ ಮಾಡ್ತು. 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದನ್ನೂ ಓದಿ:ವದಂತಿಗೆ ಬ್ರೇಕ್, ಕಡೆಗೂ ಸ್ನೇಹಿತ್ ಜೊತೆ ಕಾಣಿಸಿಕೊಂಡ ವಿನಯ್

Sukumaran

ಇದಕ್ಕೆಲ್ಲ ಕಳಸ ಇಟ್ಟಂತೆ ಅದೇ ಪಾತ್ರಕ್ಕಾಗಿ ಅಲ್ಲು ಅರ್ಜುನ್‌ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್, ರಾಷ್ಟ್ರ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡಿದ್ದರು. ಈಗ ಪುಷ್ಪ 2ನೇ ಭಾಗ ಇದೇ ಆಗಸ್ಟ್ 15ಕ್ಕೆ ಬರಲಿದೆ. ಅದರ ನಂತರ ಮುಂದೇನು? ಸುಕುಮಾರ್ ಹೊಸ ಪ್ಲಾನ್ ಹೆಣೆದಿದ್ದಾರೆ. 3ನೇ ಭಾಗಕ್ಕೆ ಈಗಲೇ ಸ್ಕೆಚ್ ಹಾಕಿದ್ದಾರೆ.

ಪುಷ್ಪ ಪಾರ್ಟ್ 2ಗೆ ‘ಪುಷ್ಪ ದಿ ರೂಲ್’ ಎಂದು ಹೆಸರು ಇಟ್ಟಿದ್ದಾರೆ. ಆದರೆ 3ನೇ ಭಾಗಕ್ಕೆ ‘ಪುಷ್ಪ ದಿ ರೋರ್’ ಎಂದು ಇಡಲಿದ್ದಾರಂತೆ. ಪುಷ್ಪ 2ನೇ ಭಾಗದಲ್ಲಿ ಫಹಾದ್ ಫಾಸಿಲ್ (Fahadh Faasil) ಹಾಗೂ ಅಲ್ಲು ಅರ್ಜುನ್ ಕಾಂಬೋ ಅದ್ಭುತ ಎಂದಿದ್ದಾರೆ ಸುಕುಮಾರ್. ಇಬ್ಬರ ಜುಗಲ್‌ಬಂದಿ ಚೆನ್ನಾಗಿ ಮೂಡಿ ಬಂದಿದೆ ಎಂಬ ಸುಳಿವೊಂದನ್ನು ನೀಡಿದ್ದಾರೆ. ಇಬ್ಬರ ಕಾಂಬೋ ಪ್ರೇಕ್ಷಕರಿಗೆ ಕಿಕ್‌ ಕೋಡೋದಂತೂ ಗ್ಯಾರಂಟಿ ಎಂಬ ಇನ್‌ಸೈಡ್‌ ನ್ಯೂಸ್‌ ಸಿಕ್ಕಿದೆ. ಅದು ಹೇಗಿರಲಿದೆ? ಯಾವ ರೀತಿ ಜನರಿಗೆ ಹುಚ್ಚು ಹಿಡಿಸಲಿದೆ? ಅದಕ್ಕೆಲ್ಲ ನೀವು ಇನ್ನು ಕೆಲವು ತಿಂಗಳು ಕಾಯಬೇಕು. ಈಗ ಅದರ ಶೂಟಿಂಗ್ ನಡೆಯುತ್ತಿದೆ. ಭರ್ಜರಿ ತಯಾರಿಯಲ್ಲಿ ಅಲ್ಲು ನಿಂತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಇನ್ನೇನು ಕಮಾಲ್ ಮಾಡಲಿದ್ದಾರೆ ನೋಡಬೇಕು.

Share This Article