‘ಗುಂಟೂರು ಖಾರಂ’ ಇನ್ನೇನು ಬರಲಿದೆ. ಜನವರಿ 12ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಪ್ರಿನ್ಸ್ ಮಹೇಶ್ ಬಾಬು- ಶ್ರೀಲೀಲಾ (Sreeleela) ಕಾಂಬಿನೇಶನ್ ಭರ್ಜರಿ ಸದ್ದು ಮಾಡುತ್ತಿದೆ. ಅದಕ್ಕೆ ಸರಿಯಾಗಿ ಮಹೇಶ್ ಬಾಬು ಕೂಡ ಶ್ರೀಲೀಲಾ ಕುಣಿತಕ್ಕೆ ಮಾರು ಹೋಗಿದ್ದಾರೆ. ಇನ್ನೆಂದೂ ನಾನು ಶ್ರೀಲೀಲಾ ಜೊತೆ ಕಾಂಪಿಟೇಶನ್ ಮಾಡಲ್ಲ ಎಂದಿದ್ದಾರೆ. ಇದನ್ನು ಕೇಳಿ ಶ್ರೀಲೀಲಾ ಥ್ರಿಲ್ ಆಗಿದ್ದಾರೆ.
ಕಳೆದ ವರ್ಷ ನಾಲ್ಕು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದರು. ಆದರೆ 3 ಸಿನಿಮಾಗಳು ಮಕಾಡೆ ಮಲಗಿದೆ. ‘ಭಗವಂತ ಕೇಸರಿ’ ಗೆದ್ದರೂ ಅದರ ಕ್ರೆಡಿಟ್ ಈಕೆಗೆ ಸಲ್ಲಲಿಲ್ಲ. ಬಾಲಕೃಷ್ಣ ಪಾಲಾಯಿತು. ಈಗ ‘ಗುಂಟೂರೂ ಖಾರಂ’ (Guntur Kaaram) ಬರಲಿದೆ. ಜನವರಿ 12ಕ್ಕೆ ಬಿಡುಗಡೆಯಾಗುತ್ತಿದೆ. ಟಾಲಿವುಡ್ ಹ್ಯಾಂಡ್ಸಮ್ ಹಂಕ್ ಮಹೇಶ್ ಬಾಬು (Mahesh Babu) ಜೊತೆ ಶ್ರೀಲೀಲಾ ಕುಣಿದಿದ್ದಾರೆ. ಅದು ಗೆದ್ದರೆ ಶ್ರೀಲೀಲಾ ಭವಿಷ್ಯ ಉಜ್ವಲ. ಇನ್ನೂ ಸಿನಿಮಾ ಪ್ರಚಾರ ಕಾರ್ಯದ ವೇಳೆ, ಪ್ರಿನ್ಸ್ ಶ್ರೀಲೀಲಾ ಅಭಿನಯ ಹಾಗೂ ಕುಣಿತವನ್ನು ಮನಸಾರೆ ಹೊಗಳಿದ್ದಾರೆ. ಇದನ್ನೂ ಓದಿ:ರಜನಿ ಅಭಿಮಾನಿಗಳಿಗೆ ನಿರಾಸೆ : ಸಂಕ್ರಾಂತಿಗೆ ಬರ್ತಿಲ್ಲ ‘ಲಾಲ್ ಸಲಾಂ’

ಕನ್ನಡದ ಕಿಸ್, ಭರಾಟೆ, ಸಿನಿಮಾಗಳ ಮೂಲಕ ನಾಯಕಿಯಾಗಿ ಪರಿಚಿತರಾದ ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡ್ತಿದ್ದಾರೆ. ಟಾಪ್ ಹೀರೋಗಳಿಗೆ ನಾಯಕಿಯಾಗಿ ಕನ್ನಡದ ನಟಿ ಸದ್ದು ಮಾಡ್ತಿದ್ದಾರೆ.


