ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯ ಇಬ್ಬರು ಮುಸ್ಲಿಂ ಶಿಲ್ಪಿಗಳು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ಮುಂಬರುವ ರಾಮಮಂದಿರದ ಉದ್ಘಾಟನೆಗೆ ಭಗವಾನ್ ರಾಮನ ವಿಗ್ರಹ ರೂಪಿಸಿದ್ದಾರೆ.
ಮೊಹಮ್ಮದ್ ಜಮಾಲುದ್ದೀನ್ ಮತ್ತು ಅವರ ಮಗ ಬಿಟ್ಟು ದೇವಸ್ಥಾನದ ಸಂಕೀರ್ಣವನ್ನು ಅಲಂಕರಿಸುವ ಈ ಭವ್ಯವಾದ ಪ್ರತಿಮೆಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಿಗ್ರಹಕ್ಕೆ ಸುಮಾರು 2.8 ಲಕ್ಷ ರೂಪಾಯಿಯಷ್ಟು ವೆಚ್ಚವಾಗಬಹುದು. ಇದನ್ನೂ ಓದಿ: ತಪ್ಪಾಗಿ ಹೆಸರು ಸೇರ್ಪಡೆ; ಡಿಎಂಕೆ ಸಂಸದನ ಅಮಾನತು ಹಿಂಪಡೆದ ಕೇಂದ್ರ
ಜೇಡಿಮಣ್ಣಿಗೆ ಹೋಲಿಸಿದರೆ ಫೈಬರ್ ಪ್ರತಿಮೆಗಳ ವೆಚ್ಚ ಹೆಚ್ಚು. ಉತ್ತಮ ಬಾಳಿಕೆ ಬರುತ್ತವೆ. ಅಲ್ಲದೇ ಹವಾಮಾನ ಪರಿಸ್ಥಿತಿಗಳಿಗೆ ಪ್ರತಿರೋಧ ಒಡ್ಡುತ್ತವೆ. ಹೀಗಾಗಿ ಹೊರಾಂಗಣದಲ್ಲಿ ಪ್ರತಿಷ್ಟಾಪನೆಗೆ ಆದ್ಯತೆಯ ಆಯ್ಕೆಯಾಗಿದೆ ಎಂದು ಜಮಾಲುದ್ದೀನ್ ತಿಳಿಸಿದ್ದಾರೆ.
ಧರ್ಮ ವೈಯಕ್ತಿಕ ವಿಷಯ. ನಮ್ಮ ದೇಶದಲ್ಲಿ ವಿವಿಧ ಧರ್ಮಗಳ ಜನರಿದ್ದಾರೆ. ಕೋಮುವಾದದ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇರಬೇಕು. ಭಗವಾನ್ ರಾಮನ ಪ್ರತಿಮೆಯನ್ನು ಮಾಡಲು ನಮಗೆ ಸಂತೋಷವಿದೆ. ಒಬ್ಬ ಕಲಾವಿದನಾಗಿ ‘ಸಹೋದರತ್ವದ ಸಂಸ್ಕೃತಿ’ಯೇ ನನ್ನ ಸಂದೇಶ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ ಅವ್ರು ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಲ್ಲವೂ ತನಿಖೆ ಆಗುತ್ತೆ: ಪ್ರಹ್ಲಾದ್ ಜೋಶಿ
ರಾಮನಷ್ಟೇ ಅಲ್ಲ, ನಾನು ಮಾತಾ ದುರ್ಗಾ ಮತ್ತು ಜಗಧಾತ್ರಿಯ ಬೃಹತ್ ಶಿಲ್ಪಗಳನ್ನು ಸಹ ರಚಿಸಿದ್ದೇನೆ. ಅವು ಸಾಕಷ್ಟು ಜನಪ್ರಿಯತೆ ಗಳಿಸಿವೆ. ಹಲವು ವರ್ಷಗಳಿಂದ ವಿವಿಧ ಹಿಂದೂ ದೇವತೆಗಳ ಫೈಬರ್ ಶಿಲ್ಪಗಳನ್ನು ತಯಾರಿಸುತ್ತಿದ್ದೇವೆ. ಆ ಮೂಲಕ ಸಾಂಸ್ಕೃತಿಕ ಸಾಮರಸ್ಯವನ್ನು ಗೌರವಿಸುತ್ತೇವೆ ಎಂದು ಶಿಲ್ಪಿ ಹೇಳಿಕೊಂಡಿದ್ದಾರೆ.
30 ರಿಂದ 35 ಜನರ ತಂಡವು ಪ್ರತಿಮೆ ರೂಪಿಸುವ ಕಾರ್ಯದಲ್ಲಿ ತೊಡಗಿದೆ. ಪ್ರತಿಮೆ ಸಿದ್ಧಗೊಳಿಸಲು ಒಂದರಿಂದ ಒಂದೂವರೆ ತಿಂಗಳು ಬೇಕಾಗುತ್ತದೆ. ಈ ಪ್ರತಿಮೆಯನ್ನು ಉತ್ತರ ಪ್ರದೇಶಕ್ಕೆ ಸಾಗಿಸಲು 45 ದಿನ ತೆಗೆದುಕೊಳ್ಳಬಹುದು ಎಂದು ಕೆಲಸದ ನೇತೃತ್ವ ವಹಿಸಿರುವ ಶಿಲ್ಪಿ ಬಿಟ್ಟು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್ ಅನುಮತಿ