Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ ಎಂದ ಪ್ರಧಾನಿ – ಯಾರಿಗೇನು ಲಾಭ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ ಎಂದ ಪ್ರಧಾನಿ – ಯಾರಿಗೇನು ಲಾಭ?

Latest

ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ ಎಂದ ಪ್ರಧಾನಿ – ಯಾರಿಗೇನು ಲಾಭ?

Public TV
Last updated: February 7, 2026 12:17 pm
Public TV
Share
4 Min Read
India USA Deal
SHARE

– ದೇಶದ ರೈತರು, ಉದ್ಯಮಿಗಳು, ನವೋದ್ಯಮಗಳಿಗೆ ಪ್ರಯೋಜನ
– ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಅಂಶಗಳು ಇಲ್ಲಿವೆ

ನವದೆಹಲಿ/ವಾಷಿಂಗ್ಟನ್‌: ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮುಂಚಿತವಾಗಿ, ಉಭಯ ರಾಷ್ಟ್ರಗಳು ಮಧ್ಯಂತರ ವ್ಯಾಪಾರ ಚೌಕಟ್ಟನ್ನ (India-US Trade Framework) ಘೋಷಿಸಿವೆ. ಅಮೆರಿಕ ಭಾರತದ ಮೇಲಿನ ಆಮದು ಸುಂಕವನ್ನು 18% ಇಳಿಕೆ ಮತ್ತು ರಷ್ಯಾ ತೈಲ ಖರೀದಿ ಹಿನ್ನೆಲೆ ವಿಧಿಸಿದ್ದ 25% ಹೆಚ್ಚುವರಿ ಸುಂಕವನ್ನು ತೆಗೆದುಹಾಕಿದ ಬಳಿಕ ವ್ಯಾಪಾರ ಚೌಕಟ್ಟು ಘೋಷಣೆ ಹೊರಬಿದ್ದಿದೆ.

ಉಭಯ ರಾಷ್ಟ್ರಗಳ ನಡುವೆ ಮಧ್ಯಂತರ ವ್ಯಾಪಾರ ಚೌಕಟ್ಟಿನ ರಚನೆಯಾಗಿದ್ದು, ಶೇ. 18ರ ತೆರಿಗೆ ವ್ಯಾಪ್ತಿಗೆ ಒಳಪಡುವ ವಸ್ತುಗಳ ಪರಸ್ಪರ ರಫ್ತು ವಹಿವಾಟಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚೆಗಳನ್ನ ಆರಂಭಿಸಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಣೆಗೂ ಮುನ್ನುಡಿ ಬರೆದಿದೆ.

Great news for India and USA!

We have agreed on a framework for an Interim Trade Agreement between our two great nations. I thank President Trump for his personal commitment to robust ties between our countries.

This framework reflects the growing depth, trust and dynamism of… https://t.co/zs1ZLzamhd

— Narendra Modi (@narendramodi) February 7, 2026

ಇನ್ನೂ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಪ್ರತಿಕ್ರಿಯಿಸಿ, ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನನ್ನ ಹಂಚಿಕೊಂಡಿದ್ದು, ಭಾರತ ಮತ್ತು ಅಮೆರಿಕಕ್ಕೆ ಗ್ರೇಟ್‌ ನ್ಯೂಸ್‌ ಎಂದು ಬರೆದುಕೊಂಡಿದ್ದಾರೆ.

ಮೋದಿ ಪ್ರತಿಕ್ರಿಯೆ ಏನು?
ಭಾರತ ಮತ್ತು ಅಮೆರಿಕಕ್ಕೆ ಶುಭ ಸುದ್ದಿ. ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನ ನಾವು ಒಪ್ಪಿಕೊಂಡಿದ್ದೇವೆ. ನಮ್ಮ ದೇಶಗಳ ನಡುವಿನ ಬಲವಾದ ಸಂಬಂಧಗಳಿಗೆ ಅಧ್ಯಕ್ಷ ಟ್ರಂಪ್ (Donald Trump) ಅವರ ವೈಯಕ್ತಿಕ ಬದ್ಧತೆಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.

ಈ ಒಪ್ಪಂದವು ಭಾರತ ಮತ್ತು ಅಮೆರಿಕ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. ಭಾರತೀಯ ರೈತರು, ಉದ್ಯಮಿಗಳು ಮತ್ತು ನವೋದ್ಯಮಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಜೊತೆಗೆ ನಮ್ಮ ಪಾಲುದಾರಿಕೆಯ ಆಳ, ವಿಶ್ವಾಸ ಮತ್ತು ಚೈತನ್ಯವನ್ನ ಪ್ರತಿಬಿಂಬಿಸುತ್ತದೆ. ಭಾರತದ ಶ್ರಮಶೀಲ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳು, ನವೋದ್ಯಮ ನಾವೀನ್ಯಕಾರರು, ಮೀನುಗಾರರು ಮತ್ತು ಇತರರಿಗೆ ಹೊಸ ಅವಕಾಶಗಳನ್ನ ತೆರೆಯುತ್ತದೆ. ಈ ಮೂಲಕ ‘ಮೇಕ್ ಇನ್ ಇಂಡಿಯಾ’ ಅನ್ನು ಬಲಪಡಿಸುತ್ತದೆ. ಅಲ್ಲದೇ ಮಹಿಳೆಯರು ಮತ್ತು ಯುವಕರಿಗೆ ಬೃಹತ್ ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

Narendra Modi great friend of mine Donald Trump Announces 26 percentage Discounted Reciprocal Tariff On India

ಭಾರತ ಮತ್ತು ಅಮೆರಿಕ ನಾವೀನ್ಯತೆಯನ್ನ ಉತ್ತೇಜಿಸುವ ಬದ್ಧತೆಯನ್ನು ಹಂಚಿಕೊಳ್ಳುತ್ತವೆ ಮತ್ತು ಈ ಚೌಕಟ್ಟು ನಮ್ಮ ನಡುವಿನ ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಈ ಚೌಕಟ್ಟು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನ ಬಲಪಡಿಸುತ್ತದೆ ಮತ್ತು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ನಾವು ವಿಕಸಿತ ಭಾರತವನ್ನ ನಿರ್ಮಿಸುವತ್ತ ಸಾಗುತ್ತಿರುವಾಗ, ನಮ್ಮ ಜನರನ್ನು ಸಬಲೀಕರಣಗೊಳಿಸುವ ಮತ್ತು ಹಂಚಿಕೆಯ ಸಮೃದ್ಧಿಗೆ ಕೊಡುಗೆ ನೀಡುವ ಜಾಗತಿಕ ಪಾಲುದಾರಿಕೆಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಪ್ರಮುಖ ಅಂಶಗಳು
* ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಮೂಲಕ ಸುಂಕವನ್ನ 25% ರಿಂದ 18%ಗೆ ಇಳಿಸುವ ಜೊತೆಗೆ, ಹೆಚ್ಚುವರಿ 25% ಸುಂಕ ಕಡಿತಗೊಳಿಸಿತು. ಇದು ಭಾರತೀಯ ರಫ್ತುದಾರರಿಗೆ ದೊಡ್ಡ ಮಾರುಕಟ್ಟೆ ಒದಗಿಸುತ್ತದೆ.
* ಅಮೆರಿಕದ ಸುಮಾರು 30 ಲಕ್ಷ ಕೋಟಿ ಡಾಲರ್‌ ಮಾರುಕಟ್ಟೆ ಈಗ MSME ಗಳು, ರೈತರು ಮತ್ತು ಮೀನುಗಾರರಿಗೆ ಮುಕ್ತವಾಗಿದೆ.
* ರಫ್ತು ಹೆಚ್ಚಿಸುವುದರಿಂದ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ, ವಿಶೇಷವಾಗಿ ಮಹಿಳೆಯರು ಮತ್ತು ಯುವಕರಿಗೆ
* ಜೆನೆರಿಕ್ ಔಷಧಗಳು, ವಜ್ರಗಳು ಮತ್ತು ಆಭರಣಗಳು ಮತ್ತು ವಿಮಾನ ಭಾಗಗಳ ಮೇಲಿನ ಸುಂಕವು 0% ಆಗಿರುತ್ತದೆ
* ಜವಳಿ, ಸಿದ್ಧ ಉಡುಪುಗಳು, ಚರ್ಮ, ಪಾದರಕ್ಷೆಗಳು, ಪ್ಲಾಸ್ಟಿಕ್‌ಗಳು, ರಬ್ಬರ್, ಸಾವಯವ ರಾಸಾಯನಿಕಗಳು, ಗೃಹಾಲಂಕಾರ, ಕರಕುಶಲ ವಸ್ತುಗಳು ಮತ್ತು ಕೆಲವು ಯಂತ್ರೋಪಕರಣಗಳಲ್ಲಿ ಅವಕಾಶಗಳು ಹೆಚ್ಚಾಗುತ್ತವೆ.
* ಗೋಧಿ, ಅಕ್ಕಿ, ಮೆಕ್ಕೆಜೋಳ, ಹಾಲು, ಚೀಸ್, ಕೋಳಿ ಮಾಂಸ ಮತ್ತು ಇತರ ಸೂಕ್ಷ್ಮ ಉತ್ಪನ್ನಗಳ ಮೇಲೆ ಯಾವುದೇ ರಾಜಿ ಇಲ್ಲ.
* ಅಮೆರಿಕದ ಕೃಷಿ ಮತ್ತು ಕೈಗಾರಿಕಾ ಸರಕುಗಳಾದ ಬೀಜಗಳು, ಹಣ್ಣುಗಳು, ಸೋಯಾಬೀನ್ ಎಣ್ಣೆ, ಮದ್ಯ ಮತ್ತು ಪಶು ಆಹಾರದ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗುವುದು.
* ಡೇಟಾ ಕೇಂದ್ರಗಳು, ಇತರ ತಾಂತ್ರಿಕ ಉಪಕರಣಗಳು ಮತ್ತು ಡಿಜಿಟಲ್ ವ್ಯವಹಾರಗಳಲ್ಲಿ ಬಳಸುವ GPU ಗಳಲ್ಲಿ ಸಹಕಾರ ಹೆಚ್ಚಾಗುತ್ತದೆ
* ಎರಡೂ ದೇಶಗಳು ಒಟ್ಟಾಗಿ ಪೂರೈಕೆ ಸರಪಳಿಯನ್ನ ಬಲಪಡಿಸುತ್ತವೆ ಮತ್ತು 3ನೇ ದೇಶಗಳ ನೀತಿಗಳಿಂದ ರಕ್ಷಣೆ ಖಚಿತಪಡಿಸಿಕೊಳ್ಳುತ್ತವೆ.
* ಮುಂದಿನ 5 ವರ್ಷಗಳಲ್ಲಿ ಭಾರತವು ಅಮೆರಿಕದಿಂದ 500 ಶತಕೋಟಿ ಮೌಲ್ಯದ ಇಂಧನ, ವಿಮಾನ, ಲೋಹಗಳು, ತಂತ್ರಜ್ಞಾನ ಮತ್ತು ಕಲ್ಲಿದ್ದಲು ಸರಕುಗಳನ್ನು ಖರೀದಿಸಲಿದೆ.
* ಈ ಚೌಕಟ್ಟನ್ನ ತಕ್ಷಣವೇ ಜಾರಿಗೆ ತರಲಾಗುವುದು ಮತ್ತು ಭವಿಷ್ಯದಲ್ಲಿ ಪೂರ್ಣ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವತ್ತ ಕೆಲಸ ಮಾಡಲಾಗುವುದು.

TAGGED:American Ambassadordonald trumpindialowers tariffsnarendra modiSergio GorTrade dealUS Presidentಅಮೆರಿಕಡೊನಾಲ್ಡ್ ಟ್ರಂಪ್ನರೇಂದ್ರ ಮೋದಿಶ್ವೇತಭವನ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

supreme Court 1
Court

ಏಕರೂಪ ನಾಗರಿಕ ಸಂಹಿತೆ ಜಾರಿಗೆ ‘ಸುಪ್ರೀಂ’ ಅಸ್ತು

Public TV
By Public TV
7 hours ago
d.k.shivakumar dinner party
Bengaluru City

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ 6 ವರ್ಷ – ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಪಾರ್ಟಿ

Public TV
By Public TV
8 hours ago
Gas Emergency
Latest

ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ – ಬುಕ್ಕಿಂಗ್ ಅವಧಿಯನ್ನು 21ರಿಂದ 25 ದಿನಕ್ಕೆ ಹೆಚ್ಚಿಸಿದ ಕೇಂದ್ರ

Public TV
By Public TV
8 hours ago
OPD
Bengaluru City

ಮುಷ್ಕರದಿಂದ ಹಿಂದೆ ಸರಿದ ವೈದ್ಯರು – ನಾಳೆಯಿಂದ ಎಂದಿನಂತೆ ಓಪಿಡಿ ಓಪನ್

Public TV
By Public TV
9 hours ago
smriti irani lakshmi hebbalkar
Bengaluru City

ಸ್ಮೃತಿ ಇರಾನಿ ಕಾಣುತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವ್ಯಂಗ್ಯ

Public TV
By Public TV
10 hours ago
Eshwar Khandre
Bengaluru City

1 ಮರ ಕಡಿದರೆ 10 ಸಸಿ ನೆಡಲು ವಿಧಿಸುವ ಶುಲ್ಕಕ್ಕೆ ವಿನಾಯಿತಿ ಇಲ್ಲ: ಈಶ್ವರ ಖಂಡ್ರೆ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?