ತಿಂಡಿ ಕೊಡಲು ತಡವಾಗಿದ್ದಕ್ಕೆ ಬಿಸಿ ಎಣ್ಣೆ ಎರಚಿದ ಗ್ರಾಹಕ

Public TV
1 Min Read
RAICHUR OIL

ರಾಯಚೂರು: ಗ್ರಾಹಕನೊಬ್ಬ ಹೊಟೇಲ್ ಮಾಲೀಕನ ಮೇಲೆ ಅಡುಗೆ ಎಣ್ಣೆ ಎರಚಿದ ಪ್ರಕರಣವೊಂದು ರಾಯಚೂರಿನಲ್ಲಿ (Raichur) ಬೆಳಕಿಗೆ ಬಂದಿದೆ.

ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗಾಯಾಳು ಹೋಟೆಲ್ (Hotel) ಮಾಲೀಕನನ್ನು ರಂಗಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಭೀಮಾ ನಾಯಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

ನಡೆದಿದ್ದೇನು..?: ಇಂದು ಬೆಳ್ಳಂಬೆಳಗ್ಗೆ ಭೀಮಾ ನಾಯಕ್ ಹೋಟೆಲ್‍ಗೆ ಬಂದಿದ್ದಾನೆ. ಹೀಗೆ ಬಂದವನು ಇಡ್ಲಿ ಕೊಡಿ ಎಂದು ಕೇಳಿದ್ದಾನೆ. ಆಗ ಮಾಲೀಕ ರಂಗಯ್ಯ, ಇಡ್ಲಿ ಇಲ್ಲ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಅಂತೆಯೇ ಹೋದ ಭೀಮಾ ನಾಯಕ್ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ವಾಪಸ್ ಹೋಟೆಲ್‍ಗೆ ಬಂದಿದ್ದಾನೆ. ಇದನ್ನೂ ಓದಿ: ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ ಗ್ಯಾರಂಟಿ ಭಜನೆಗೆ ಮರುಳಾಗಬಾರದು: ಹೆಚ್‍ಡಿಕೆ

ಈ ವೇಳೆ ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಆದರೆ ಇದು ತಂದುಕೊಡುವುದು ಸ್ವಲ್ಪ ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಭೀಮಾ ನಾಯಕ್, ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ರಂಗಯ್ಯ ಮುಖಕ್ಕೆ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಇತ್ತ ಗಾಯಗೊಂಡ ರಂಗಯ್ಯ ಅವರನ್ನು ಕುಡಲೇ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article