ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್‌ನಲ್ಲಿ ‘ಗೀತಾ’ ಸೀರಿಯಲ್ ನಟಿ

Public TV
1 Min Read
sharmitha gowda

ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha Serial) ಮೂಲಕ ಪರಿಚಿತರಾದ ಲೇಡಿ ವಿಲನ್ ಶರ್ಮಿತ ಗೌಡ (Sharmitha Gowda) ಮತ್ತೆ ಹೊಸ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ನಟಿಯ ಹಾಟ್ & ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

sharmitha gowda

ಭಾನುಮತಿ ಎಂಬ ವಿಲನ್ ರೋಲ್‌ನಿಂದ ಮನಗೆದ್ದಿರುವ ಶರ್ಮಿತ, ದುಬೈನ ಕೆಲ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಕಪ್ಪು ಮತ್ತು ಲೈಟ್ ಬಣ್ಣ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನಟಿಯ ಲುಕ್ ನೋಡಿ ಸೊಸೆ ಗೀತಾಗಿಂತ ನೀವೇ ಸೂಪರ್ ಅಂತಾ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಹೋಗುತ್ತಿಲ್ಲ: ನಟಿ ರಂಜನಿ ರಾಘವನ್ ಸ್ಪಷ್ಟನೆ

sharmitha gowda 2

ಕನ್ನಡದ ಜೊತೆ ಪರಭಾಷೆಯ ಸೀರಿಯಲ್‌ನಲ್ಲೂ ಶರ್ಮಿತ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲೂ ಪೋಷಕ ಪಾತ್ರಗಳನ್ನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಜ್ಯೂನಿಯರ್ ಚಿತ್ರಕ್ಕೆ ಪ್ರಶಾಂತ್ ನೀಲ್ ಜೈ, ಸದ್ಯಕ್ಕಿಲ್ಲ ಕೆಜಿಎಫ್ 3

sharmitha gowda 1

ಕೆಲ ತಿಂಗಳ ಹಿಂದೆ ಬಿಕಿನಿ ಫೋಟೋಗಳನ್ನ ನಟಿ ಶೇರ್ ಮಾಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇಷ್ಟು ಫಿಟ್ ಆಗಿರೋ ನಟಿ, ತಾಯಿ ರೋಲ್ ಮಾಡ್ತಾರಾ ಅಂತಾ ಬಾಯಿ ಮೇಲೆ ಬೆರಳು ಇಟ್ಟಿದ್ದರು. ಅಷ್ಟರ ಮಟ್ಟಿಗೆ ಶರ್ಮಿತ ಬಿಕಿನಿ ಅವತಾರ ಪಡ್ಡೆಹುಡುಗರ ದಿಲ್ ಕದ್ದಿತ್ತು.

ಪ್ರಸ್ತುತ ‘ಗೀತಾ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಶರ್ಮಿತ ನಟಿಸುತ್ತಿದ್ದಾರೆ. ಭವ್ಯಾ ಗೌಡ (Bhavya Gowda) ಮತ್ತು ಧನುಷ್ ಗೌಡ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ (Bigg Boss Kannada) ಶುರುವಾಗುತ್ತಿರೋ ಕಾರಣ, ಸೀರಿಯಲ್ ಅಂತ್ಯವಾಗುವ ಸಾಧ್ಯತೆಯಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article