ತಿರುವನಂತಪುರಂ: ಇಬ್ಬರನ್ನು ನಿಫಾ ವೈರಸ್ (Nipah Virus) ಹರಡುವಿಕೆ ತಡೆಗಟ್ಟಲು ಕೇರಳ ಸರ್ಕಾರ (Kerala Government) ಕೋಝಿಕೋಡ್‌ನ ಶಾಲಾ-ಕಾಲೇಜುಗಳಿಗೆ ನೀಡಿರುವ ರಜೆಯನ್ನ ಸೆಪ್ಟೆಂಬರ್ 16ರ ವರೆಗೆ ವಿಸ್ತರಣೆ ಮಾಡಿದೆ.
ನಿಫಾ ವೈರಸ್‌ಗೆ ಇಬ್ಬರು ಸಾವನ್ನಪ್ಪಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಸೆಪ್ಟೆಂಬರ್ 14 ಮತ್ತು 15 ರಂದು ರಜೆ ಘೋಷಣೆ ಮಾಡಿತ್ತು. ಕೋಝಿಕೋಡ್ (Kozhikode) ಜಿಲ್ಲೆಯ ಅಂಗನವಾಡಿಗಳು, ಮದರಸಾಗಳು, ಟ್ಯೂಷನ್ ಸೆಂಟರ್‌ಗಳು ಸೇರಿದಂತೆ ವೃತ್ತಿಪರ ಕಾಲೇಜುಗಳೂ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದ್ರೆ ವಿಶ್ವವಿದ್ಯಾಲಯ ಮತ್ತು ಪಬ್ಲಿಕ್ ಸರ್ವಿಸ್ ಕಮಿಷನ್ (PSC) ಪರೀಕ್ಷಾ ವೇಳಾಪಟ್ಟಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನ ಏರ್ಪಡಿಸುವಂತೆ ಒತ್ತಾಯಿಸಿವೆ.
ಈ ದಿನಗಳು ಸಂಭ್ರಮಾಚರಣೆಯ ದಿನಗಳಾಗಬಾರದು, ಅನಗತ್ಯ ಪ್ರಯಾಣ ಮತ್ತು ಸಮಾರಂಭ ಆಯೋಜನೆ ಮಾಡುವುದನ್ನ ತಪ್ಪಿಸಬೇಕು ಅಂತಲೂ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ದೆಹಲಿಯಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಉನ್ನತಮಟ್ಟದ ಚರ್ಚೆ ನಡೆಸಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ – ಸಂಪರ್ಕ ಪಟ್ಟಿಯಲ್ಲಿ 706 ಜನ
ಕೋಯಿಕೋಡ್‌ನ (Kozhikode) ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ವೈರಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಸದ್ಯ 706 ಜನ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಅದರಲ್ಲಿ 77 ಮಂದಿ ಹೈ-ರಿಸ್ಕ್‌ನಲ್ಲಿದ್ದಾರೆ ಮತ್ತು 153 ಕಾರ್ಯಕರ್ತರು ಆರೋಗ್ಯವಾಗಿದ್ದಾರೆ. ಹೈ-ರಿಸ್ಕ್ ವರ್ಗದಲ್ಲಿರುವವರಿಗೆ ಪ್ರಸ್ತುತ ಯಾವುದೇ ರೋಗಲಕ್ಷಣಗಳು ಕಾಣಿಸುತ್ತಿಲ್ಲ ಎಂದಿದ್ದಾರೆ.
ಸ್ತುತ 13 ಜನರು ಆಸ್ಪತ್ರೆಯ ನಿಗಾದಲ್ಲಿದ್ದು, ತಲೆ ನೋವಿನಂತಹ ಸಣ್ಣಪುಟ್ಟ ಲಕ್ಷಣಗಳು ಕಾಣಿಸುತ್ತಿವೆ. ಹೈ-ರಿಸ್ಕ್ ವರ್ಗದಲ್ಲಿರುವವರು ತಮ್ಮ ಮನೆಯೊಳಗಿರಬೇಕು ಎಂದು ಸರ್ಕಾರ ಸಲಹೆ ನೀಡಿದೆ. ಈ ಕುರಿತು ಎಲ್ಲಾ ಕ್ರಮಗಳನ್ನು ಸಮನ್ವಯಗೊಳಿಸಲು ಕೇರಳ (Kerala) ಸರ್ಕಾರವು 19 ಕೋರ್ ಕಮಿಟಿಗಳನ್ನು ರಚಿಸಿದೆ. ಐಸೋಲೇಷನ್‌ನಲ್ಲಿ ಇರುವವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಸ್ಥಳೀಯ ಸ್ವಯಂಸೇವಕ ತಂಡಗಳನ್ನು ರಚಿಸಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಸ್ಪೇನ್‌ನ C-295 ಮಿಲಿಟರಿ ವಿಮಾನ ಹಸ್ತಾಂತರ – ಏನಿದರ ವಿಶೇಷ?
ಮೆದುಳಿಗೆ ಹಾನಿ ಉಂಟುಮಾಡುವ ಈ ವೈರಸ್ ಕೇರಳದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸೋಂಕಿತ ವ್ಯಕ್ತಿಗಳ ಸಂಪರ್ಕಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ರೋಗಲಕ್ಷಣ ಹೊಂದಿರುವವರನ್ನು ಪ್ರತ್ಯೇಕಿಸುವತ್ತ ರಾಜ್ಯ ಆಡಳಿತ ಗಮನ ಹರಿಸುತ್ತಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ. ಅಲ್ಲದೇ ಕೋಯಿಕೋಡ್ ಜಿಲ್ಲೆಯ ಏಳು ಗ್ರಾಮ ಪಂಚಾಯತ್‌ಗಳಾದ ಅತಂಚೇರಿ, ಮಾರುತೋಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಲ್ಯಪಲ್ಲಿ ಮತ್ತು ಕವಿಲುಂಪಾರವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಸೌಮ್ಯ ಲಕ್ಷಣ ಹೊಂದಿರುವ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Web Stories