ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಅವರು ಬುಧವಾರ ಮತ್ತೊಂದು ನಿಫಾ ವೈರಸ್ (Nipah Virus) ಪ್ರಕರಣವನ್ನು ದೃಢಪಡಿಸಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಕೋಯಿಕೋಡ್‌ನ (Kozhikode) ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ವೈರಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಸದ್ಯ 706 ಜನ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಅದರಲ್ಲಿ 77 ಮಂದಿ ಹೈ-ರಿಸ್ಕ್‌ನಲ್ಲಿದ್ದಾರೆ ಮತ್ತು 153 ಕಾರ್ಯಕರ್ತರು ಆರೋಗ್ಯವಾಗಿದ್ದಾರೆ. ಹೈ-ರಿಸ್ಕ್ ವರ್ಗದಲ್ಲಿರುವವರಿಗೆ ಪ್ರಸ್ತುತ ಯಾವುದೇ ರೋಗಲಕ್ಷಣಗಳು ಕಾಣಿಸುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ
Advertisement
Advertisement
ಪ್ರಸ್ತುತ 13 ಜನರು ಆಸ್ಪತ್ರೆಯ ನಿಗಾದಲ್ಲಿದ್ದು, ತಲೆ ನೋವಿನಂತಹ ಸಣ್ಣಪುಟ್ಟ ಲಕ್ಷಣಗಳು ಕಾಣಿಸುತ್ತಿವೆ. ಹೈ-ರಿಸ್ಕ್ ವರ್ಗದಲ್ಲಿರುವವರು ತಮ್ಮ ಮನೆಯೊಳಗಿರಬೇಕು ಎಂದು ಸರ್ಕಾರ ಸಲಹೆ ನೀಡಿದೆ. ಈ ಕುರಿತು ಎಲ್ಲಾ ಕ್ರಮಗಳನ್ನು ಸಮನ್ವಯಗೊಳಿಸಲು ಕೇರಳ (Kerala) ಸರ್ಕಾರವು 19 ಕೋರ್ ಕಮಿಟಿಗಳನ್ನು ರಚಿಸಿದೆ. ಐಸೋಲೇಷನ್‌ನಲ್ಲಿ ಇರುವವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಸ್ಥಳೀಯ ಸ್ವಯಂಸೇವಕ ತಂಡಗಳನ್ನು ರಚಿಸಲಾಗಿದೆ. ಇದನ್ನೂ ಓದಿ: ಜಿ20 ಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ್ದ ಚೀನಾ – ತಪಾಸಣೆಗೆ ನಿರಾಕರಿಸಿ ಹೋಟೆಲ್‌ನಲ್ಲಿ ಹೈಡ್ರಾಮಾ
Advertisement
ಮೆದುಳಿಗೆ ಹಾನಿ ಉಂಟುಮಾಡುವ ಈ ವೈರಸ್ ಕೇರಳದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸೋಂಕಿತ ವ್ಯಕ್ತಿಗಳ ಸಂಪರ್ಕಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ರೋಗಲಕ್ಷಣ ಹೊಂದಿರುವವರನ್ನು ಪ್ರತ್ಯೇಕಿಸುವತ್ತ ರಾಜ್ಯ ಆಡಳಿತ ಗಮನ ಹರಿಸುತ್ತಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ. ಅಲ್ಲದೇ ಕೋಯಿಕೋಡ್ ಜಿಲ್ಲೆಯ ಏಳು ಗ್ರಾಮ ಪಂಚಾಯತ್‌ಗಳಾದ ಅತಂಚೇರಿ, ಮಾರುತೋಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಲ್ಯಪಲ್ಲಿ ಮತ್ತು ಕವಿಲುಂಪಾರವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ
Advertisement
ಕಂಟೈನ್‌ಮೆಂಟ್ ವಲಯದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಮನೆಯಿಂದಲೇ ತರಗತಿಗಳಿಗೆ ಹಾಜರಾಗಲು ಆನ್‌ಲೈನ್ ತರತಿಗಳನ್ನು ಆಯೋಜಿಸುವಂತೆ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಸ್ಪೇನ್‌ನ C-295 ಮಿಲಿಟರಿ ವಿಮಾನ ಹಸ್ತಾಂತರ – ಏನಿದರ ವಿಶೇಷ?
Web Stories