ಕೀರ್ತಿ ಪಾಂಡಿಯನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಅಶೋಕ್‌ ಸೆಲ್ವನ್‌

Public TV
1 Min Read
ashok selvan

ಮಿಳು ನಟ ಅಶೋಕ್ ಸೆಲ್ವನ್ (Ashok Selvan) ಜೊತೆ ನಟಿ ಕೀರ್ತಿ ಪಾಂಡಿಯನ್ (Keerthi Pandian) ದಾಂಪತ್ಯ (Wedding) ಜೀವನಕ್ಕೆ ಸೆ.13ರಂದು ಕಾಲಿಟ್ಟಿದ್ದಾರೆ. ಎರಡು ಕುಟುಂಬದ ಸಮ್ಮುಖದಲ್ಲಿ ಇಂದು ತಿರುನೆಲ್ವೇಲಿ ಸಮೀಪದ ಇಟ್ಟೇರಿಯಲ್ಲಿ ಮದುವೆ ಅದ್ದೂರಿಯಾಗಿ ನಡೆದಿದೆ. ಮದುವೆಯ ಸುಂದರ ಫೋಟೋಗಳನ್ನ ನವಜೋಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ashok selvan 2

ಖ್ಯಾತ ನಟ- ನಿರ್ಮಾಪಕ ಅರುಣ್ ಪಾಂಡಿಯನ್ (Arun Pandian) ಪುತ್ರಿ, ಕೀರ್ತಿ ಜೊತೆ ಅಶೋಕ್ ಸೆಲ್ವನ್ ಸೆ.13ರಂದು ಬೆಳಿಗ್ಗೆ 8 ಗಂಟೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅಮ್ಮಾಳ್ ಫಾರ್ಮ್‌ನಲ್ಲಿ ಈ ಮದುವೆ ಜರುಗಿದೆ. ಕೀರ್ತಿ-ಅಶೋಕ್‌ ಲೈಟ್‌ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.ಇದನ್ನೂ ಓದಿ:Gowri: ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ‌ ಚಂದು ಗೌಡ ವಿಲನ್

ashok selvan 3

ಚಿತ್ರರಂಗದ ಗಣ್ಯರಿಗೆ, ಆಪ್ತರಿಗಾಗಿ ಸೆ.16ರಂದು ಚೆನ್ನೈನಲ್ಲಿ ಅಶೋಕ್ ಸೆಲ್ವನ್ ದಂಪತಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಅಶೋಕ್ ಸೆಲ್ವನ್ 2013ರಲ್ಲಿ ‘ಸೂಧುಕುವ್ವಂ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ ಅಶೋಕ್, ಕಳೆದ ವರ್ಷ ಸಾಲು ಸಾಲು 7 ಸಿನಿಮಾಗಳು ರಿಲೀಸ್ ಆಗಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article