ಇತ್ತೀಚೆಗೆ ದುಬೈ (Dubai) ಯಲ್ಲಿ ನಡೆದ ಆಟಿದೊಂಜಿ ದಿನ ಸಮಾರಂಭದಲ್ಲಿ ‘ಕುದ್ರು’ (Kudru) ಸಿನಿಮಾ ಹಾಡುಗಳ ವಿಡಿಯೋ (Song Release) ರಿಲೀಸ್ ಮಾಡಲಾಯಿತು. ಕತೆಗಾರ, ನಿರ್ದೇಶಕ ಹಾಗೂ ನಿರ್ಮಾಪಕರಾದ ಭಾಸ್ಕರ್ ನಾಯ್ಕ್ (Bhaskar Naik), ನಾಯಕ ನಟ ಹರ್ಷಿತ್ ಶೆಟ್ಟಿ (Harshit Shetty) ನಾಯಕಿರಾದ ಪ್ರಿಯಾ ಹೆಗ್ಡೆ, ಡೈನ ಡಿಸೋಜ ಸಮಾರಂಭದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಸಂಧ್ಯಾ ಪ್ರಸಾದ್ ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.
ದಕ್ಷಿಣ ಕನ್ನಡದ ಸಂಸ್ಕೃತಿಯನ್ನು UAE ಯಲ್ಲಿ ಎತ್ತಿ ಬಿಂಬಿಸುವ ಹಬ್ಬದಾಚರಣೆ (ಆಟಿದೊಂಜಿ ದಿನ) ಎಲ್ಲರ ಮನ ಗೆದ್ದಿತು. ಈ ಸಮಾರಂಭದಲ್ಲಿ ಕುದ್ರು ಸಿನಿಮಾದ ಟೈಟಲ್ ಸಾಂಗ್ ಹಾಗೂ ಫೇರ್ವೆಲ್ ಪಾರ್ಟಿ ಸಾಂಗ್ ಬಿಡುಗಡೆ ಮಾಡಲಾಯಿತು. ನಮ್ರಿತ ಮಲ್ಲ ಈ ಹಾಡುಗಳಿಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್
ಕುದ್ರು ಚಿತ್ರದಲ್ಲಿ ದಕ್ಷಿಣ ಕನ್ನಡದ ಸುಂದರ ತಾಣಗಳನ್ನು ಹಾಗೂ ಕೋಲ, ಕಂಬಳ, ಯಕ್ಷಗಾನ ದಂತಹ ಕಲೆಗಳನ್ನು ಪರಿಚಯ ಮಾಡಿಸಿದ್ದಾರೆ ನಿರ್ದೇಶಕ ಭಾಸ್ಕರ್ ನಾಯ್ಕ್. ಸಿನೆಮಾ ಬಗ್ಗೆ ಮಾತನಾಡಿ ನಿರ್ದೇಶಕರು, ಕುದ್ರು ಒಂದು ಸಮಾಜಕ್ಕೆ ಒಳ್ಳೆಯ ನುಡಿ ಕೊಡುವ ಸಿನಿಮಾ, ಆಯಿಲ್ ರಿಗ್ ನಲ್ಲಿ ಶೂಟ್ ಮಾಡಿದ ಮೊದಲ ಭಾರತೀಯ ಸಿನಿಮಾ ಕುದ್ರು”ಎನ್ನುವ ಮೂಲಕ UAE ಜನರಿಗೆ ಇನ್ನೂ ಕುತೂಹಲ ಮೂಡಿಸಿದರು.
ಹರ್ಷಿತ್ ಶೆಟ್ಟಿ, ಪ್ರಿಯ ಹೆಗ್ಡೆ ಹಾಗೂ ಡೈನ ಡಿಸೋಜಾ ಮಾತನಾಡಿ ತಮ್ಮ ಪರಿಚಯದೊಂದಿಗೆ ಸಿನಿಮಾ ಕುರಿತಾದ ಅನುಭವ ಹಂಚಿಕೊಂಡರು. ಸ್ಥಳೀಯ ಉದ್ಯಮಿ ಮತ್ತು ಪ್ರಖ್ಯಾತ ಕಾರ್ಯ ನಿರ್ವಾಹಕ ರೊನಾಲ್ಡ್ ಒಲಿವೆರಾ ಸಮಾರಂಭದ ನಿರ್ವಾಹಣೆ ಮಾಡಿದ್ದರು. ಪ್ರವೀಣ್ ಶೆಟ್ಟಿ, ಉದ್ಯಮಿಗಳಾದ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಹಾಗೂ ಜೋಸೆಫ್ ಮತಾಯಸ್ ಹಾಡುಗಳನ್ನು ಬಿಡುಗಡೆ ಮಾಡಿದರು. ಗುರೂಜಿ ಹರೀಶ್, ಸುಹೈಲ್ ಕುದ್ರೋಳಿ, ಶೋಧನ್ ಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]