ಹುಬ್ಬಳ್ಳಿ: ವಿದ್ಯುತ್ ಬಿಲ್ ನೀಡಲು ತೆರಳಿದ್ದ ಹೆಸ್ಕಾಂ (HESCOM )ನೌಕರನ ಕೊಲೆಗೆ ಯತ್ನಿಸಿದ ಘಟನೆ ಮಹಾಲಕ್ಷ್ಮಿ ಬಡವಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಎಂಬಾತನನನ್ನು ಪೊಲೀಸರು (Police) ಬಂಧಿಸಿದ್ದಾರೆ.
ಆರೋಪಿ ಅಬ್ದುಲ್ ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಈ ತಿಂಗಳ ಬಿಲ್ 5 ಸಾವಿರ ರೂ.ಗಿಂತ ಜಾಸ್ತಿ ಬಂದಿದೆ. ಅಲ್ಲದೇ ವಿದ್ಯುತ್ ಬಳಕೆ 200 ಯೂನಿಟ್‍ಗಿಂತ ಹೆಚ್ಚು ಬಳಕೆ ಮಾಡಿದ್ದ ಹಿನ್ನೆಲೆ ಗೃಹ ಜ್ಯೋತಿ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ಕೋಪಗೊಂಡ ಅಬ್ದುಲ್ ಬಿಲ್ ನೀಡಲು ಹೋದ ಮಲ್ಲಯ್ಯ ಗಣಾಚಾರಿ ಎಂಬ ನೌಕರನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಬಹುದು ಆದರೆ ಫಸ್ಟ್ ಬೆಂಚ್ ಸಿಗಲ್ಲ: ಪರಮೇಶ್ವರ್
ಬಳಿಕ ಸ್ಥಳೀಯರು ನೌಕರ ಮಲ್ಲಯ್ಯನನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿರುವ ಮಲ್ಲಯ್ಯನಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಅಶೋಕನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನೆಹರೂ ಸ್ಮಾರಕ ಇನ್ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ – ಕೇಂದ್ರದಿಂದ ಹೆಸರು ಮರುನಾಮಕರಣ
Web Stories