ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆಶಿ ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ: ಸಿ.ಟಿ ರವಿ

Public TV
2 Min Read
CT Ravi

ಚಿಕ್ಕಮಗಳೂರು: ನನ್ನ ಜೀವನದಲ್ಲೇ ಒಮ್ಮೆಯೂ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆ ಶಿವಕುಮಾರ್ (DK Shivakumar) ಅವರು ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು (Chikkamagaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ತಮ್ಮ ಸರ್ಕಾರ ಪ್ರಮಾಣಿಕ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭಾ ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ, ರಾಷ್ಟ್ರ ಸಮಿತಿಯವರು ತೀರ್ಮಾನ ಮಾಡ್ತಾರೆ: ಈಶ್ವರಪ್ಪ

dk shivakumar 1 1

ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ ಅನ್ನುವುದು ನಮ್ಮ ಆರೋಪವಲ್ಲ. ಬಿಬಿಎಂಪಿ ಗುತ್ತಿಗೆದಾರರ ಸಂಘದ (BBMP Contractors Union) ಆರೋಪ. ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಭಕ್ತಿ ಇರುವುದರಿಂದ ಅಲ್ಲಿಗೆ ಕರೆದಿದ್ದಾರೆ. ನಾವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ? ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರರ ಬಳಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮೊದಲು ಹಳೇಯದ್ದಕ್ಕೆಲ್ಲಾ ಸೇರಿಸಿ 7% ಫಿಕ್ಸ್ ಮಾಡಿದ್ರು, ಮದ್ಯವರ್ತಿಗಳು 10% ಅಂದ್ರು ಆಮೇಲೆ ಚರ್ಚೆ ಮಾಡಿ 15% ಆದ್ರೆ ಮಾತ್ರ ಕ್ಲಿಯರ್ ಅಂತಾ ಹೇಳಿದ್ದಾರೆ. ಆರೋಪ ಗುತ್ತಿಗೆದಾರರ ಸಂಘದ್ದು, ಸುಳ್ಳು ಅನ್ನೊದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಸತ್ಯ ಮಾಡಲಿ. ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ರೆ ಸಾಕು, ಬೇರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮುಂದುವರಿದು.. ಕಾಂಗ್ರೆಸ್‌ನ ಬಹುತೇಕ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆ ಅಂತ ಬಹಿರಂಗವಾಗಿ ಹೇಳ್ತಿದ್ದಾರೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತೀನಾ? ನಾನೇನು ಧರ್ಮರಾಯನಾ? ಖರ್ಚು ಮಾಡಿರೋದು ವಸೂಲಿ ಆಗಬೇಕು, ಇಲ್ಲ ಅಂದ್ರೆ ಹೆಂಡ್ರು ಮಕ್ಕಳನ್ನ ಬೀದಿಯಲ್ಲಿ ನಿಲ್ಲಿಸ್ಲಾ? ಅಂತಿದ್ದಾರೆ. ಒಟ್ಟಿನಲ್ಲಿ ಕರಪ್ಷನ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಓದಿದ್ದು 9ನೇ ಕ್ಲಾಸ್, ಮಾಡ್ತಿದ್ದು ಎಂಜಿನಿಯರ್ ಕೆಲಸ- ಡಿಗ್ರೂಪ್ ನೌಕರನಿಂದ ಕ್ವಾಲಿಟಿ ಚೆಕ್ಕಿಂಗ್

90% ಹಗರಣ ಆಗಿದ್ದು ಕಾಂಗ್ರೆಸ್‌ ಅವಧಿಯಲ್ಲೇ: ದೇಶ-ರಾಜ್ಯದ ಹಗರಣಗಳನ್ನ ಪಟ್ಟಿ ಮಾಡಿದ್ರೆ 90% ಕಾಂಗ್ರೆಸ್ ಅವಧಿಯಲ್ಲೇ ಆಗಿದೆ. 90% ಅಪರಾಧಿ ಸ್ಥಾನದಲ್ಲಿ ಇರೋರು ಕಾಂಗ್ರೆಸ್ ಸಚಿವರು, ಆ ಕಾಲದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಮುಕವಾಗಿದೆ ಅನ್ನೋದನ್ನ ಯಾರೂ ನಂಬಲ್ಲ. ಏಕೆಂದರೆ ಭ್ರಷ್ಟಾಚಾರದ ಮತ್ತೊಂದು ಮುಖವೇ ಕಾಂಗ್ರೆಸ್. ಅವರು ಯಾವುದೇ ಪ್ರಾಮಾಣಿಕತೆಯ ಸೋಗು ಹಾಕಿದರೂ, ಭ್ರಷ್ಟಾಚಾರದ ವಾಸನೆ ಇರುತ್ತೆ. 40%, 15% ಆಗಿದೆ ಅಂದ್ರೆ ಕಡಿಮೆ ಆಯ್ತು ಅಂತ ಒಪ್ಪಿಕೊಂಡಂತೆ ಎಂದು ಸಿಎಂ ಹೇಳಿಕೆ ಗಮನಿಸಿದ್ದೇನೆ. ಅದಲ್ಲ, ನೀವು ಕೇಳುತ್ತಿರುವ 15% ಹಳೆಯದ್ದಕ್ಕೆ, ಹೊಸದು 50% ದಾಟಬಹುದು ಎಂದು ತಿರುಗೇಟು ನೀಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article