Korea Open 2023: ಕೊರಿಯಾ ಓಪನ್ಸ್‌ ಗೆದ್ದ ಭಾರತದ ಸಾತ್ವಿಕ್‌-ಚಿರಾಗ್‌ ಜೋಡಿ – ಒಂದೇ ವರ್ಷದಲ್ಲಿ 3 ಬಾರಿ ಚಾಂಪಿಯನ್ಸ್‌

Public TV
2 Min Read
KoreaOpen2023

ಜಕಾರ್ತ: ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಪ್ಲೇಯರ್ಸ್‌ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್‌ ಶೆಟ್ಟಿ (Chirag Shetty) ಜೋಡಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಕಳೆದ ತಿಂಗಳಷ್ಟೇ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಸೂಪರ್‌-1000 (Indonesia Open 2023) ಈವೆಂಟ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಈ ಜೋಡಿ ಇದೇ ಮೊದಲಬಾರಿಗೆ ಪ್ರತಿಷ್ಠಿತ ಕೊರಿಯ ಓಪನ್-500 (Korea Open 2023) ಪ್ರಶಸ್ತಿ ಗೆದ್ದುಕೊಂಡು, ಸಾಧನೆ ಮಾಡಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲೇ ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ (BWF) ವಿಶ್ವಟೂರ್‌ ಗೆದ್ದ ವಿಶೇಷ ಸಾಧನೆಯನ್ನೂ ಈ ಜೋಡಿ ಮಾಡಿದೆ. ಇದನ್ನೂ ಓದಿ: Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

Satwiksairaj Rankireddy

ಭಾನುವಾರ (ಜು.23) ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾ ಜೋಡಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊಗೆ ಜೋಡಿಯನ್ನು ಬಗ್ಗು ಬಡಿದು ಸಾತ್ವಿಕ್‌-ಚಿರಾಗ್‌ ಜೋಡಿ ಪ್ರಶಸ್ತಿಗೆ ಮುತ್ತಿಟ್ಟಿದೆ. ಭರ್ಜರಿ ಪ್ರದರ್ಶನ ನೀಡಿದ್ದ ಸಾತ್ವಿಕ್‌-ಚಿರಾಗ್‌ ಎದುರಾಳಿಗಳನ್ನ 17-21, 21-13, 21-14 ಅಂತರದಲ್ಲಿ ಸೋಲಿಸಿದ್ದಾರೆ. ಆರಂಭದಲ್ಲಿ ಆರಂಭಿಕ ಗೇಮ್ಸ್‌ನಲ್ಲಿ 17-21 ಅಂತರದಲ್ಲಿ ಸೋತರೂ, ಮುಂದಿನ ಹಂತಗಳಲ್ಲಿ ಉತ್ತಮ ಕಂಬ್ಯಾಕ್‌ ಮಾಡುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

Indonesia Open Men

ಮೊದಲ ಹಂತದಲ್ಲಿ 17-21 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತದ ಜೋಡಿ ಸೋಲುವುದು ಪಕ್ಕಾ ಎಂದು ಹೇಳಲಾಗಿತ್ತು. ಆದ್ರೆ 2-3ನೇ ರೌಂಡ್ಸ್‌ನಲ್ಲಿ ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

ಸಾತ್ವಿಕ್‌ ಮತ್ತು ಚಿರಾಗ್ ಶೆಟ್ಟಿ ಜೋಡಿ, ಇದೇ ವರ್ಷ ಇಂಡೋನೇಷ್ಯಾ ಸೂಪರ್‌ 1000 ಹಾಗೂ ಸ್ವಿಸ್‌ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೀಗ ತಮ್ಮ ಅನುಭವದ ಆಟಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡಿ ಕೊರಿಯಾ ಓಪನ್​ ಟೂರ್ನಿಯನ್ನು ಗೆದ್ದು ವರ್ಷದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಇದರೊಂದಿಗೆ 2024ಕ್ಕೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

Web Stories

Share This Article