ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ‘ಜಿಂಕೆ ಮರಿ’ ನಂದಿತಾ ಶ್ವೇತಾ

Public TV
2 Min Read
nanditha shwetha

‘ನಂದ ಲವ್ಸ್ ನಂದಿತಾ’ (Nanda Loves Nanditha) ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಿತರಾದ ನಂದಿತಾ ಶ್ವೇತಾ (Nandita Swetha) ಅವರು ಮೊದಲ ಸಿನಿಮಾದಲ್ಲೇ ಬೆಸ್ಟ್ ನಟಿಯಾಗಿ ಅಭಿಮಾನಿಗಳ ಗಮನ ಸೆಳೆದರು. ಈಗ ತಮಿಳು- ತೆಲುಗು ಸಿನಿಮಾ ರಂಗದಲ್ಲಿ ಅವರು ಆಕ್ಟೀವ್ ಆಗಿದ್ದಾರೆ. ಹಿಡಿಂಬಾ ಸಿನಿಮಾ ಪ್ರಚಾರದಲ್ಲಿ ನಟಿ, ತಾವು ವಿಚಿತ್ರ ಕಾಯಿಲೆಯಿಂದ ಬಳಲುತ್ತಿರೋದಾಗಿ ಹೇಳಿದ್ದಾರೆ.

nanditha shwetha

ಲೂಸ್ ಮಾದ ಯೋಗಿಗೆ(Loose Mada Yogi)  ಜೋಡಿಯಾಗಿ ‘ನೀ ಜಿಂಕೆ ಮರಿ ನಾ’ (Nee Jinke Mari Na) ಎಂದು ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಸಾಂಗ್ ಅದೆಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿತ್ತು ಎಂದರೆ ಜಿಂಕೆ ಮರಿ ನಂದಿತಾ ಎಂದೇ ನಟಿ ಶ್ವೇತಾ ಹೈಲೆಟ್ ಆಗಿದ್ದರು. ಈ ಚಿತ್ರದ ಬಳಿಕ ತಮ್ಮ ಹೆಸರನ್ನ ನಂದಿತಾ ಶ್ವೇತಾ ಅಂತಾ ಬದಲಾಯಿಸಿಕೊಂಡರು. ತಮಿಳು ಮತ್ತು ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನ ತಮ್ಮದಾಗಿಸಿಕೊಂಡರು. ಹಿಟ್ ಚಿತ್ರಗಳನ್ನ ನೀಡಿದರು. ಇದನ್ನೂ ಓದಿ:ಗಂಡನಿಂದ ಮಾತ್ರವಲ್ಲ, ಡ್ರೈವರ್ ನಿಂದಲೂ ನಟಿ ರಾಖಿಗೆ ಮೋಸ : ಕಣ್ಣೀರಿಟ್ಟ ನಟಿ

nanditha shwetha 1

ಈ ನಡುವೆಯೇ ನಟಿ ಶಾಕಿಂಗ್ ಸುದ್ದಿಯೊಂದನ್ನ ರಿವೀಲ್ ಮಾಡಿದ್ದಾರೆ. ಸದ್ಯ ನಂದಿತಾ ಅವರು ‘ಹಿಡಿಂಬಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ತಾವು ವಿಚಿತ್ರ ಕಾಯಿಲೆಯಿಂದ ಬಳಲುತ್ತಿರೋದಾಗಿ ಹೇಳಿದ್ದಾರೆ. ನಟಿ ನಂದಿತಾ ಶ್ವೇತಾ ಅವರು ತಮ್ಮ ‘ಹಿಡಿಂಬಾ’ (Hidimba) ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕಾಗಿ ಸಖತ್ ವರ್ಕೌಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುವ ಅನಿವಾರ್ಯತೆ ಇದ್ದ ಹಿನ್ನೆಲೆಯಲ್ಲಿ ತುಂಬಾ ಕಷ್ಟಪಟ್ಟುದುದಾಗಿ ಹೇಳಿದ್ದಾರೆ.

nanditha shwetha 2

ನಾನು ಫೈಬ್ರೊಮ್ಯಾಲ್ಗಿಯಾ ಎಂಬ ಸ್ನಾಯು ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆ. ಇದರಿಂದಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿರುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಸ್ನಾಯುಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾಗಿರುವ ನಟಿ, ತಾವು ಈ ರಹಸ್ಯ ವಿಷಯವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಫೈಬ್ರೊಮ್ಯಾಲ್ಗಿಯಾ (Fibromyalgia)   ಎಂಬುದು ಸ್ನಾಯುಗಳ ಸಮಸ್ಯೆಯ ಕಾಯಿಲೆಯಾಗಿದ್ದು, ಇದರಿಂದ ಬಳಲುತ್ತಿರುವ ವ್ಯಕ್ತಿಯ ದೇಹದ ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟು ಮಾಡುತ್ತದೆ. ಇದರಿಂದ ತೀವ್ರವಾಗಿ ಬಲು ಬೇಗನೆ ಆಯಾಸವಾಗುತ್ತದೆ. ಅಷ್ಟೇ ಅಲ್ಲದೇ, ನೆನಪಿನ ಶಕ್ತಿ ಕುಂದಿ ಮಾನಸಿಕ ರೋಗ ಲಕ್ಷಣಗಳನ್ನು ಉಂಟು ಮಾಡಬಹುದು ಎಂದು ನಟಿ ಹೇಳಿಕೊಂಡಿದ್ದಾರೆ. ಆದರೆ ‘ಹಿಡಿಂಬಿ’ ಚಿತ್ರಕ್ಕಾಗಿ ಇದನ್ನೆಲ್ಲಾ ಮೀರಿ ಕಸರತ್ತು ಮಾಡಿದ್ದೇನೆ. ನಿದ್ದೆಯಿಲ್ಲದೆ ದುಡಿದಿದ್ದೇನೆ. ಚಿತ್ರಕ್ಕಾಗಿ ಇಷ್ಟೆಲ್ಲ ಸಹಿಸಿಕೊಂಡು ತೂಕ ಇಳಿಸಿಕೊಂಡೆ ಎಂದಿದ್ದಾರೆ.

ಅಂದಹಾಗೆ, ಹಿಡಿಂಬಿ ಸಿನಿಮಾ ಇದೇ ಜುಲೈ 20ಕ್ಕೆ ತೆರೆಗೆ ಬರುತ್ತಿದೆ. ಎಂದೂ ಮಾಡಿರದ ರೋಲ್‌ನಲ್ಲಿ ಕನ್ನಡತಿ ನಂದಿತಾ ಶ್ವೇತಾ ಕಾಣಿಸಿಕೊಳ್ತಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

Share This Article