ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ? – ಸದನದಲ್ಲಿ ಸ್ವಾರಸ್ಯಕರ ಚರ್ಚೆ

Public TV
1 Min Read
HD Kumaraswamy 2

ಬೆಂಗಳೂರು: ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ (HD Kumaraswamy) ಆಗುತ್ತಾರೆ ಎಂಬ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ.

GT Devegowda Laxman Savadi

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಹಾಸ್ಯ ಜೋರಾಗಿತ್ತು. ಯಡಿಯೂರಪ್ಪ ಅವರನ್ನು ಏಕೆ ಸಿಎಂ ಸ್ಥಾನದಿಂದ ಇಳಿಸಿದ್ರು, ಕಾರಣ ಗೊತ್ತಾಗಿಲ್ಲ, ಲಕ್ಷ್ಮಣ್ ಸವದಿ ನೀವು ಅಲ್ಲಿಯೇ ಇದ್ರಲ್ಲಾ ನಿಮಗೆ ಗೊತ್ತಾ? ಈಗ ವಿರೋಧ ಪಕ್ಷದ ನಾಯಕನೂ ಇಲ್ಲ ಎಂದು ಶಾಸಕ ಜಿಟಿ ದೇವೇಗೌಡ (GT Devegowda) ಪ್ರಶ್ನೆ ಮಾಡಿದ್ರು.

ತಕ್ಷಣವೇ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ತಿರುಗೇಟು ನೀಡಿ, ಯಡಿಯೂರಪ್ಪ ಅವರನ್ನು ಏಕೆ ಕೆಳಗೆ ಇಳಿಸಿದರು ಎನ್ನೋದು ನಮಗಿಂತ ಚೆನ್ನಾಗಿ ನಿನಗೆ ಗೊತ್ತಿದೆ, ನೀನು ಹೇಳ್ತಿಲ್ಲ. ಆದರೆ ನನಗೆ ಅಲ್ಲಿನ (BJP) ಮೇಲಿನವರ ಸಂಪರ್ಕ ಇದೆ. ವಿರೋಧ ಪಕ್ಷದ ನಾಯಕ ಸ್ಥಾನ ನಿಮ್ಮ ಮನೆ ಬಾಗಿಲಿಗೆ ಬರುವ ಸಾಧ್ಯತೆ ಇದೆ ಎಂದರು. ಇದನ್ನೂ ಓದಿ: ಇಂಗ್ಲಿಷ್ ಇರೋದೇ ತಪ್ಪು ಮಾತಾಡೋಕೆ, ಕನ್ನಡ ಇರೋದು ಸರಿಯಾಗಿ ಮಾತನಾಡಲು: ಪ್ರದೀಪ್ ಈಶ್ವರ್

ಬಿಜೆಪಿಯೊಳಗೆ ಇಲ್ಲಿ ಕಚ್ಚಾಡ್ತಿದ್ದಾರೆ. ನೋಡ್ತಾ ಇರಿ, ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ, ಲೋಕಸಭೆಗೆ ಎಲ್ಲ ರೆಡಿ ಆಗ್ತಿದೆ ಎಂದು ಸವದಿ ವ್ಯಂಗ್ಯವಾಗಿ ಚಾಟಿ ಬೀಸಿದರು. ಆಗ ಸದನ ನಗೆಗಡಲಲ್ಲಿ ತೇಲಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಸಿನಿಮಾ ಟಿಕೆಟ್ ಬೆಲೆ ಇಳಿಸಿ: ಸಿಎಂಗೆ ಫಿಲ್ಮ್ ಚೇಂಬರ್ ಮನವಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article