ಮುಂಬೈ: ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಸಿಮ್ ಅಜ್ಮಿ (Abu Asim Azmi) ಗೆ ಫೊನ್ ಮೂಲಕ ಕೊಲೆ ಬೆದರಿಕೆಯೊಂದು ಬಂದಿದೆ.
ಮುಂಬೈನ ಮಂಖುರ್ದ್ ಶಿವಾಜಿ ನಗರ ಕ್ಷೇತ್ರದ ಶಾಸಕನಿಗೆ ವಾಟ್ಸಪ್ (Whatsapp) ನಲ್ಲಿ ಬೆದರಿಕೆ ಬಂದಿದೆ. ವಾಟ್ಸಪ್ ಬಂದಿರುವ ಅಬು ಫೋಟೋ ಮೇಲೆ ಬಂದೂಕು ಹಾಗೂ ರಕ್ತದ ಕಲೆಯುಳ್ಳ ಚಾಕುವನ್ನು ತೋರಿಸಲಾಗಿದೆ. ಅಲ್ಲದೆ ಮೂರು ದಿನಗಳವರೆಗೆ ಸಮಯವಿದೆ ಎಂದು ಎಚ್ಚರಿಕೆಯ ಮೆಸೇಜ್ ಕೂಡ ರವಾನಿಲಾಗಿದೆ.
- Advertisement
ಈ ಬಗ್ಗೆ ಅನು ತಮಗೆ ಬಂದಿರುವ ವಾಟ್ಸಪ್ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವ್ಯಕ್ತಿಯೊಬ್ಬ ನನ್ನ ಪರ್ಸನಲ್ ನಂಬರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೂರು ದಿನಗಳಲ್ಲಿ ನಿನ್ನ ಕೊಲೆಯಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
- Advertisement
ये महाशय मेरे निजी फ़ोन नंबर पर कॉल और Whatsapp के माध्यम से मुझे 3 दिन का टारगेट टाइम या जान से मारने की धमकी दी है। यह मामला कोलाबा पुलिस स्टेशन को सूचित किया जा चूका है। मुख्य मंत्री श्री एकनाथ शिंदे जी (@mieknathshinde), उपमुख्यमंत्री श्री देवेंद्र फडणवीस जी (@Dev_Fadnavis),… pic.twitter.com/0BzIbAZvYo
— Abu Asim Azmi (@abuasimazmi) June 26, 2023
ಅಲ್ಲದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್, ಮುಂಬೈ ಪೊಲೀಸರೇ ದಯವಿಟ್ಟು ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಅಬು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ
ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಬೆಂಬಲಿಸಿ ನೀಡಿದ ಹೇಳಿಕೆಗಳಿಗಾಗಿ ಈ ವರ್ಷ ಜನವರಿಯಲ್ಲಿಯೂ ನಾಯಕನಿಗೆ ಕೊಲೆ ಬೆದರಿಕೆಗಳು ಬಂದವು. ಅಂದು ಕೂಡ ಅವರ ಆಪ್ತ ಸಹಾಯಕನಿಗೆ ಕರೆ ಮಾಡಲಾಗಿತ್ತು.