ನಕ್ಸಲೈಟ್ ಕುರಿತಾದ ಸಿನಿಮಾ ಕೈಗೆತ್ತಿಕೊಂಡ ‘ದಿ ಕೇರಳ ಸ್ಟೋರಿ’ ಡೈರೆಕ್ಟರ್

Public TV
2 Min Read
Sudipto Sen 2

ತ್ತೀಚೆಗಷ್ಟೇ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಿರ್ದೇಶಕ ಸುದೀಪ್ತೊ ಸೇನ್ (Sudipto Sen) ಮತ್ತೊಂದು ಸಿನಿಮಾ ಘೋಷಣೆ (New Movie) ಮಾಡಿದ್ದರು. ಆ ಚಿತ್ರಕ್ಕೆ ಬಸ್ತರ್ ಎಂದೂ ಹೆಸರಿಟ್ಟಿದ್ದರು.  ಈ ಕುರಿತು ಸ್ವತಃ ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದರು. ಆದರೆ, ಈ ಸಿನಿಮಾ ಯಾವುದರ ಕುರಿತು ಎನ್ನುವ ಮಾಹಿತಿ ಸಿಕ್ಕಿರಲಿಲ್ಲ.

the kerala story

ನಿರ್ದೇಶಕರು ಆಪ್ತರು ಹೇಳುವಂತೆ ಇದೊಂದು ನಕ್ಸಲೈಟ್ ಕುರಿತಾದ ಸಿನಿಮಾವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಧ್ವಜವನ್ನು ಹಾಕಲಾಗಿದೆ. ಅಲ್ಲದೇ, ನಕ್ಸಲೈಟ್ ಸಿನಿಮಾ ಎನ್ನುವ ಕುರಿತು ಹಲವು ಕುರುಹುಗಳನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ನಕ್ಸಲೈಟ್ ಕುರಿತಾದ ಸಿನಿಮಾ ಇದಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

The Kerala Story 4

ಈಗಾಗಲೇ ಬಸ್ತರ್ (Bastar)  ಸಿನಿಮಾದ ಕೆಲಸಗಳು ಸದ್ದಿಲ್ಲದೇ ಶುರುವಾಗಿವೆ ಎಂದು ಹೇಳಲಾಗಿದ್ದು, ಏಪ್ರಿಲ್ 5, 2024ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದೆ ಚಿತ್ರತಂಡ. ಇದು ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ನಿರ್ದೇಶಕರು ಈ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳಬಹುದು ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

THE KERALA STORY 4

ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು.

 

ಈಗ ಹೊಸದಾಗಿ ತಯಾರಿಸಲು ಹೊರಟಿರುವ ಬಸ್ತರ್ ಸಿನಿಮಾ ಕೂಡ ಮತ್ತೊಂದು ಕಾರಳ ಮುಖವನ್ನು ಬಿಚ್ಚಿಡಲಿದೆ ಎಂದು ಹೇಳಲಾಗುತ್ತಿದೆ. ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಪೋಸ್ಟರ್ ನಲ್ಲಿಯೇ ಚಿತ್ರತಂಡ ತಿಳಿಸಿದೆ. ಹಾಗಾಗಿ ಯಾವ ಕಥೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

 

Share This Article