ಸುಶಾಂತ್ ಸಾವಿನ ಬಳಿಕ ನನಗೆ ‘ಗೋಲ್ಡ್ ಡಿಗ್ಗರ್’ ಎಂದರು : ಕಣ್ಣೀರಿಟ್ಟ ರಿಯಾ

Public TV
1 Min Read
rhea chakraborty 2

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ (Rhea Chakraborty) ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಸುಶಾಂತ್ ಸಿಂಗ್ ನನ್ನು ಪ್ರೀತಿಸುತ್ತಿದ್ದರು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವರು ಪಡಬಾರದ ಕಷ್ಟ ಪಟ್ಟರಂತೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಹಲವಾರು ವಿಚಾರಗಳನ್ನು ರಿಯಾ ಹಂಚಿಕೊಂಡಿದ್ದಾರೆ.

rhea chakraborty 1

ಮೂರು ವರ್ಷಗಳ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ತಮ್ಮದೇ ಅಪಾರ್ಟ್ ಮೆಂಟ್ ವೊಂದರಲ್ಲಿ ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಈ ಸಾವಿಗೆ ಪ್ರೇಮದ ವೈಫಲ್ಯವೇ ಕಾರಣ ಎಂದು ಹೇಳಲಾಗಿತ್ತು. ಸುಶಾಂತ್ ಸಿಂಗ್ ಅವರನ್ನು ಪ್ರೀತಿಸುತ್ತಿದ್ದ ರಿಯಾ ಕೈಕೊಟ್ಟು ಓಡಿ ಹೋದರು. ಈ ಸಂಕಟವನ್ನು ತಾಳಲಾರದೇ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಸುಶಾಂತ್ ಸಾವಿಗೆ ರಿಯಾ ಕಾರಣ ಎಂದು ಆರೋಪಿಸಲಾಯಿತು. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

rhea chakraborty 3

ಸ್ವತಃ ಸುಶಾಂತ್ ಪೋಷಕರು ರಿಯಾ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಜೈಲಿಗೂ ಹೋಗಿ ಬರಬೇಕಾಯಿತು. ಇವೆಲ್ಲವನ್ನೂ ರಿಯಾ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರು. ಸುಶಾಂತ್ ಸಾವಿಗೆ ನಾನೇ ಕಾರಣ ಎಂದರು. ನಾನು ಏನು ಎನ್ನುವುದು ನನಗೆ ಮತ್ತು ಸುಶಾಂತ್ ಗೆ ಮಾತ್ರ ಗೊತ್ತು. ಈಗಲೂ ಸುಶಾಂತ್ ನನ್ನೊಂದಿಗೆ ಇದ್ದಾರೆ’ ಎಂದು ಭಾವುಕರಾಗಿ ಮಾತನಾಡಿದರು.

ಸುಶಾಂತ್ ಸತ್ತ ಬಳಿಕ ಅವರನ್ನು ಗೋಲ್ಡನ್ ಡಿಗ್ಗರ್ (Golden Digger) ಎಂದು ಮೂದಲಿಸಿದರಂತೆ. ಗೋಲ್ಡನ್ ಡಿಗ್ಗರ್ ಅಂದರೆ ದುಡ್ಡಿಗಾಗಿ ದೇಹ ಹಂಚಿಕೊಳ್ಳುವವಳು ಎಂದರ್ಥ. ಹಣಕ್ಕಾಗಿ ಯಾರು ಪ್ರೇಮದ ನಾಟಕವನ್ನು ಮಾಡುತ್ತಾರೋ ಅವರನ್ನು ಗೋಲ್ಡನ್ ಡಿಗ್ಗರ್ ಎಂದು ಕರೆಯುತ್ತಾರೆ. ಆದರೆ, ರಿಯಾ ಅಂಥವಳು ಅಲ್ಲ ಎಂದು ಹೇಳಿಕೊಂಡಿದ್ದಾರೆ.

 

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

Share This Article