ಟಾಲಿವುಡ್ (Tollywood) ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ‘ಕಾರ್ತಿಕೇಯ 2’ ಚಿತ್ರದ ಸಕ್ಸಸ್ ನಂತರ ‘ಸ್ಪೈ’ ಕೆಲಸ ಶುರು ಮಾಡಿದ್ದಾರೆ. ವಿಭಿನ್ನ ಗೆಟಪ್‌ನಲ್ಲಿ ‘ಸ್ಪೈ’ ಕಥೆ ಹೇಳಲು ನಿಖಿಲ್ ಹೊರಟಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ನಿಖಿಲ್ ನಟನೆಯ ಈ ಚಿತ್ರದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇದನ್ನೂ ಓದಿ:ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ
ನಿಖಿಲ್ ಸಿದ್ದಾರ್ಥ್ ನಟನೆಯ ಬಹುನಿರೀಕ್ಷಿತ ‘ಸ್ಪೈ’ (Spy) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ 29ಕ್ಕೆ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಇದರ ಬೆನ್ನಲ್ಲೇ ‘ಸ್ಪೈ’ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳು, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಚಾರಿ ಪಾತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದು, ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸ್ಪೆಷಲ್ ರೋಲ್‌ನಲ್ಲಿ ‘ಬಾಹುಬಲಿ’ ರಾಣಾ ದಗ್ಗುಭಾಟಿ (Rana Daggubati) ಕೂಡ ಕಾಣಿಸಿಕೊಂಡಿದ್ದಾರೆ. ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.
The Kannada Theatrical Trailer of #SPY is here. https://t.co/0pnhIZg6BP
Diving into the Mystery of Netaji Subhas Chandra Bose and the Secrets behind Indias Independence.
This June 29th in Theatres in Kannada.@actor_nikhil @iswarya.menon @garrybh1988 @tej_uppalapati @anerudhp… pic.twitter.com/qv4VB8lUcc
— Nikhil Siddhartha (@actor_Nikhil) June 24, 2023
ಖ್ಯಾತ ನಿರ್ದೇಶಕ, ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್ ‘ಸ್ಪೈ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್ ರೆಡ್ಡಿ ಇಆ ಎಂಟರ್‌ಟೈನ್‌ಮೆಂಟ್ ಅಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಾಜಶೇಖರ್ ರೆಡ್ಡಿ ನಿರ್ಮಾಣದ ಜೊತೆಗೆ ಕಥೆ ಕೂಡ ಬರೆದಿದ್ದು, ಗ್ಯಾರಿ ಬಿ.ಎಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಕ್ಕಿದೆ. ಇದೇ 29ರಂದು ‘ಸ್ಪೈ’ ಸಿನಿಮಾ ವರ್ಲ್ಡ್ ವೈಡ್ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ.
ಕಳೆದ ವರ್ಷ ‘ಕಾರ್ತಿಕೇಯ 2’ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ನಿಖಿಲ್ ಸಿದ್ಧಾರ್ಥ್, ಅನುಪಮಾ ಪರಮೇಶ್ವರನ್ ನಟನೆಯ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಕಂಡಿತ್ತು. ಈಗ ‘ಸ್ಪೈ’ ನಿಖಿಲ್ ಸಾಥ್ ನೀಡಿದ್ದಾರೆ.