ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದೀನಿ : ಸೋಮಣ್ಣ

Public TV
2 Min Read
v somanna 3

– ರಾಜಕೀಯ ನಿವೃತ್ತಿ ಇಲ್ಲ

ಬೆಂಗಳೂರು: ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದೇನೆ. ಒಳ್ಳೆಯವರನ್ನು ಯಾರೂ ಗುರುತಿಸಲ್ಲ ಎಂದು ಬಿಜೆಪಿ (BJP) ಪರಾಜಿತ ಅಭ್ಯರ್ಥಿ ವಿ. ಸೋಮಣ್ಣ (V Somanna) ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತಗೊಂಡೆ. ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳ್ತು ಅಂತ ಹೋದೆ. ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಪಕ್ಷಕ್ಕೂ ಹಿನ್ನಡೆ ಆಗಿದ್ದು, ನಮಗೆಲ್ಲ ಒಂದು ಎಚ್ಚರಿಕೆ ಗಂಟೆಯಾಗಿದೆ. ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ. ಮಾತಾಡೋದು ಅಗತ್ಯ ಇಲ್ಲ ಸೋತಿದ್ದೀನಿ ಅಷ್ಟೇ. ಜನರ ತೀರ್ಮಾನ ಇದು, ಬದ್ಧರಾಗಬೇಕು ಎಂದು ಹೇಳಿದರು.

bjp flag 3

ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದಿವಲ್ಲ. ಯಡಿಯೂರಪ್ಪ ಹೇಳಿದ್ದಾರಾ ಮೂಲೆಗುಂಪು ಮಾಡಿದ್ದಾರೆ ಅಂತ? ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ? ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ಜಿಲ್ಲೆಯ ಕ್ಷೇತ್ರಗಳ ಚುನಾವಣಾ ಫಲಿತಾಂಶ

ಕಾಂಗ್ರೆಸ್‍ನ (Congress) ಗ್ಯಾರಂಟಿ ಯೋಜನೆಗಳೇ ಅವರ ಗೆಲುವಿಗೆ ಕಾರಣವಾಗಿದೆ. ಈ ದೇಶಕ್ಕೆ ಮೋದಿಯವರು ಪ್ರಶ್ನಾತೀತ ನಾಯಕರು. ಅವರ ಕೆಲಸಗಳು ಅವಿಸ್ಮರಣೀಯವಾಗಿದೆ. ನಾನು ಸೋಲನ್ನು ಒಪ್ಕೋಡಿದ್ದೇನೆ. ವರಿಷ್ಠರು ಕರೆ ಮಾಡಿದ್ದರು ಎಂದರು. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

congress

ರಾಜಕೀಯ ನಿವೃತ್ತಿ ಇಲ್ಲ. ನಾನು ಸಾಯೋತನಕ ಸಕ್ರಿಯ ಆಗಿರ್ತೇನೆ. ನಿವೃತ್ತಿ ಅನ್ನೋ ಪದವೇ ನನಗೆ ಗೊತ್ತಿಲ್ಲ. ನಿವೃತ್ತಿ ಎಷ್ಟು ಜನ ತಗೊಂಡಿದಾರೆ ಹೇಳಿ? ನಿವೃತ್ತಿ ಅನ್ನೋದೆಲ್ಲ ಒಂದು ನಾಟಕ ಎಂದು ಕಿಡಿಕಾರಿದರು. ಇದನ್ನೂ ಓದಿ: ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ. ಹೆಚ್ ಮುನಿಯಪ್ಪ

ಕಾಂಗ್ರೆಸ್‍ನಲ್ಲಿ ಸಿಎಂ ಪೋಸ್ಟ್ ಕಚ್ಚಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷದ ನಿರ್ಧಾರವಾಗಿದೆ. ಡಿಕೆಶಿ ನಮ್ಮ ತಾಲೂಕಿನವರು. ಸಿದ್ದರಾಮಯ್ಯ ಹಿರಿಯ ನಾಯಕ. ಸಿದ್ದರಾಮಯ್ಯ ಈಗಾಗಲೇ ಒಮ್ಮೆ ಸಿಎಂ ಆಗಿದ್ದಾರೆ. ಡಿಕೆಶಿ ಸಿಎಂ ಆಗಬೇಕಾಗಿರೋರು. ಯಾರನ್ನ ಸಿಎಂ ಮಾಡಬೇಕು ಅಂತ ಅವರ ಪಕ್ಷ ನಿರ್ಧರಿಸುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ, ಸಿದ್ದು ನಿವಾಸದ ಮುಂದೆ ಬೆಂಬಲಿಗರಿಂದ ಮುಂದಿನ ಮುಖ್ಯಮಂತ್ರಿ ಫ್ಲೆಕ್ಸ್ ಅಳವಡಿಕೆ

Share This Article